ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳು ತಮ್ಮ ಔನ್ನತ್ಯ ಕಂಡುಕೊಳ್ಳುವುದಕ್ಕೆ ಅವು ಹೊಂದಿರುವ ‘ಸ್ವಾಯತ್ತತೆ’ಯೇ ಪ್ರಮುಖ ಕಾರಣ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿವಿಗಳಿಗೆ ಇರುವ ‘ಸ್ವಾಯತ್ತತೆ’ ಅವುಗಳ ಬೆಳವಣಿಗೆಗೆ ಪೂರಕವಾಗಿದೆ. ಇದಕ್ಕೆ ಅತ್ಯುತ್ತಮ ನಿದರ್ಶನಗಳು: ಆಕ್ಸ್ಫರ್ಡ್, ಹಾರ್ವರ್ಡ್, ಕೊಲಂಬಿಯಾ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳು. ಈ ವಿವಿಗಳು ತಮ್ಮದೇ ದೃಷ್ಟಿಕೋನ ಮತ್ತು ಸ್ಪಷ್ಟ ಧ್ಯೇಯೋದ್ದೇಶಗಳನ್ನು ಹೊಂದಿವೆ. ಅವುಗಳ ಕಾರ್ಯ ನಿರ್ವಹಣೆಯಲ್ಲಿ ಸರ್ಕಾರ ಮೂಗು ತೂರಿಸುವಂತಿಲ್ಲ. ಅಂದರೆ, ವಿವಿಗೆ ಅನುದಾನ ನೀಡುವ ಸರ್ಕಾರಕ್ಕಾಗಲೀ ಅಥವಾ ಉದಾರವಾಗಿ ಆರ್ಥಿಕ ನೆರವು ದಾನಿಗಳಿಗಾಗಲೀ, ಹಣ ನೀಡುವ ಕಾರಣದಿಂದಾಗಿ ವಿವಿಗಳನ್ನು ನಿಯಂತ್ರಿಸುವ ಅಧಿಕಾರ ದೊರೆಯುವುದಿಲ್ಲ. ಈ ಅರಿವು, ವಿಶ್ವಶ್ರೇಷ್ಠ ವಿವಿಗಳಿಗೂ ಇದೆ, ಅವುಗಳಿಗೆ ಅನುದಾನ ನೀಡುವವರಿಗೂ ಇದೆ.ಸುಸ್ಥಿರ ಸಮಾಜದ ಸ್ವಾಸ್ಥ್ಯ ರಕ್ಷಿಸುವ ಉದ್ದೇಶದಿಂದ ಜ್ಞಾನ ಸಂಪಾದನೆ ಮತ್ತು ಕೌಶಲವುಳ್ಳ ಪರಿಣತರನ್ನು ಬೆಳೆಸುವ ಮಾಧ್ಯಮದ ರೂಪದಲ್ಲಿ ಶಿಕ್ಷಣವನ್ನು ನೋಡಬಹುದಾಗಿದೆ. ಸಾರ್ವಜನಿಕ ಹಿತವನ್ನು ಬಯಸುವ ಯಾವುದೇ ಶಿಕ್ಷಣ ಸಂಸ್ಥೆ, ತನ್ನ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವವರಿಗೆ ಬದ್ಧರಾಗಿರಲು ಬಯಸದೆ, ಸ್ಪಷ್ಟ ಮಾನದಂಡಗಳ ಮೂಲಕ ಸಮಾಜಕ್ಕೆ ಉತ್ತರದಾಯಿ ಆಗಿರುವುದನ್ನು ತನ್ನ ಮೌಲ್ಯ ಆಗಿಸಿಕೊಂಡಿರುತ್ತದೆ.

ಶಿಕ್ಷಣ ಸರ್ವರಿಗೂ ಬೇಕಾದುದು, ಅದನ್ನು ಯಾರೂ ಯಾರಿಗೂ ನಿರಾಕರಿಸುವಂತಿಲ್ಲ. ಅದು ಮಾರುಕಟ್ಟೆಯ ವ್ಯಾಪಾರೀ ವಸ್ತುವೂ ಅಲ್ಲ. ಆರೋಗ್ಯ, ಕುಡಿಯುವ ನೀರಿನಂತೆ ಶಿಕ್ಷಣವೂ ಜನರ ಮೂಲಭೂತ ಹಕ್ಕು. ಶಿಕ್ಷಕರ ಪಾಠ ಪ್ರವಚನಗಳು, ಸಂಶೋಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನದ ಪರೀಕ್ಷೆ, ಇವೆಲ್ಲವನ್ನೂ ಸಂಸ್ಥೆಯಲ್ಲೇ ಇರುವ ತಜ್ಞರು ಅಥವಾ ಅವರಿಗೆ ಸಮಾನವಾದ ಹೊರಗಿನ ವಿದ್ವಾಂಸರುಗಳೇ ನಿರ್ವಹಿಸಬೇಕು. ಆಕ್ಸ್ಫರ್ಡ್, ಹಾರ್ವರ್ಡ್ನಂತಹ ವಿವಿಗಳಲ್ಲಿ ಎಂದಿನಿಂದಲೂ ನಡೆದು ಬಂದಿರುವ ಪದ್ಧತಿ ಇದು.ಆಕ್ಸ್ಫರ್ಡ್, ಹಾರ್ವರ್ಡ್ ವಿವಿಗಳ ಮಾದರಿ ಗಳನ್ನು ನಮ್ಮ ವಿಶ್ವವಿದ್ಯಾಲಯಗಳೂ ಅನುಸರಿಸ ಬಹುದಾಗಿದೆ. ನಮ್ಮ ವಿವಿಗಳಿಗೆ ಸರ್ಕಾರದಿಂದ (ಅಥವಾ ಯು.ಜಿ.ಸಿ.ಯಿಂದ) ಅನುದಾನ ದೊರೆಯುತ್ತದೆ. ಈ ಅನುದಾನದ ಹಣದಿಂದ ಮಾಡಲಾದ ವೆಚ್ಚದ ವರದಿಯನ್ನು ಹಲವು ಹಂತದ ಸರ್ಕಾರಿ ವ್ಯವಸ್ಥೆಯ ಮೂಲಕ ಸಲ್ಲಿಸಲಾಗುತ್ತದೆ. ಅದರ ಬದಲಾಗಿ, ಅಕೌಂಟೆಂಟ್ ಜನರಲ್ ಅವರಿಗೆ ನೇರವಾಗಿ ಲೆಕ್ಕಪತ್ರದ ವರದಿ ಕೊಡಬಹುದು. ಪರಿಶೀಲನೆಯ ನಂತರ, ಅವರು ಶಾಸಕಾಂಗ ಹಾಗೂ ಆರ್ಥಿಕ ಇಲಾಖೆಗೆ ರವಾನಿಸಬಹುದು. ಈ ಮೂಲಕ, ವಿವಿಗಳ ಸ್ವಾಯತ್ತತೆಯನ್ನು ಸರ್ಕಾರ ಬಹುಪಾಲು ಒಪ್ಪಿಕೊಂಡಂತಾಗುವುದು.

ಪ್ರಶ್ನಿಸುವ ಮನೋಭಾವ, ನಿರಂತರ ಸಂಶೋಧನೆ, ಮುಕ್ತ ಚರ್ಚೆ ಹಾಗೂ ಸಂವಾದಗಳು ವಿವಿಗಳು ಜೀವಂತವಾಗಿರಲು ಅಗತ್ಯ. ಇದು ಸಾಧ್ಯವಾಗಬೇಕಾದರೆ, ಅವುಗಳಿಗೆ ಸಂಪೂರ್ಣ ಸ್ವಾಯತ್ತತೆ ಅನಿವಾರ್ಯ. ಈ ಸ್ವಾಯತ್ತತೆಗೆ ಅಡ್ಡಗೋಡೆ ಆಗಿರುವುದು ರಾಜಕೀಯ ಹಸ್ತಕ್ಷೇಪ. ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ಹಸ್ತಕ್ಷೇಪ ದಿಂದಾಗಿ ವಿವಿಗಳ ಸ್ವಾಯತ್ತತೆಗೆ ಕೊಡಲಿಪೆಟ್ಟು ಬಿದ್ದಿದೆ. ಕೋಲ್ಕತ್ತ, ಮುಂಬೈ ಹಾಗೂ ಮದ್ರಾಸ್ ವಿವಿಗಳನ್ನು ಸ್ಥಾಪಿಸಿದ ಬ್ರಿಟಿಷ್ ಸರ್ಕಾರ, ಆ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲಿ ಕ್ಕಾಗಿ, ಪ್ರಾಂತ್ಯಗಳ ರಾಜ್ಯಪಾಲರನ್ನು ಆಯಾ ವಿವಿಗಳ ಕುಲಪತಿಯನ್ನಾಗಿ ನೇಮಿಸಿತು. ಆ ವ್ಯವಸ್ಥೆಯೇ ಸ್ವಾತಂತ್ರ್ಯಾನಂತರವೂ ಮುಂದುವರೆದಿರುವುದುಸಮಸ್ಯೆಗೆ ಕಾರಣವಾಗಿದೆ. 1960ರ ನಂತರದ ದಶಕಗಳಲ್ಲಿ ರಾಜ್ಯಪಾಲರು, ಕೇಂದ್ರ ಸರ್ಕಾರದ ರಾಜಕೀಯ ಪ್ರತಿನಿಧಿಗಳಾಗಿ ರೂಪಾಂತರ ಹೊಂದಿದರು. ಇತ್ತೀಚೆಗೆ, ತಮಿಳುನಾಡಿನ ಆರ್.ಎನ್. ರವಿ, ಕೇರಳದಲ್ಲಿದ್ದ ಅರಿಫ್ ಮೊಹಮ್ಮದ್ ಖಾನ್ ಹಾಗೂ ಪಶ್ಚಿಮ ಬಂಗಾಳದ ಆನಂದ ಬೋಸ್ ಅವರು, ತಮ್ಮ ರಾಜ್ಯಪಾಲರ ಹುದ್ದೆಯ ಧ್ಯೇಯವನ್ನು ಮರೆತು, ಕಿಂಚಿತ್ತೂ ಸಂಕೋಚವಿಲ್ಲದೆ ಕೇಂದ್ರದ ರಾಜಕೀಯ ಏಜೆಂಟರಂತೆ ವರ್ತಿಸಿದರು. ಈ ರಾಜ್ಯಪಾಲರು, ರಾಜ್ಯ ವಿವಿಗಳ ಉಪಕುಲಪತಿಯ ನೇಮಕ ಸೇರಿದಂತೆ ಶಾಸಕಾಂಗ ಅನುಮೋದಿಸಿದ ಹಲವು ಮಸೂದೆಗಳಿಗೆ ಅಂಕಿತ ಹಾಕದೆ, ಕಡತಗಳನ್ನು ದೀರ್ಘಕಾಲ ಉಳಿಸಿಕೊಂಡು ನಿರಂಕುಶ ಪ್ರಭುಗಳಂತೆ ವರ್ತಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗುವ ಅಧಿಕಾರ ರಾಜ್ಯಪಾಲರಿಗೆ ಸಂವಿಧಾನದತ್ತವಾಗಿ ಬಂದಿಲ್ಲ. ಬದಲಾಗಿ, ವಿವಿಧ ರಾಜ್ಯ ಸರ್ಕಾರಗಳೇ ರಚಿಸಿರುವ ‘ವಿಶ್ವವಿದ್ಯಾಲಯ ಅಧಿನಿಯಮ’ ಕೊಟ್ಟಿರುವ ಅಧಿಕಾರವದು (ಉದಾ: ಸೆಕ್ಷನ್ 12: ‘ಕರ್ನಾಟಕದ ರಾಜ್ಯಪಾಲರು ತಮ್ಮ ಪದದ ಕಾರಣದಿಂದಾಗಿ ವಿಶ್ವವಿದ್ಯಾಲಯದ ಕುಲಾಧಿಪತಿ ಆಗಿರತಕ್ಕದ್ದು’). ಹಾಗಾಗಿ, ಉಪಕುಲಪತಿ ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬಹುದು. ಕಳೆದ ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಸಂವಿಧಾನದತ್ತವಾದ ಒಕ್ಕೂಟ ವ್ಯವಸ್ಥೆಯನ್ನು ತಮಿಳುನಾಡಿನ ರಾಜ್ಯಪಾಲರ ನಡವಳಿಕೆ ನಿರ್ಲಕ್ಷಿಸಿರುವುದನ್ನು ಗುರ್ತಿಸಿ ಟೀಕಿಸಿದೆ. ರಾಜ್ಯಪಾಲರ ಹುದ್ದೆ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಕುರಿತು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದೆ.

ರಾಜಕಾರಣದ ಪೂರ್ವಗ್ರಹ ಮಾತ್ರವಲ್ಲದೆ, ವಿವಿಗಳಂತಹ ಸೃಜನಶೀಲ ಜ್ಞಾನ ಕೇಂದ್ರಗಳಿಗೆ ಮಾರ್ಗದರ್ಶಿ ಆಗುವಂತಹ ಶೈಕ್ಷಣಿಕ ಅರ್ಹತೆ ಇರುವ ರಾಜ್ಯಪಾಲರುಗಳು ಅತ್ಯಂತ ವಿರಳ. ಉದಾ:1950–2020ರ ಅವಧಿಯಲ್ಲಿ ನೇಮಕವಾದ ಶೇ 54ರಷ್ಟು ರಾಜ್ಯಪಾಲರು ಸಕ್ರಿಯ ರಾಜಕಾರಣಿ ಆಗಿದ್ದವರು!ಕುಲಪತಿ ಸ್ಥಾನಕ್ಕೆ ರಾಜ್ಯಪಾಲರು ಬೇಡ ಎನ್ನುವುದಾದರೆ, ಆ ಹುದ್ದೆಯನ್ನು ಮುಖ್ಯಮಂತ್ರಿ ಅಲಂಕರಿಸಬಹುದೆ? ‘ಮುಖ್ಯಮಂತ್ರಿಯವರು ವಿವಿಗಳ ಕುಲಪತಿ ಆಗಲಿ’ ಎಂದು ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ಮಾಜಿ ಉಪಕುಲಪತಿ ಪ್ರೊ. ಎಸ್. ಜಾಫೆಟ್ ಇತ್ತೀಚೆಗೆ ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಮುಖ್ಯಮಂತ್ರಿ ಯನ್ನು ಗಮನದಲ್ಲಿ ಇಟ್ಟುಕೊಳ್ಳದೆ ಈ ಪ್ರಶ್ನೆಗೆ ವಸ್ತುನಿಷ್ಠ ಉತ್ತರ ಕಂಡುಕೊಳ್ಳಬೇಕಾಗಿದೆ. ಜಾಫೆಟ್ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಗುಜರಾತ್ ಮಾದರಿಯನ್ನು ಉಲ್ಲೇಖಿಸಿದ್ದರು!

‘ಗುಜರಾತ್ ಉನ್ನತ ಶಿಕ್ಷಣ ಪರಿಷತ್ ಕಾಯ್ದೆ–2016’ರ ಪ್ರಕಾರ, ಶಿಕ್ಷಣ ತಜ್ಞರ ಬದಲು ಮುಖ್ಯಮಂತ್ರಿಯೇ ಅದರ ಮುಖ್ಯಸ್ಥರು! ವಿವಿಯ ಯಾವುದೇ ನಿರ್ಧಾರವನ್ನು ರದ್ದು ಮಾಡುವ, ವಿವಿಯ ದೈನಂದಿನ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಗುಜರಾತ್ನ ಉನ್ನತ ಶಿಕ್ಷಣ ಪರಿಷತ್ಗಿದೆ. ಅಂದರೆ, ಸರ್ಕಾರ ತನ್ನ ರಾಜಕೀಯ ಲೆಕ್ಕಾಚಾರದಂತೆ ವಿವಿಯ ಸ್ವಾಯತ್ತತೆಯ ಪರಿಕಲ್ಪನೆಯನ್ನು ಪರಿಶೀಲಿಸದೇ ನಡೆದುಕೊಳ್ಳಲಿಕ್ಕೆ ಗುಜರಾತ್ ಮಾದರಿಯಲ್ಲಿ ಅವಕಾಶವಿದೆ. 2016ರಲ್ಲಿ ವಿದ್ಯಾರ್ಥಿಗಳ
ಪಿಎಚ್.ಡಿ. ಅಧ್ಯಯನಕ್ಕೆ ‘ಹಿಂದುತ್ವ’ದ ಅಜೆಂಡಾ ಒಳಗೊಂಡಂತೆ 83 ಪ್ರಬಂಧಗಳ ಪಟ್ಟಿಯನ್ನು ಪರಿಷತ್ ಕಳಿಸಿತ್ತು! ಅದು ಈಗಲೂ ಜಾರಿಯಲ್ಲಿದೆ.

ನನಗೆ ತಿಳಿದಂತೆ, ಯಾವ ದೇಶದ ಉನ್ನತ ಶಿಕ್ಷಣದಲ್ಲೂ ಇಂತಹ ದುಃಸ್ಥಿತಿ ಇಲ್ಲ. ಹಾರ್ವರ್ಡ್, ಆಕ್ಸ್ಫರ್ಡ್ ಸೇರಿದಂತೆ ಹಲವಾರು ವಿಶ್ವಪ್ರಸಿದ್ಧ ವಿವಿಗಳು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿವೆ. ಇತ್ತೀಚೆಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜಕೀಯ ಕಾರಣದಿಂದಾಗಿ ಸರ್ಕಾರದ ಅನುದಾನವನ್ನು ದಿಢೀರನೆ ಹಿಂಪಡೆದರು. ಆಗಲೂ ಹಾರ್ವರ್ಡ್ ವಿವಿ ರಾಜಕೀಯ ಒತ್ತಡಕ್ಕೆ ಶರಣಾಗಲಿಲ್ಲ. ವರ್ತಮಾನದ ‘ಶಕ್ತಿ ರಾಜಕೀಯ’ ಸಮೀಕರಣದಲ್ಲಿ ಯಾವ ಮುಖ್ಯಮಂತ್ರಿಯೂ ಸಾವಧಾನದಿಂದ ಕೆಲಸ ಮಾಡುವುದು ಸುಲಭವಲ್ಲ. ವಿವಿಯ ಶೈಕ್ಷಣಿಕ ಗುಣಮಟ್ಟದ ಶ್ರೇಷ್ಠತೆಯನ್ನು ಕಾಪಾಡಲು, ಸಮಾಜವನ್ನು ಅರ್ಥೈಸಲು ಅಗತ್ಯವಾದ ನಿರಂತರ ಬೆಳವಣಿಗೆಯ ಜ್ಞಾನವನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರುವಂತೆ ವಿವಿಯನ್ನು ಪ್ರೇರೇಪಿಸಲು ಓರ್ವ ಮುಖ್ಯಮಂತ್ರಿಗೆ ಸಾಧ್ಯವೆ? ಹಾಗೆ
ನಿರೀಕ್ಷಿಸುವುದಾದರೂ ನ್ಯಾಯವೇ? ಮುಖ್ಯಮಂತ್ರಿಯೇ ವಿವಿಗಳ ಕುಲಪತಿ ಆಗಲಿ ಎನ್ನುವ ಅಪೇಕ್ಷೆ ವಾಸ್ತವದಿಂದ ಬಹಳ ದೂರವಿದೆ.

ವಿವಿಗಳ ಹುದ್ದೆಗಳಿಗೆ ನೇಮಕಗೊಳ್ಳುತ್ತಿರುವ ಬೋಧಕರಿಗೆ ಅದೊಂದು ಜೀವನೋಪಾಯದ ಉದ್ಯೋಗದಂತಾಗಿದೆ; ಉಪಕುಲಪತಿ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದರೆ ವಿವಿ ಅರಾಜಕಸ್ಥಿತಿಯ ಒಂದು ಸಂಸ್ಥೆಯಾಗಲಿದೆ ಎನ್ನುವ ಶಿಕ್ಷಣ ತಜ್ಞ ಡಾ. ಎಚ್.ಎ. ರಂಗನಾಥ್ ಅವರ ಅಭಿಪ್ರಾಯ, ಸದ್ಯದ ಉನ್ನತ ಶಿಕ್ಷಣದ ಸ್ಥಿತಿಗತಿಗೆ ಕನ್ನಡಿ ಹಿಡಿಯುವಂತಿದೆ. ‘ಮೆಕಾಲೆ ಶಿಕ್ಷಣ ಪದ್ಧತಿಯನ್ನು ಕೊನೆಗೊಳಿಸಿ, ಅದರ ಸ್ಥಾನದಲ್ಲಿ ಶುದ್ಧ ಭಾರತೀಯ ಶಿಕ್ಷಣ’ವನ್ನು ತರುವುದಾಗಿ ಯಾವ ರಾಜಕೀಯ ಪಕ್ಷ ಹಾಗೂ ಅದರ ಸರ್ಕಾರ ಹೇಳಿಕೊಂಡೇ ಬಂದಿದೆಯೋ, ಅದೇ ಪಕ್ಷ– ಸರ್ಕಾರ ಈಗ ವಿದೇಶಿ ವಿವಿಗಳಿಗೆ ಅಂದರೆ, ಮೆಕಾಲೆ ಶಿಕ್ಷಣ ಪದ್ಧತಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ. 10 ವರ್ಷಗಳ ಹಿಂದೆಯೇ ಗುಜರಾತ್ನಲ್ಲಿ ಅಲ್ಲಿನ ಸರ್ಕಾರ, ‘ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್–ಸಿಟಿ’ (ಗಿಫ್ಟ್ ಸಿಟಿ) ಎಂಬ ವಿಶಾಲವಾದ ಸ್ಥಳದಲ್ಲಿ ವಿದೇಶಿ ವಿವಿಗಳು ತಮ್ಮ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ವಿಶೇಷ ಅನುಕೂಲ ಮಾಡಿಕೊಟ್ಟಿತ್ತು. ಯು.ಜಿ.ಸಿ. ಅಥವಾ ಸರ್ಕಾರ ವಿಧಿಸುವ ಶುಲ್ಕವನ್ನು ಮೆಕಾಲೆ ವಿವಿಗಳು ಒಪ್ಪುವುದು ಅಸಂಭವ. ತೀವ್ರ ಸ್ವರೂಪದ ಬೆಳವಣಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಇದೀಗ ಸಾಕಾರಗೊಂಡಿದ್ದು, ಶಿಕ್ಷಣದ ಎಲ್ಲ ಹಂತಗಳಲ್ಲಿ ಶಿಕ್ಷಕರ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ತಂತ್ರಜ್ಞಾನ ಪಾತ್ರ ವಹಿಸುತ್ತಿದೆ. ಸಂಶೋಧನಾ ಲೇಖನಗಳು, ವಿಡಿಯೊ ಇತ್ಯಾದಿ ಡಿಜಿಟಲ್ ವ್ಯವಸ್ಥೆಯಲ್ಲಿ ಕೂಡಲೇ ಸಿಗುತ್ತಿವೆ. ಶಿಕ್ಷಣ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಉತ್ಕರ್ಷದಿಂದಾಗಿ ಹಲವು ಉದ್ಯೋಗಗಳಿಗೆ ಮುಕ್ತ ಪ್ರವೇಶ ಸಿಗಲಿದೆ.

ಸಂವಿಧಾನದ ಮೌಲ್ಯಗಳ ಪ್ರತಿಪಾದನೆ, ನಿತ್ಯ ಜೀವನದಲ್ಲಿ ಮಾನವೀಯತೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆ ರೂಪಿಸುವುದು ಶಿಕ್ಷಣದ ಮುಖ್ಯ ಗುರಿ. ಬ್ರಿಟನ್ನಿನ ಉನ್ನತ ಶಿಕ್ಷಣವನ್ನು ನಿಯಂತ್ರಿಸುವ ಇಲಾಖೆಯ ಅಂಗಸಂಸ್ಥೆಯಾದ ‘ವಿದ್ಯಾರ್ಥಿಗಳ ಕಚೇರಿ’ಯು(ಸ್ಟೂಡೆಂಟ್ ಆಫೀಸ್), ಇದೇ ವರ್ಷದ ಜೂನ್ 19ರಂದು ಹೊಸ ಮಾರ್ಗಸೂಚಿ ಹೊರಡಿಸಿ, ‘ವಾಕ್ ಸ್ವಾತಂತ್ರ್ಯ’ ಹಾಗೂ ‘ಶೈಕ್ಷಣಿಕ ಸ್ವಾತಂತ್ರ್ಯ’ಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ವಿವಿಗಳ ಜವಾಬ್ದಾರಿ ಎಂದು ಸೂಚಿಸಿದೆ. ಈ ಎರಡೂ ಸ್ವಾತಂತ್ರ್ಯಗಳು ಉನ್ನತ ಶಿಕ್ಷಣದಲ್ಲಿ ನಿರ್ಣಾಯಕ ಪರಿಕಲ್ಪನೆಗಳು. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಮುಜುಗರ, ಕೀಳರಿಮೆಯಿಂದ ಹೊರಬರಲೂ ಇವು ಅಗತ್ಯವಾಗಿವೆ. ತಂತ್ರಜ್ಞಾನದ ಅಪಾರ ಬೆಳವಣಿಗೆಯ ನಡುವೆಯೂ ಬ್ರಿಟಿಷ್ ಸರ್ಕಾರ, ಮಹತ್ವದ ಸಾಮಾಜಿಕ– ರಾಜಕೀಯ ಮೌಲ್ಯಗಳನ್ನು ಪ್ರತಿಪಾದಿಸಿರುವುದು ವಿಶೇಷ. ಭಾರತದಲ್ಲಿ ಇಂತಹ ನಿಲುವು, ಬೆಳವಣಿಗೆ ಸಾಧ್ಯವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.