ಜನವರಿ 3, 2026ರ ಬೆಳಗ್ಗೆ ಜಗತ್ತೇ ಒಂದು ಆಘಾತಕಾರಿ ಸುದ್ದಿಯೊಂದಿಗೆ ಎಚ್ಚರಗೊಂಡಿತು. ಅಮೆರಿಕ ವೆನೆಜುವೆಲಾ ನೆಲದಲ್ಲಿ ಒಂದು ದಿಟ್ಟ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಕಾರ್ಯಾಚರಣೆಗೆ 'ಆಪರೇಶನ್ ಅಬ್ಸಲ್ಯೂಟ್ ರಿಸಾಲ್ವ್' ಎಂಬ ಹೆಸರಿಡಲಾಗಿತ್ತು. ಅಮೆರಿಕನ್ ವಿಶೇಷ ಪಡೆಗಳು ಕ್ಯಾರಾಕಸ್ನ ನಿವಾಸದಿಂದ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡೂರೊ ಮತ್ತವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿದ್ದವು. ಅವರನ್ನು ವೆನೆಜುವೆಲಾದಿಂದ ಹೊರಗೆ, ನ್ಯೂಯಾರ್ಕ್ನಲ್ಲಿ ವಿಚಾರಣೆಗೆ ಒಳಪಡಿಸಲು ಕರೆದೊಯ್ಯಲಾಯಿತು. ಈ ಕಾರ್ಯಾಚರಣೆ ಮೂರು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡರೂ, ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ.

ಈ ಕಾರ್ಯಾಚರಣೆಯಲ್ಲಿ ಯುದ್ಧ ವಿಮಾನಗಳು, ಬಾಂಬರ್ಗಳು, ಹೆಲಿಕಾಪ್ಟರ್ಗಳು ಮತ್ತು ಡ್ರೋನ್ಗಳು ಸೇರಿದಂತೆ, 150ಕ್ಕೂ ಹೆಚ್ಚು ಏರ್ಕ್ರಾಫ್ಟ್ಗಳು ಪಾಲ್ಗೊಂಡಿದ್ದವು. ಅಮೆರಿಕನ್ ಪಡೆಗಳು ವೆನೆಜುವೆಲಾದ ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲು ಇಎ-18ಜಿ ಗ್ರೌಲರ್ ವಿಮಾನಗಳ ಇಲೆಕ್ಟ್ರಾನಿಕ್ ಜಾಮಿಂಗ್ ವ್ಯವಸ್ಥೆಯನ್ನು ಬಳಸಿಕೊಂಡವು. ಬಹಳಷ್ಟು ವರದಿಗಳ ಪ್ರಕಾರ, ಕೆಳಮಟ್ಟದಲ್ಲಿ ಹಾರುತ್ತಾ ಸಾಗಿದ ಯುದ್ಧ ವಿಮಾನಗಳು ರಾಜಧಾನಿ ಕ್ಯಾರಾಕಸ್ನಲ್ಲಿ ಒಂದಷ್ಟು ಭಾರೀ ಸ್ಫೋಟಕ್ಕೆ ಕಾರಣವಾಗಿದ್ದವು. ಸ್ಥಳೀಯ ಕಾಲಮಾನದಲ್ಲಿ ರಾತ್ರಿ 2 ಗಂಟೆಗೆ ಆರಂಭವಾದ ಕಾರ್ಯಾಚರಣೆ ರಾಜಧಾನಿಯಾದ್ಯಂತ ಹೊಗೆ ಮುಸುಕುವಂತೆ ಮಾಡಿತ್ತು.

ಆದರೆ ನಿಜಕ್ಕೂ ಜಗತ್ತಿನ ಗಮನ ಸೆಳೆದದ್ದೆಂದರೆ, ವೆನೆಜುವೆಲಾದ ಭದ್ರತಾ ಪಡೆಯ ಸಿಬ್ಬಂದಿ ಓರ್ವ ನೀಡಿರುವ, ಆತ ವೈಯಕ್ತಿಕವಾಗಿ ಗಮನಿಸಿದ ವಿವರಗಳ ಹೇಳಿಕೆ. ಆ ಸಮಯದಲ್ಲಿ ವೆನೆಜುವೆಲಾದ ಸೇನಾ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹೆಲಿಕಾಪ್ಟರ್ಗಳಿಂದ ಇಳಿದು ಬಂದ, ಕೇವಲ 20ರ ಆಸುಪಾಸಿನಲ್ಲಿದ್ದ ಅಮೆರಿಕನ್ ಯೋಧರು ಹೇಗೆ ನೂರಾರು ಯೋಧರನ್ನು ಎದುರಿಸಿ, ಮಣಿಸಿದರು ಎನ್ನುವುದನ್ನು ವಿವರಿಸಿದ್ದ. ಅಮೆರಿಕನ್ ಯೋಧರು ಹಿಂದೆಂದೂ ಕಂಡಿರದ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದರು ಎಂದು ಆತ ವಿವರಿಸಿದ್ದ. ರೇಡಾರ್ ವ್ಯವಸ್ಥೆಗಳು ಇದ್ದಕ್ಕಿದ್ದಂತೆ ವಿಫಲಗೊಂಡವು. ಡ್ರೋನ್ಗಳ ಗುಂಪು ಆಗಸವನ್ನು ಮುತ್ತಿದ್ದವು. ಇದಾದ ನಂತರ ನಿಜಕ್ಕೂ ಆಘಾತಕಾರಿ ಬೆಳವಣಿಗೆ ಘಟಿಸಿತು.

ಆ ಸಿಬ್ಬಂದಿಯ ಪ್ರಕಾರ, ಅಮೆರಿಕನ್ ಪಡೆಗಳು ಒಂದು ʼತೀವ್ರವಾದ ಶಬ್ದದ ಅಲೆʼ ಅಥವಾ ಸೋನಿಕ್ ಬೂಮ್ ಅನ್ನು ಪ್ರಯೋಗಿಸಿದ್ದವು. ಅದರ ಪರಿಣಾಮವಾಗಿ, ತಲೆಯ ಒಳಗಿನಿಂದಲೇ ಏನೋ ಸ್ಫೋಟಿಸಿದಂತಹ ಭಾವನೆ ಉಂಟಾಗಿತ್ತು ಎಂದು ಆತ ವಿವರಿಸಿದ್ದಾನೆ. ಇದರ ಪರಿಣಾಮವಾಗಿ, ಯೋಧರ ಮೂಗಿನಿಂದ ರಕ್ತ ಸುರಿಯಲಾರಂಭಿಸಿತು. ಕೆಲವು ಯೋಧರು ರಕ್ತ ವಾಂತಿ ಮಾಡಿಕೊಂಡರು. ಎಲ್ಲರೂ ಕೆಳಗೆ ಬಿದ್ದು, ಎದ್ದು ನಿಲ್ಲಲು ಅಥವಾ ಯುದ್ಧ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ವೆನೆಜುವೆಲನ್ ಪಡೆಯ ಸಿಬ್ಬಂದಿ ಈ ದಾಳಿಯನ್ನು ವೆನೆಜುವೆಲಾದ ಯೋಧರಿಗೆ ಯಾವುದೇ ಅವಕಾಶ ನೀಡದ ಹತ್ಯಾಕಾಂಡವಾಗಿತ್ತು ಎಂದಿದ್ದಾನೆ. ವೆನೆಜುವೆಲಾದ ನೂರಾರು ಯೋಧರನ್ನು ಕೊಂದರೂ, ಅಮೆರಿಕನ್ ಪಡೆಯಲ್ಲಿ ಯಾವುದೇ ಸಾವು ನೋವು ಉಂಟಾಗಲಿಲ್ಲ ಎಂದು ಆತ ಹೇಳಿದ್ದಾನೆ.

ಈ ಸಿಬ್ಬಂದಿ ನೀಡಿದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ “ನೀವು ಈಗೇನು ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಿ, ಇದನ್ನು ಓದಿ” ಎಂದು ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಫಾಕ್ಸ್ ನ್ಯೂಸ್, ನ್ಯೂಯಾರ್ಕ್ ಪೋಸ್ಟ್ ಸೇರಿದಂತೆ ಬಹಳಷ್ಟು ಮಾಧ್ಯಮಗಳೂ ಈ ʼಸೋನಿಕ್ ಆಯುಧʼದ ಕುರಿತು ವರದಿ ಮಾಡಿದ್ದವು. ಕೆಲವು ಮಾಧ್ಯಮಗಳು ಇದನ್ನು ಒಂದು ರಹಸ್ಯ ಆಯುಧ ಅಥವಾ ಡೈರೆಕ್ಟೆಡ್ ಎನರ್ಜಿ ಡಿವೈಸ್ ಎಂದು ವರದಿ ಮಾಡತೊಡಗಿದವು. ಇತರರು ಅಮೆರಿಕನ್ ಸೇನೆ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದ ಪ್ರಾಣಾಂತಕವಲ್ಲದ ಸೋನಿಕ್ ಉಪಕರಣಗಳಿಗೆ ಸಂಪರ್ಕಿಸಿದವು.

ಹಾಗೆಂದು ಸೋನಿಕ್ ಆಯುಧಗಳು ಹೊಸ ಪರಿಕಲ್ಪನೆಗಳೇನಲ್ಲ. ಇವುಗಳು ಎದುರಾಳಿಯಲ್ಲಿ ನೋವು, ದಿಗ್ಭ್ರಮೆ, ವಾಂತಿ ಅಥವಾ ಕೆಲವೊಮ್ಮೆ ಆಂತರಿಕ ಗಾಯಗಳನ್ನು ಉಂಟುಮಾಡುವಂತಹ ಅತ್ಯಂತ ತೀಕ್ಷ್ಣವಾದ ಶಬ್ದದ ಅಲೆಗಳನ್ನು ಬಳಸುತ್ತವೆ. ಅಪಾರ ಸಂಖ್ಯೆಯಲ್ಲಿ ಸೇರುವ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಮಿಲಿಟರಿ ದೊಡ್ಡ ಶಬ್ದ ಉಂಟುಮಾಡುವ ಲಾಂಗ್ ರೇಂಜ್ ಅಕೌಸ್ಟಿಕ್ ಡಿವೈಸ್ (ಎಲ್ಆರ್ಎಡಿ) ನಂತಹ ಉಪಕರಣಗಳನ್ನು ಬಳಸುತ್ತಾರೆ. ಈ ಹಿಂದೆ ಅಮೆರಿಕನ್ ರಾಜತಾಂತ್ರಿಕರಿಗೆ ʼಹವಾನಾ ಸಿಂಡ್ರೋಮ್ʼ ಕಾಣಿಸಿಕೊಂಡ ಕುರಿತೂ ವರದಿಗಳು ಬಂದಿದ್ದವು. ಇಲ್ಲಿ ವಿಚಿತ್ರವಾದ ಶಬ್ದಗಳು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಿದ್ದವು. ಕೆಲವು ತಜ್ಞರ ಪ್ರಕಾರ, ಇವುಗಳ ಹೆಚ್ಚು ಶಕ್ತಿಶಾಲಿ ಆವೃತ್ತಿಗಳು ಮನುಷ್ಯರನ್ನು ಕೊಲ್ಲದೆಯೇ ಅವರನ್ನು ಅಸಮರ್ಥರಾಗಿಸಬಹುದು.

ಆದರೂ, ಕೆಲವೊಂದು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೇ ಉಳಿದು ಹೋಗಿವೆ. ಅಮೆರಿಕ ಸರ್ಕಾರ ಇಂತಹ ಸೋನಿಕ್ ಆಯುಧಗಳನ್ನು ಬಳಸಿರುವುದನ್ನು ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಅಧಿಕೃತ ವರದಿಗಳು ಡ್ರೋನ್ಗಳು, ನಿಖರ ದಾಳಿಗಳು ಮತ್ತು ಇಲೆಕ್ಟ್ರಾನಿಕ್ ಯುದ್ಧತಂತ್ರಗಳ ಕುರಿತು ಮಾತನಾಡಿವೆಯೇ ಹೊರತು, ಶಬ್ದಾದಾರಿತ ಆಯುಧಗಳ ಕುರಿತು ಎಲ್ಲೂ ಮಾಹಿತಿ ನೀಡಿಲ್ಲ. ಕೆಲವು ವಿಶ್ಲೇಷಕರು ರಕ್ತಸ್ರಾವ ಮತ್ತು ವಾಂತಿಯಂತಹ ಲಕ್ಷಣಗಳು ಸ್ಫೋಟದಿಂದ ಉಂಟಾದ ಆಘಾತದ ಅಲೆಗಳು, ಒತ್ತಡದ ಪರಿಣಾಮವೂ ಆಗಿರಬಹುದು, ಅಥವಾ ಅವರು ಅತಿರಂಜಿತವಾಗಿ ವಿವರಿಸುತ್ತಿರಲೂಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಸೂಪರ್ಸಾನಿಕ್ ಯುದ್ಧ ವಿಮಾನಗಳಿಂದ ಹೊರಬರುವ ಸಾನಿಕ್ ಬೂಮ್ಗಳು ಕಟ್ಟಡಗಳು ನಡುಗುವಂತೆ ಮಾಡಿರುವುದು ಅಮೆರಿಕನ್ ನಗರಗಳಲ್ಲಿ ನಡೆಸಿರುವ ಪರೀಕ್ಷೆಗಳಲ್ಲಿ ಕಂಡುಬಂದಿದ್ದು, ವೆನೆಜುವೆಲಾದಲ್ಲೂ ಅದೇ ಆಗಿರುವ ಸಾಧ್ಯತೆಗಳಿವೆ ಎಂದಿದ್ದಾರೆ.

ಈ ದಾಳಿ ಜಗತ್ತಿಗೆ ದೊಡ್ಡ ಸಂದೇಶವನ್ನೇ ರವಾನಿಸಿದೆ. ವೆನೆಜುವೆಲಾ ರಷ್ಯಾ, ಚೀನಾ ಮತ್ತು ಇರಾನ್ಗಳೊಡನೆ ಆತ್ಮೀಯ ಸಂಬಂಧ ಹೊಂದಿತ್ತು. ವೆನೆಜುವೆಲಾ ಬ್ರಿಕ್ಸ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ, ಈಗ ಅಮೆರಿಕ ನಡೆಸಿರುವ ಕಾರ್ಯಾಚರಣೆ ಅದು ಇನ್ನೊಂದು ದೇಶದ ಒಳಗೂ ಅತ್ಯಂತ ಕ್ಷಿಪ್ರ ಮತ್ತು ನಿಖರವಾದ ದಾಳಿ ನಡೆಸಬಲ್ಲದು ಎನ್ನುವುದನ್ನು ಸಾಬೀತುಪಡಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಕುರಿತೂ ಕಳವಳಗಳನ್ನು ಮೂಡಿಸಿದೆ. ರಷ್ಯಾ, ಇರಾನ್ ಸೇರಿದಂತೆ ಬಹಳಷ್ಟು ದೇಶಗಳು ಅಮೆರಿಕದ ಕಾರ್ಯಾಚರಣೆಯನ್ನು ವೆನೆಜುವೆಲಾದ ಸಾರ್ವಭೌಮತ್ವದ ಉಲ್ಲಂಘನೆ ಎಂದಿವೆ. ವಿಶ್ವಸಂಸ್ಥೆ ಮತ್ತು ಇತರ ದೇಶಗಳು ಸದ್ಯದಲ್ಲೇ ಈ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.

ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಘಟನೆ ಒಂದು ಎಚ್ಚರಿಕೆಯಾಗಿದೆ. ಆಧುನಿಕ ತಂತ್ರಜ್ಞಾನ ಯುದ್ಧಗಳನ್ನು ಕ್ಷಣಮಾತ್ರದಲ್ಲಿ ಬದಲಿಸಬಲ್ಲದು. ಡ್ರೋನ್ಗಳು, ಜಾಮಿಂಗ್ ಮತ್ತು ಹೊಸ ಆಯುಧಗಳನ್ನು ಹೊಂದಿರುವ ಸಣ್ಣ ಪಡೆಗಳೂ ದೊಡ್ಡ ಸೇನೆಗಳನ್ನು ಸೋಲಿಸಬಲ್ಲವು. ಇದು ವಿದೇಶೀ ಆಯುಧಗಳ ಮೇಲೆ ಅವಲಂಬನೆ ಹೊಂದುವುದರ ಅಪಾಯವನ್ನೂ ಪ್ರದರ್ಶಿಸಿದೆ. ವೆನೆಜುವೆಲಾ ಹೊಂದಿದ್ದ ರಷ್ಯನ್ ಮತ್ತು ಚೀನೀ ಆಯುಧ ವ್ಯವಸ್ಥೆಗಳು ದಾಳಿಯನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದವು.

ಸೋನಿಕ್ ಕ್ಷಿಪಣಿಗಳು ಅಥವಾ ಬೂಮ್ಗಳ ಕುರಿತ ಪೂರ್ಣ ಸತ್ಯ ಹೊರಬರಲು ಒಂದಷ್ಟು ಸಮಯ ಬೇಕಾಗಬಹುದು. ಇದು ನಿಜಕ್ಕೂ ನೇರವಾದ ಸೋನಿಕ್ ಆಯುಧವಾಗಿತ್ತೇ? ಅಥವಾ ಆಧುನಿಕ ಯುದ್ಧ ಮೂಡಿಸಿದ್ದ ಭೀತಿಯೇ? ವೆನೆಜುವೆಲನ್ ಯೋಧನ ಕಥೆ ಬಹಳಷ್ಟು ಜನರಿಗೆ ಆಘಾತ ಮೂಡಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಹೊರಬರುವ ತನಕ ಇದು ಒಂದು ರಹಸ್ಯವಾಗಿಯೇ ಉಳಿಯಲಿದೆ. ಆದರೆ, ವೆನೆಜುವೆಲಾದಲ್ಲಿ ಅಮೆರಿಕ ನಡೆಸಿರುವ ಕಾರ್ಯಾಚರಣೆ ಜಾಗತಿಕ ಅಧಿಕಾರದ ಆಟವನ್ನು ಬದಲಾಯಿಸಿಬಿಟ್ಟಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.