ಗೌರವಯುತ ಬದುಕು ಮತ್ತು ಪರಿಸರವನ್ನು ಅಧ್ಯಾಪಕರಿಗೆ ಒದಗಿಸದೆ ಅಧ್ಯಾಪನದಿಂದ ಅತ್ಯುತ್ತಮ ಫಲ ನಿರೀಕ್ಷಿಸಲಾಗದು. ಗೌರವವೂ ಇಲ್ಲದೆ, ಸೂಕ್ತ ಸಂಭಾವನೆಯೂ ಇಲ್ಲದೆ ದುಡಿಯುತ್ತಿರುವ ಅತಿಥಿ ಅಧ್ಯಾಪಕರು, ಈ ಹೊತ್ತಿನ ಶಿಕ್ಷಣ ಕ್ಷೇತ್ರದ ಸ್ಥಿತಿ ಹಾಗೂ ಶಿಕ್ಷಕರ ಬಗೆಗಿನ ಸಮಾಜದ ಮನಃಸ್ಥಿತಿಯನ್ನು ಸಂಕೇತಿಸುವಂತೆ ಇದ್ದಾರೆ.