ಹೊಲಸೆದ್ದ ಮನಕ್ಕೆ ಬಸವ ತತ್ವವ ತೋರಿಸಿ, ಶಿವಶರಣರಾಗಿ.

ಹೊಲಸೆದ್ದ ಮನಕ್ಕೆ ಮಹಾದೇವನ ತೋರಿಸಿ, ಶಿವಶರಣರಾಗಿ.

ಇಂದಿನ ದಿನ ಮಾನದಲ್ಲಿ ಕೇವಲ ವೈಯಕ್ತಿಕ ಪ್ರತಿಷ್ಠೆಗೆ, ಸಂಸಾರಕ್ಕೆ

ಹಗಲಿರುಳೆನ್ನದೆ ದುಡಿವ ಜೀವಕ್ಕೆ ಸಾಂತ್ವನ. ಕೇವಲ ವೈಯಕ್ತಿಕ ಪ್ರತಿಷ್ಠೆಗೆ ಸಂಸಾರಕ್ಕೆ ಜೀವನ, ಜೀವಕ್ಕೆ ಜೀವನ ಎಷ್ಟು ಸಮಂಜಸ

ಇ ಅಸತ್ಯ ಭೋಗ ವೈಭವಗಳ ಜೀವನ.

"ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.

ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು.

ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ

ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ."

ವೈರಾಗ್ಯ ರತ್ನ ಅಕ್ಕಮಹಾದೇವಿಯವರ ವಚನದಂತೆ, ತಮ್ಮ ನಿಲುವನ್ನು ಅರಿಯದೆ ಕೆಟ್ಟಿತ್ತು ಜೀವ, ಜೀವನ ಎಂದು ಅರಿದು ನುಡಿದಂತ್ತಿದೆ ಇಂದಿನ ಜೀವಮಾನ. ತನ್ನಲ್ಲೇ ಮಹಾದೇವ ನಿರುವ ಅರಿವು ಮರೆತರೆ ನಮ್ಮೆಲ್ಲರ ಜೀವನ ಭವದ "ಹಸಿವು ತೃಷೆ ಮೈಥುನ" ಕೇವಲ ಮೂರಕ್ಕೆ ಎಂಬುದನ್ನು ಮನಕ್ಕೆ ತಿಳಿಸಿ, ಮಹಾ ಮಾರಿ ಆಸೆಯೇ ವಿನಃ ಬೇರೆಲ್ಲಾ ಕಾಲ್ಪನಿಕ ಎಂಬ ಅರಿವೈನೆಡೆಗೆ ಸಾಗಿ.

ಆಸೆಯ ಮಗಳು ಚಿಂತೆ, ಚಿಂತೆ ಚಿತೆಗೆ ಕೇವಲ ಶೂನ್ಯದ ಅಂಥರವಷ್ಟೇ ಆದರೆ ಜೀವನದ ಪರಮ ಸುಖವನ್ನು ಕೊಲ್ಲುವ ಮಹಾ ಮಾರಿ ಚಿಂತೆ.

"ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,

ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,

ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,

ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,

ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣರು..."

ಪರಿಪೂರ್ಣ ಜ್ಞಾನದ ನಿಲುವನ್ನು ಜೀವನದ ಅಲ್ಪ ಸುಖದ ಅವಧಿಯನ್ನು ಚಿಂತೆಯಲ್ಲೇ ಕಳೆಯುವರಿಗೆ

ಮಹಾ ಶರಣ ಅಂಬಿಗರ ಚೌಯ್ಯನವರು

ಅರಿದು ಹೇಳಿರುವ ಸೊಗಡನ್ನು ನಾವೆಲ್ಲರೂ

ಅರಿಯುವ ಸಮಯ ಇದಾಗಿದೆ.

ನಿಜಾನಂದದ ಪರಾಕಾಷ್ಟೆ ಮೆರೆದಿದ್ದ ಶಿವಶರಣರ ನಾಯಕ ಅಪ್ಪ ಬಸವಣ್ಣನವರ ವಚನದಲ್ಲಿ ನಿಜಾನಂದ ಅರಿಯಬೇಕಿದೆ.

"ಸಂಸಾರವೆಂಬುದೊಂದು ಗಾಳಿಯ ಸೊಡರು,

ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ.

ಇದ ನಚ್ಚಿ ಕೆಡಬೇಡ.

ಸಿರೆಯೆಂಬುದ ಮರೆದು, ಪೂಜಿಸು ನಮ್ಮ ಕೂಡಲಸಂಗಮದೇವನ."

ಸಿರಿಯು ಸಂಸಾರ ಸ್ಥಿರವಲ್ಲ ಎಂಬ ನುಡಿಯು ಎಲ್ಲರನುಭವದ ಸಾರವಾದರು ನಾವು ನಮ್ಮ ನಿಜಾನಂದದ ಆತ್ಮದ ಅರಿವಿಗೆ ನಡೆಯದಿರುವುದೇ ಎಲ್ಲಾ ನಶ್ವರ ಕಾಲ್ಪನಿಕ ನೋವಿಗೂ ಕಾರಣವಾಗಿದೆ,ಕೇವಲ ಸಿರಿಯ ಚೆಲುವಿನ ಸವಿಯು ಭವ ರೋಗದ ಮುಖ್ಯ ಅಡಿಪಾಯ,ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ನಮ್ಮೆಲ್ಲರ ಮನದೊಳಗೆ ಬ್ರಾಂತೆಂಬ ರಜೆ ತುಂಬಿರುವಾಗ ಮನೆ( ಮನ)ಯೊಳಗೆ ಮನೆಯೊಡೆಯನಿಲ್ಲಾ ಎಂಬುದೇ ಸಿರಿಯ ಆಹಾಕಾರ.

ಅಲ್ಲಮ ಪ್ರಭುಗಳು ಅಂದು ನುಡಿದದ್ದು ಇಂದಿಗೂ ಹಾಗೆ ಮುಂದುವರೆದುದರ ಪರಿಣಾಮ ಆಸೆಯೆಂಬ ರಕ್ಕಸಿಯ ಮಕ್ಕಳಾದ

ಮೂರನ್ನು ಬಿಟ್ಟು ಆರು ಮೂರನ್ನು ಕಟ್ಟಿ ನೋಡುವ ದ್ಯೆಯವಿಲ್ಲದ ಕಾರಣ ಮನಸ್ಸು ಮಸಣವಾಗಿದೆ.

" ಹೊನ್ನಿಗಾಗಿ ಸತ್ತುದೊಂದು ಕೋಟ್ಯನುಕೋಟಿ

ಹೆಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ

ಮಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ

ನೀ ಗುರಿಯಾಗಿ ಸತ್ತವರನಾರನೂ ಕಾಣೆ ಗುಹೇಶ್ವರಾ."

ಹಾಗೆಂದು ಸಂಸಾರದಲ್ಲಿ ಸದ್ಗತಿ ಇಲ್ಲವೆಂದಲ್ಲಾ, ಜೇಡರ ದಾಸಿಮಯ್ಯನವರ ವಚನದಂತೆ ಬದುಕಿದವರು ಅನಂದ ಅತಿ ಸರಳ,

"ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.

ಸತಿಪತಿಗಳೊಂದಾಗದವನ ಭಕ್ತಿ

ಅಮೃತದೊಳು ವಿಷ ಬೆರೆದಂತೆ ಕಾಣಾ!

ರಾಮನಾಥ."

ಸಾಧನ ಪಥವು ಅತಿ ಸರಳ, ಬಂಧನ ಮುಕ್ತಿ ಎರಡಕ್ಕೂ ಕಾರಣವಾದ

ಮನಸನ್ನು ಹೇಗೆ ಬಳಸಬೇಕೆಂಬುದು ಅದಯ್ಯನವರ ವಚನದಲ್ಲಿ ತಿಳಿದು ಅರಿತು ಆಚರಿಸಿದರೆ ಅನುವನ್ನು ಕಾಣಬಹುದು ಆನಂದದ ಸುಧೆಯಲಿ ಓಲಾಡಬಹುದು,

"ಸಕಲೇಂದ್ರಿಯಂಗಳಲ್ಲಿ ವಿಕರಿಸುವ ಮನವ ಸೆಳೆದು ನಿಂದಾತ ಸುಖಿ,

ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ.

ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ,

ಮನವಂತರ್ಮುಖವಾದಡವಿರಳ ಜ್ಞಾನಿ,

ಮನವು ಮಹದಲ್ಲಿ ನಿಂದಡಾತ ಮುಕ್ತನು.

ಮನೋಲಯವಾದಡೆಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು."

ಮೂರವಸ್ಥೆಯಾದ ಜಾಗ್ರ, ಸ್ವಪ್ನ,ಸುಷುಪ್ತಿ,ಯಲ್ಲಿಯು ತಾನು

ಕೇವಲ ಅತ್ಮನೆಂಬ ಅರಿವನ್ನು ಜಾಗ್ರತ ಗೊಳಿಸಿದರೆ

ಸಚ್ಚಿದಾನಂದ ನಿತ್ಯ ಪರಿಪೂರ್ಣವಾದ ಚೈತನ್ಯವನ್ನು ಸಾಧಿಸಬಹುದು.

ಹೇಗೆ ಸ್ವಾತಿ ಮಳೆಯ ಹನಿಯೂ ಮುತ್ತಾಗುವುದು ಹಾಗೆ , ನಾನು ಹೇಳಿದ ಮಾತು ನಂಬಲು ಆಚರಿಸಲು ಕಷ್ಟವೆನುವರಿಗೆ ಇದೋ ಬಸವಣ್ಣನವರ ವಚನ,

"ಕರಿ ಘನ: ಅಂಕುಶ ಕಿರಿದೆʼನ್ನ ಬಹುದೆ? ಬಾರದಯ್ಯಾ.

ಗಿರಿ ಘನ: ವಜ್ರ ಕಿರಿದೆʼನ್ನ ಬಹುದೆ? ಬಾರದಯ್ಯಾ.

ತಮಂಧ ಘನ: ಜ್ಯೋತಿ ಕಿರಿದೆʼನ್ನ ಬಹುದೆ? ಬಾರದಯ್ಯಾ.

ಮರಹು ಘನ: ನಿಮ್ಮ ನೆನೆವ ಮನ ಕಿರಿದೆʼನ್ನ ಬಹುದೆ?

ಬಾರದಯ್ಯಾ, ಕೂಡಲ ಸಂಗಮದೇವಾ."

ಬರಿಯ ಕಾಲ್ಪನಿಕ ಆಲೋಚನೆ ಮತ್ತು ಲೌಕಿಕ ಇಹ ಭೋಗದ ದಾಸರದೆ ಷಣ್ಮುಖ ಶಿವಯೋಗಿಗಳ ವಚನದಂತೆ ನಾವೆಲ್ಲರೂ ಲಿಂಗದ ಅರಿವಲ್ಲಿ ಎಚ್ಚರಿರಬೇಕು.

"ಎಚ್ಚರವಿರಬೇಕು ನಡೆನುಡಿಯಲ್ಲಿ.

ಮಚ್ಚರವಿರಬೇಕು ಭವಸಂಸಾರದಲ್ಲಿ.

ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ.

ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ.

ಇಂತೀ ಗುಣವುಳ್ಳಾತನೇ ಅಚ್ಚ ಶರಣನು ನೋಡಾ ಅಖಂಡೇಶ್ವರಾ."

ಎಂದು ಲೋಕದ ಕುಹಕ ಕುಟಿಲ ಅಹಂಕಾರಕ್ಕೆ ಒಳಗಾಗದೆ

ಅಂತಃಕರಣಗಳಾದ ಮನ,ಬುದ್ಧಿ,ಚಿತ್ತ,ಅಹಂಕಾರಗಳ.

ಅಷ್ಟ ಮಧಗಳ, ಸಪ್ತ ವ್ಯಸನಗಳ, ತ್ರಿಮಲಗಳ ಸುಟ್ಟು.

ಕೇವಲ ಶರೀರ ನಾನೆಂಬ ಭ್ರಾಂತಿಯ ಸುಟ್ಟು,

ಅಂತರಂಗದ ಅನುಭವ ಮಂಟಪದಲ್ಲಿ

ಭಕ್ತಿ ಎಂಬ ಹಕ್ಕಿಯಾಗಿ ಜ್ಞಾನ, ವೈರಾಗ್ಯ ಎಂಬ ರೆಕ್ಕೆಯ ಬಡಿದು

ನಿಮ್ಮೊಳಗೆ ನೀವರಿದು.

"ಮಣ್ಣ ಬಿಟ್ಟು ಮಾಡಿಕೆಯಿಲ್ಲ ತನ್ನ ಬಿಟ್ಟು ದೇವರಿಲ್ಲಾ"

ಎಂಬ ನಿಜದ ನೆಲೆಗೆ ಸಖಲ ಸಾಧಕರ ಸಧ್ಮಂತ್ರವಾದ

ಓಂ ನಮಃ ಶಿವಾಯ ಎಂಬುದ ನೆಲೆಗೊಳಿಸಿ

ಭವದಿಂದ ಮುಕ್ತರಾಗಿ ಶಿವಶರಣರಾಗಿ.

ನಮ್ಮೆಲ್ಲರ ಮನದೊಳಗೆ ಮಹಾದೇವ ಖಂಡಿತವಾಗಿಯೂ ಇರುವನು ಆದರೆ ಅವನನ್ನು ಕಾಣುವ ಹಾದಿ ತಿಳಿಸುವರು ಅತಿ ವಿರಳರಾಗಿರುವರು,

ತನ್ನನುವ ತಾ ಕಾಣದೆ ಅನ್ಯರಿಗೆ ಉಪದೇಶಿಸುವ ಮಾತುಗಾರರ ಸಂಘ ಮೂಡನಂಬಿಕೆಯ ಆಗರವೇ ಒರತು ನಿಜದ ನೆಲೆಯ ಮಾರ್ಗದ ಬಟ್ಟೆಯಲ್ಲಾ,

ಕಲ್ಯಾಣ ಕಂಡ ಪರಿಪೂರ್ಣ ಚಿದ್ ಚೈತನ್ಯದ ಅರಿವು ನಮಗಾದರೆ,ಭವದಿಂದ ಮುಕ್ತಿಯೆಡೆಗೆ ಕೇವಲ ಗೊರಸಿನ ಅಂಥರ.

ಬಸವಣ್ಣನವರ ವ್ಯಕ್ತಿತ್ವವೇ ಅಂಥದು ಸಕಲರು ತಮ್ಮ ಅನುವಿನೊಂದಿಗೆ ಒಳಾಡಬೇಕೆಂಬ ಅವರ ಆದರ್ಶವೇ ನಮ್ಮೆಲ್ಲರ ಮುಕ್ತಿಯ ಸೋಪಾನ. ಇನ್ನಾದರೂ ಚಿದಾನಂದ ಅಂತರಂಗದ ಅನುಭಾವ ಮಂಟಪ ಸೇರೋಣ, ಮಹಾದೇವರಾಗಿ ಶಿವ ಶರಣರ ಆದರ್ಶ ಧರ್ಮದ ಆಶಾಕಿರಣಗಳಾಗಿ, ಕಾಲ್ಪನಿಕ ಜಗತ್ತಿನಿಂದ ನಿರಂಜನರಾಗುವ.

"ಕಲಿಯೋಳು ಕಾಂಬರಿಲ್ಲಾ,ಲಿಂಗದ ಬೆಳಗ !

ತಮಗೆ ತಾವೇ ದೇವರಾದ ಪರಿ ನೋಡ,

ಸಗಣಕೆ ಸಾಸಿರ ಹುಳದವರು(ಭವಿಗಳು).

ಧರೆಯಲಿ ಗುರು ಬಸವಪ್ರಭುವಿನ

ಸಂಗವು ನಿಶ್ಚಿಂತ ನಿವಾಸವು ಮುರುಘೇಶ."

ಸರ್ವರಿಗೂ ಶರಣುಶರಣಾರ್ಥಿಗಳು.

ಲೇಖಕರು

ವಿರಕ್ತ ಮಠ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.