ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 4–12–1994

1994
Last Updated 3 ಡಿಸೆಂಬರ್ 2019, 17:09 IST
ಅಕ್ಷರ ಗಾತ್ರ

ಮಹಾರಾಷ್ಟ್ರ, ಬಿಹಾರ ಸೇರಿ ಆರು ರಾಜ್ಯಗಳಲ್ಲಿ ಫೆಬ್ರುವರಿಗೆ ಚುನಾವಣೆ

ಕಲ್ಕತ್ತ, ಡಿ. 3 (ಯುಎನ್ಐ, ಪಿಟಿಐ)– ಮಹಾರಾಷ್ಟ್ರ, ಗುಜರಾತ್, ಬಿಹಾರ, ಒರಿಸ್ಸಾ, ಅರುಣಾಚಲ ಪ್ರದೇಶ ಹಾಗೂ ಮಣಿಪುರ ವಿಧಾನಸಭೆಗಳಿಗೆ ಫೆಬ್ರುವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಅವರು ಇಂದು ಇಲ್ಲಿ ಪ್ರಕಟಿಸಿದರು.

ಒಂದು ದಿನಾವಧಿ ಕಲ್ಕತ್ತ ಭೇಟಿ ಕಾರ್ಯಕ್ರಮದ ಮೇಲೆ ಬೆಳಿಗ್ಗೆ ಇಲ್ಲಿಗೆ ಬಂದ ಅವರು ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಹೆಚ್ಚಿನಂಶ ಜನವರಿ 2ರಂದು ಈ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ಆದರೆ ಈ ಎಲ್ಲ ರಾಜ್ಯಗಳು ಜನವರಿ 15ರೊಳಗೆ ಗುರುತು ಚೀಟಿ ವಿತರಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಅವರು ಷರತ್ತು ಹಾಕಿದರು. ಮಹಾರಾಷ್ಟ್ರ ಈಗಾಗಲೇ ಮತದಾರರಿಗೆ ಗುರುತು ಚೀಟಿ ವಿತರಿಸಿದೆ.

ದಕ್ಷಿಣ ಏಷ್ಯಾ ಅಣ್ವಸ್ತ್ರಮುಕ್ತ ವಲಯಕ್ಕೆ ಚೀನಾ ಒಲವು

ಬೀಜಿಂಗ್, ಡಿ. 3 (ಪಿಟಿಐ)– ದಕ್ಷಿಣ ಏಷ್ಯಾವನ್ನು ಅಣ್ವಸ್ತ್ರಮುಕ್ತ ವಲಯವನ್ನಾಗಿ ಮಾಡಲು ಚೀನಿ ಅಧ್ಯಕ್ಷ ಜಿಯಾಂಗ್ ಜೆಮಿನ್ ಒಲವು ವ್ಯಕ್ತಪಡಿಸಿದ್ದು, ಸಾರ್ಕ್ ಅನ್ನು ಹೆಚ್ಚು ಬಲಗೊಳಿಸುವ ಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅವರು ಚಿನಾಗೆ ಭೇಟಿ ನೀಡಿರುವ ಪಾಕ್ ಅಧ್ಯಕ್ಷ ಫಾರೂಕ್ ಅಹ್ಮದ್ ಖಾನ್‌ ಲೆಘಾರಿ ಅವರೊಂದಿಗೆ ಇಂದು ಮಾತುಕತೆ ನಡೆಸಿದರು.

ದಕ್ಷಿಣ ಏಷ್ಯಾ ದೇಶಗಳ ನೆರೆ ರಾಷ್ಟ್ರವಾಗಿರುವ ಚೀನಾ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಹಾಗೂ ಅಭಿವೃದ್ಧಿಯನ್ನು ಬಯಸುವುದು ಎಂದರು.

ಚೀನಾದ ಚಿನ್ನ ವಿಜೇತರಿಗೆ ಮುಳುವಾದ ಮದ್ದು

ಕುವೈತ್, ಡಿ. 3– ಹಿರೋಶಿಮಾ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ 11 ಮಂದಿ ಚೀನಾದ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ್ದು ಪತ್ತೆಯಾಗಿದ್ದು, ಅವರ ಚಿನ್ನದ ಪದಕಗಳನ್ನು ಹಿಂತೆಗೆದುಕೊಳ್ಳಲು ಏಷ್ಯಾ ಒಲಿಂಪಿಕ್ ಕೌನ್ಸಿಲ್ ಇಂದು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT