‘ಮಲೆನಾಡ ಹೆಣ್ಣ.. ಮೈ ಬಣ್ಣ.. ಬಲು ಚೆನ್ನಾ.. ಆ ನಡು ಸಣ್ಣ.. ನಾ ಮನಸೋತೆನೆ ಚಿನ್ನ..’

ಚಿ.ಉದಯ್ ಶಂಕರರ ಈ ಹಾಡು ವಿಯೆಟ್ನಾಂನ ಲಲನಾ ಮಣಿಗಳನ್ನು ಕಂಡಾಗ ನೆನಪಿಗೆ ಬರುತ್ತದೆ. ಅಂದ ಚಂದದಲ್ಲಿ ವಿಯೆಟ್ನಾಂ ಹೆಣ್ಣುಗಳು ವಿಶ್ವಪ್ರಸಿದ್ಧರು.

ವಿಯೆಟ್ನಾಂ ನೀರೆಯರ ಸೊಬಗಿಗೆ ಹಲವು ಕಾರಣಗಳಿವೆ. ಅವರ ಜೀನ್ಸ್ (ಆನುವಂಶಿಕತೆ), ಆಹಾರ, ಜೀವನ ಶೈಲಿ, ಕಷ್ಟ ಸಹಿಷ್ಣುತೆ, ಗಾಂಭೀರ್ಯ, ಕೌಟುಂಬಿಕ ಜವಾಬ್ದಾರಿ ನಿಭಾಯಿಸುವ ಕೌಶಲ, ಎಲ್ಲದರಲ್ಲೂ ಕಂಡುಬರುವ ಧೃತಿಸಂಕಲ್ಪ, ಮನೋದಾರ್ಢ್ಯತೆ, ನಡತೆ, ವ್ಯಕ್ತಿತ್ವ, ಭಾವನೆ, ಆಲೋಚನೆ, ಬುದ್ಧಿವಂತಿಕೆ, ಪ್ರೀತಿ, ಮಮತೆ, ಸ್ನೇಹಭಾವ ಗುಣಗಳು ಎಲ್ಲವೂ ಮೇಳೈಸಿದ ವ್ಯಕ್ತಿತ್ವ ವಿಯೆಟ್ನಾಮಿಣಿಯರದು. ಇವರ ನಾಜೂಕು, ಸುಸಂಸ್ಕೃತಿ, ಮೋಹಕ ಲಾವಣ್ಯ ವರ್ಣನೀಯ.

ವಿಯೆಟ್ನಾಂ ನೀರಜ ನೇತ್ರೆಯರನ್ನು ವಜ್ರಕ್ಕೆ ಹೋಲಿಸುವರು. ವಜ್ರ ಅಮೂಲ್ಯವಷ್ಟೇ ಅಲ್ಲ, ಸುಂದರ ತೇಜ ದೃಢ ಮತ್ತು ಅಂತಃಶಕ್ತಿಯ ರೂಪ. ವಜ್ರ ರೂಪುಗೊಂಡಿರುವುದು ತೀವ್ರ ಒತ್ತಡದಿಂದಾಗಿ. ಅಂತೆಯೇ ವಿಯೆಟ್ನಾಂನ ನಾರಿಯೂ ಕೂಡ.

ವಿಯೆಟ್ನಾಂ ವನಿತೆ ಕಾಯಕಷ್ಟಜೀವಿ, ಪ್ರತಿಭಾ ಸಂಪನ್ನೆ, ಧೈರ್ಯಶಾಲಿ, ತನ್ನ ಕುಟುಂಬಕ್ಕೆ ಅರ್ಪಿತೆ. ಆಕರ್ಷಕ ಸಹಜ ಚೆಲುವೆ ಮತ್ತು ಕೌಂಟುಂಬಿಕ ಆರ್ಥಿಕ ತಜ್ಞೆ. ಪಾಕ ನಿಪುಣೆ ಮತ್ತು ಉತ್ತಮ ಸಂತಾನ ಪೋಷಕಿ.

ವಿಯೆಟ್ನಾಮಿನ ಜವ್ವನೆಯರನ್ನು ಕಂಡಾಗ ಬೇಂದ್ರೆಯವರ ‘ನಾರಿ ನಿನ್ನ ಮಾರಿ ಮ್ಯಾಲ ನಗಿ ನವಿಲು ಕುಣಿಯುತಿತ್ತಾ’ ಕವಿತೆ ತನ್ನಂತೆ ತಾನೇ ಹೃದಯದಿಂದ ತುಟಿಗೆ ಬಂದು ಬಿಡುತ್ತದೆ. ಬೆಳದಿಂಗಳ ಬಾಲೆ ಎಂಬ ಕಲ್ಪನೆಗೆ ಆಕೃತಿ ಮೂಡುತ್ತದೆ. ನಗೆ ಬೆಳದಿಂಗಳನ್ನೇ ಹೊಮ್ಮಿಸುತ್ತಿದ್ದ … ಅತಿಲೋಕ ಸುಂದರಿ ಶ್ರೀದೇವಿ ವಿಯೆಟ್ನಾಂನಲ್ಲಿ ಪ್ರತ್ಯಕ್ಷವಾದಂತೆ ಅನ್ನಿಸುತ್ತದೆ. ಇವರಿಗೆಲ್ಲ ಮೊನಾಲಿಸಾ ತನ್ನ ನಗೆಯನ್ನು ಹಂಚಿದಳೇನೋ ಅನ್ನಿಸುತ್ತದೆ.

ನಮ್ಮ ರಂಭೆ ಊರ್ವಶಿಯರಿಗೆ ವಿಯೆಟ್ನಾಮಿನ ಸಾಂಪ್ರದಾಯಿಕ ಉಡುಪು ತೊಡಿಸಿ, ಇಲ್ಲಿಗೆ ಕರೆತಂದಿರುವರೇ ಅನ್ನಿಸದಿರದು. ಇಲ್ಲಿಯ ಹೆಂಗೆಳೆಯರು ಸಂಪ್ರದಾಯ ಮತ್ತು ಆಧುನಿಕತೆಯಲ್ಲಿ ಸಮನ್ವಯ ಸಾಧಿಸಿರುವುದನ್ನು ಕಂಡಾಗ, ಇದು ಯಾರಿಗಾದರೂ ಮಾದರಿ ಅನ್ನಿಸುತ್ತದೆ.

ವಿಯೆಟ್ನಾಂ ಹೆಣ್ಣುಮಕ್ಕಳ ಬಗ್ಗೆ ತಿಳಿಯಲು ಅವರೆಲ್ಲರ ಪ್ರತಿನಿಧಿಯಂತಿರುವ, ದೇಶಕ್ಕಾಗಿ ತನ್ನ ಪ್ರೀತಿಪಾತ್ರರನ್ನು, ಕುಟುಂಬವನ್ನು ತ್ಯಾಗ ಮಾಡಿದ ಅಸಾಧಾರಣ ಮಹಿಳೆ ನುಯೆನ್ ಥೀ ಬಿನ್ ಕುರಿತು ತಿಳಿಯಬೇಕು. ವಿಯೆಟ್ನಾಂ ಕ್ರಾಂತಿಯ ವೀರೋಚಿತ ನಾಯಕಿ, ಕ್ರಾಂತಿಯ ‘ಕಿಚ್ಚು ಮತ್ತು ಕುಸುಮ’ ಮೇಡಂ ಬಿನ್ .

ಮೇಡಂ ಬಿನ್ :

1968 ರ ನವೆಂಬರ್ 4 ರಂದು ಪ್ಯಾರಿಸ್ ನಲ್ಲಿ ವಿಯೆಟ್ನಾಂ ಕುರಿತ ದೀರ್ಘ ಸಂಧಾನ ನಡೆಯಲು ವಿಶ್ವದ ರಂಗಸ್ಥಳ ಸಜ್ಜಾಗಿತ್ತು. ‘ವಿಯೆಟ್ ಕಾಂಗ್”ಗಳ ಅಧಿಕೃತ ಪ್ರತಿನಿಧಿ ಬೇರೆಯವರಿಗಿಂತ ಮೊದಲೇ ಅಲ್ಲಿ ಹಾಜರಾದರು. ಮಹಾವಿನಯದ ಸುಂದರಿ. ಆಶ್ಚರ್ಯ ಹುಟ್ಟಿಸುವಷ್ಟು ಸೌಂದರ್ಯದ ಖನಿ. ಸಾಂಪ್ರದಾಯಿಕ ವಿಯೆಟ್ನಾಮಿ ಉಡುಪು ‘ಆವೋ ದಾಯಿ’ ಧರಿಸಿದ್ದರು. ಆಕೆ ಯಾವ ಭಾವೋದ್ವೇಗವೂ ಇಲ್ಲದೆ ಶಾಂತವಾಗಿ, ಆದರೆ ಶಕ್ತಿಯುತವಾಗಿ ಮಾತನಾಡಿದರು. ವಿಶ್ವವು ಕಿವಿಗೊಟ್ಟು ಕೇಳಿತು. ಆಕೆಯ ಹೆಸರು ನುಯೆನ್ ಥೀ ಬಿನ್.

ವಿಯೆಟ್ನಾಂನ ಸಮಕಾಲೀನ ಇತಿಹಾಸದಲ್ಲಿ ಹೋ ಚಿ ಮಿನ್ ಗೆ ವಿಶಿಷ್ಟ ಸ್ಥಾನವಿದೆ. ಅಂತೆಯೇ ಅವರೊಂದಿಗೆ ಹೋರಾಟಗಳಲ್ಲಿ ಭಾಗಿಯಾಗಿದ್ದ ವಿಯೆಟ್ನಾಮಿ ಮಹಿಳೆಯೂ ವಿಶ್ವದಲ್ಲಿ ಪ್ರಸಿದ್ಧರು. ನುಯೆನ್ ಥೀ ಬಿನ್ ಹೆಚ್ಚು ಪರಿಚಿತ ಆಗಿರುವುದು ಮೇಡಂ ಬಿನ್ ಎಂದು. ಆಕೆಯ ಕ್ರಾಂತಿಕಾರಿ ಜೀವನವು ಅನನ್ಯವಾದದ್ದು, ಚರಿತ್ರಾರ್ಹವಾದದ್ದು.

ನುಯೆನ್ ಥೀ ಬಿನ್, ಬದುಕು ಸುಲಲಿತವಾಗಿರಲಿಲ್ಲ. 1951 ರಲ್ಲಿ ಅಮೆರಿಕಾ ಬೆಂಬಲಿತ ಸೈಗಾನ್ ಆಡಳಿತದವರಿಂದ ಬಂಧನಕ್ಕೊಳಗಾಗಿ ಕ್ರೂರ ಹಿಂಸೆಗೆ ತುತ್ತಾಗಿದ್ದರು. ಸೈಗಾನ್ ನ ಅತಿ ಕುಖ್ಯಾತವಾದ ಚಿ ಹೋವಾ ಕಾರಾಗೃಹದಲ್ಲಿ ಆಕೆ ಮೂರು ವರ್ಷ ಕಳೆದಿದ್ದರು.

1975 ರ ಏಪ್ರಿಲ್ ನಲ್ಲಿ ಯುದ್ಧ ಕೊನೆಗೊಂಡ ಬಳಿಕ ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಏಕೀಕರಣವಾಗಿ ವಿಯೆಟ್ನಾಂ ಸಮಾಜವಾದಿ ಗಣರಾಜ್ಯ ಸ್ಥಾಪಿತವಾಯಿತು. 1976 ರಲ್ಲಿ ನುಯೆನ್ ಥೀ ಬಿನ್ ಈ ಹೊಸ ಗಣರಾಜ್ಯದ ಶಿಕ್ಷಣ ಮಂತ್ರಿಯಾದರು. ಎರಡು ಬಗೆಯ ಶಿಕ್ಷಣ ಪದ್ಧತಿಗಳನ್ನು ಮೇಳೈಸಿ, ಶಿಕ್ಷಕರಿಗೆ ತರಬೇತಿ ಕೊಡಿಸಿ, ದಕ್ಷಿಣದಲ್ಲಿ ಅನಕ್ಷರತೆಯನ್ನು ತೊಡೆದುಹಾಕುವಂತಹ ಮಹತ್ಕಾರ್ಯಕ್ಕೆ ಹತ್ತು ವರ್ಷಗಳ ಕಾಲ ತೊಡಗಿಸಿಕೊಂಡರು. ಬಳಿಕ 1992 ರಿಂದ 2002 ರವರೆಗೆ ವಿಯೆಟ್ನಾಂನ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಪ್ರಭುತ್ವದ ರಾಜತಂತ್ರ, ಶಿಕ್ಷಣ, ಆರೋಗ್ಯ ಮತ್ತು ಕಾನೂನು ವಿಷಯಗಳಲ್ಲಿ ಸುಧಾರಣೆ ತಂದರು.

ಜುಲೈ 1970 ರಲ್ಲಿ ಮೇಡಂ ಬಿನ್ ಬೆಂಗಳೂರಿಗೆ ಭೇಟಿ ನೀಡಿದ್ದರು. ನಮ್ಮ ರಾಜ್ಯದ ಅತಿಥಿಯಾಗಿ ಆಕೆ ರಾಜಭವನದಲ್ಲಿ ಉಳಿದುಕೊಂಡಿದ್ದರು. ವಿವಿಧ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಕಾರ್ಮಿಕ ಸಂಘಗಳು ಒಟ್ಟಾಗಿ ಸೇರಿ ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡು ಮೇಡಂ ಬಿನ್ ಗೆ ರಾಜ್ಯದ ಪರವಾಗಿ ಸಾರ್ವಜನಿಕ ಗೌರವ ಸಲ್ಲಿಸಿದ್ದರು. ಬೆಂಗಳೂರು ನಗರದ ಪುರಸಭಾ ಭವನದಲ್ಲಿ ನಾಗರಿಕರನ್ನು ಉದ್ದೇಶಿಸಿ ಆಕೆ ಭಾಷಣವನ್ನು ಮಾಡಿದ್ದರು.

ಹೆವೆನ್ ಅಂಡ್ ಅರ್ಥ್

ಆಲಿವರ್ ಸ್ಟೋನ್ ನಿರ್ದೇಶನದ 1993ರ ‘ಹೆವೆನ್ & ಅರ್ಥ್’ (Heaven & Earth) ಚಲನಚಿತ್ರವು ವಿಯೆಟ್ನಾಂ ಯುದ್ಧದ ಹಿನ್ನೆಲೆಯಲ್ಲಿ ಒಬ್ಬ ಮಹಿಳೆಯ ಬದುಕಿನ ಬಗ್ಗೆ ಮೂಡಿಬಂದ ಒಂದು ಭಾವನಾತ್ಮಕ ಜೀವನಗಾಥೆಯಾಗಿದೆ. ಇದು ವಿಯೆಟ್ನಾಂ ಮೂಲದ ಲೇ ಲಿ ಹೇಸ್ಲಿಪ್ ಎಂಬ ಮಹಿಳೆಯ ನೈಜ ಜೀವನದ ಬದುಕಿನ ಪುಟಗಳನ್ನು ಆಧರಿಸಿದ ಚಿತ್ರ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗಿ ಎದುರಿಸುವ ಸಂಕಷ್ಟಗಳು, ಸಾವು-ನೋವು ಮತ್ತು ಹಿಂಸೆಯ ಚಿತ್ರಣವನ್ನು ಇದರಲ್ಲಿ ನೈಜವಾಗಿ ಕಟ್ಟಿಕೊಟ್ಟಿರುವರು.

ವಿಯೆಟ್ನಾಂ ಯುದ್ಧದ ಬಗ್ಗೆ ಅಮೆರಿಕದ ಅನೇಕ ಸಿನಿಮಾಗಳು ಬಂದಿದ್ದರೂ, ಈ ಚಿತ್ರವು ಯುದ್ಧವನ್ನು ಒಬ್ಬ ಸಾಮಾನ್ಯ ವಿಯೆಟ್ನಾಂ ಮಹಿಳೆಯ ದೃಷ್ಟಿಕೋನದಿಂದ ನೋಡುತ್ತದೆ. ಆ ಮೂಲಕ ಒಬ್ಬ ವಿಯೆಟ್ನಾಂ ಮಹಿಳೆಯನ್ನು, ಆಕೆಯ ನೋವು, ಸಂಕಟ, ಪುಟಿದೇಳುವ ಗುಣವನ್ನು, ಅನ್ಯಾಯ, ಹಿಂಸೆ ಮತ್ತು ಬಡತನದ ನಡುವೆಯೂ ಬದುಕುವ ಅದಮ್ಯ ಚೇತನವನ್ನು ನೋಡುಗರು ಅರಿಯಬಹುದಾಗಿದೆ.

ಈ ಚಲನಚಿತ್ರದಲ್ಲಿ ವಿಯೆಟ್ನಾಂನ ಹಸಿರು ಗದ್ದೆಗಳು ಮತ್ತು ಯುದ್ಧದ ಕ್ರೌರ್ಯದ ನಡುವಿನ ವೈದೃಶ್ಯವನ್ನು ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.