ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 3–8–1994

Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮೀಸಲು ಜಾರಿ ತಡೆ: ರಾಜ್ಯದ ವಾಗ್ದಾನಕ್ಕೆ ರಂಗನಾಥ್ ಅಚ್ಚರಿ

ರಾಯಚೂರು, ಆ. 2– ಮೀಸಲು ಪ್ರಮಾಣವನ್ನು ಶೇ 80ಕ್ಕೆ ಏರಿಸುವ ತನ್ನ ನಿರ್ಧಾರವನ್ನು ಜಾರಿಗೆ ತರುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟಿಗೆ ವಾಗ್ದಾನ ನೀಡಿದೆ ಎಂಬ ಸುದ್ದಿಯ ಬಗ್ಗೆ ಅಚ್ಚರಿ ಹಾಗೂ ದಿಗ್ಭ್ರಮೆಯನ್ನು ವೀರಪ್ಪ ಮೊಯಿಲಿ ಸಂಪುಟದ ಹಿರಿಯ ಸಹೋದ್ಯೋಗಿಯೂ ಆಗಿರುವ ಲೋಕೋಪಯೋಗಿ ಖಾತೆಯ ಸಚಿವ ಕೆ.ಎಚ್. ರಂಗನಾಥ್ ಇಂದು ಇಲ್ಲಿ
ವ್ಯಕ್ತಪಡಿಸಿದರು.

‘ನನಗೂ ಈ ವಿಚಾರ ಗೊತ್ತಾಗಿದ್ದು ಇಂದು ಬೆಳಗಿನ ಪತ್ರಿಕೆಗಳನ್ನು ಓದಿದ ಬಳಿಕವೇ. ಸುಪ್ರೀಂ ಕೋರ್ಟಿಗೆ ನಮ್ಮ ವಕೀಲರು ಈ ವಾಗ್ದಾನ ನೀಡಿದ್ದಾರೆಂದರೆ ಅದಕ್ಕೆ ಬಲವತ್ತರವಾದ ಕಾರಣವಿರಬೇಕು. ಅದನ್ನು ತಿಳಿಯದೇ ಹೆಚ್ಚಿಗೆ ಏನನ್ನೂ ನಾನು ಹೇಳ ಬಯಸುವುದಿಲ್ಲ’ ಎಂದೂ ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಶಿವರಾಮ ಕಾರಂತರಿಗೆ‘ವೃಕ್ಷಮಿತ್ರ’ ಪ್ರಶಸ್ತಿ

ನವದೆಹಲಿ ಆ. 2 (ಪಿಟಿಐ)– ಕನ್ನಡದ ಹಿರಿಯ ಸಾಹಿತಿ ಹಾಗೂ ಪರಿಸರವಾದಿ ಡಾ. ಶಿವರಾಮ ಕಾರಂತ ಅವರನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ 1992ನೇ ಸಾಲಿನ ಇಂದಿರಾ ಗಾಂಧಿ‘ವೃಕ್ಷಮಿತ್ರ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT