ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಶುಕ್ರವಾರ, 13–1–1995

Last Updated 12 ಜನವರಿ 2020, 19:34 IST
ಅಕ್ಷರ ಗಾತ್ರ

ಭಾರತ–ಅಮೆರಿಕ ರಕ್ಷಣಾ ಒಪ್ಪಂದ

ನವದೆಹಲಿ, ಜ. 12 (ಪಿಟಿಐ): ರಕ್ಷಣಾ ಕ್ಷೇತ್ರದಲ್ಲಿ ನಿಕಟ ಸಂಪರ್ಕ ಇಟ್ಟುಕೊಳ್ಳಲು ಭಾರತ ಮತ್ತು ಅಮೆರಿಕ ನಿರ್ಧರಿಸಿವೆ. ರಕ್ಷಣಾ ಉತ್ಪಾದನೆ, ಹೊಸ ಕ್ಷೇತ್ರಗಳಲ್ಲಿ ಸಂಶೋಧನೆಗೆ ಸಹಕರಿಸುವ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಇಲ್ಲಿ ಸಹಿ ಹಾಕಿವೆ.

ಭಾರತದ ರಕ್ಷಣಾ ಸಚಿವಾಲಯ ಮತ್ತು ಪೆಂಟಗಾನ್ ನಡುವೆ ಆಗಿರುವ ಈ ಒಪ್ಪಂದವು ಎರಡೂ ರಾಷ್ಟ್ರಗಳ ಸೈನಿಕ ಸಂಬಂಧಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಡಲಿದೆ. ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಡಾ. ವಿಲಿಯಂ ಜೆ. ಪೆರಿ ಮತ್ತು ಕೇಂದ್ರ ಗೃಹ ಸಚಿವ ಎಸ್‌.ಬಿ. ಚವಾಣ್ ಒಪ್ಪಂದಕ್ಕೆ ಸಹಿ ಮಾಡಿದರು.

ಚುನಾವಣೆಯಲ್ಲಿ ಬಜೆಟ್ ಪ್ರಭಾವ ತಡೆಗೆ ಕ್ರಮ– ಶೇಷನ್‌

ಮದ್ರಾಸ್‌, ಜ. 12 (ಯುಎನ್‌ಐ, ಪಿಟಿಐ)– ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಹೊಣೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಮಂಡನೆಯಿಂದ ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದರೆ ತಾವು ಸಂವಿಧಾನದ 324ನೇ ಕಲಂನನ್ವಯ ತಮ್ಮ ಅಧಿಕಾರ ಚಲಾಯಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ಮತದಾರರ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಬಜೆಟ್ ಒಳಗೊಂಡಿರದಿದ್ದರೆ ತಾವು ಸುಮ್ಮನಿರುವುದಾಗಿ ಶೇಷನ್ ಹೇಳಿದರು. ಸರ್ಕಾರ ನಿಗದಿತ ದಿನದಂದೇ ಬಜೆಟ್ ಮಂಡಿಸಿದರೆ ಉಗ್ರ ಕ್ರಮ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ, ‘ಇಲ್ಲ ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ ನಾನು ಸುಮ್ಮನಿರಲಾರೆ’ ಎಂದರು.

‘ಬಜೆಟ್‌ ಅನ್ನು ಮತ ಗಳಿಕೆಗೆ ದುರುಪಯೋಗಪಡಿಸಿಕೊಂಡರೆ ಪರಿಣಾಮ ಕೂಡಾ ಅದರ ಬೆನ್ನ ಹಿಂದೆಯೇ ಇರುತ್ತದೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT