ಕಳೆದ ಮೂರು ವರ್ಷಗಳಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣದಿಂದ ಹಲವು ಬಗೆಯ ನಷ್ಟಗಳನ್ನು ಎದುರಿಸಬೇಕಾಯಿತು. ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಬಿಗಡಾಯಿಸಿತು. ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ‘ಸ್ಪಾಂಜ್ ನಗರ’ ಅಭಿಯಾನ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ.

ಮಳೆ ನೀರಿನ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿರುವ ರಸ್ತೆಗಳನ್ನು ನಿರ್ಮಿಸುವುದು, ತಾರಸಿ ತೋಟ, ಸೂಕ್ತ ರೀತಿಯಲ್ಲಿ ಮಳೆ ನೀರಿನ ಸಂಗ್ರಹ, ನಗರ ಪ್ರದೇಶಗಳಲ್ಲಿ ಉದ್ಯಾನ ನಿರ್ಮಾಣ ಹಾಗೂ ಕೆರೆಗಳನ್ನು ಅಭಿವೃದ್ಧಿಪಡಿಸುವುದು ಸ್ಪಾಂಜ್ ನಗರ ಪರಿಕಲ್ಪನೆಯ ರೂಪುರೇಷೆ.

ಪ್ರಸ್ತುತ ಅವೈಜ್ಞಾನಿಕ ನಗರ ಯೋಜನೆಗಳಿಂದಾಗಿ ಭಾರತದ ಮಹಾನಗರ ಪಾಲಿಕೆಗಳಲ್ಲಿ ಪ್ರವಾಹದ ಪರಿಸ್ಥಿತಿ ಗಣನೀಯವಾಗಿ ಹೆಚ್ಚಳವಾಗಿದ್ದು, ಸಾಕಷ್ಟು ಆಸ್ತಿಪಾಸ್ತಿ ಹಾನಿಗೆ ಒಳಗಾಗಿದೆ. ಪ್ರವಾಹದ ಕಾರಣದಿಂದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ವಿಶ್ವ ಹವಾಮಾನ ಸಂಘಟನೆ ಈಗಾಗಲೇ ನಗರ ಪ್ರದೇಶದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಭೂನೀತಿಯನ್ನು ಜಾರಿಗೆ ತರಬೇಕು. ಜತೆಗೆ ಸಾಧ್ಯವಾದಷ್ಟು ಸ್ಪಾಂಜ್ ನಗರಗಳ ಅನುಷ್ಠಾನಕ್ಕೆ ಸರ್ಕಾರಗಳು ಮುಂದಾಗಬೇಕು ಎಂದು ಪ್ರತಿಪಾದಿಸಿದೆ.

ನಗರ ಪ್ರದೇಶಗಳಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದ ಪ್ರತಿ ವರ್ಷ ಶುದ್ಧ ಮಳೆ ನೀರು ಯಾವುದೇ ರೀತಿಯ ಉಪಯೋಗಕ್ಕೆ ಬಾರದೆ ಪೋಲಾಗುತ್ತಿದೆ. ಅತ್ಯಂತ ಮೌಲ್ಯವರ್ಧಿತ ನೈಸರ್ಗಿಕ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣದಿಂದ ಸ್ಪಾಂಜ್ ನಗರಗಳ ಅವಶ್ಯಕತೆ ಎದುರಾಗಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಕೆರೆಗಳನ್ನು ಮತ್ತು ಸರೋವರಗಳನ್ನು ಮುಚ್ಚಲಾಗಿದೆ. ನೈಸರ್ಗಿಕವಾಗಿ ಮಳೆ ನೀರು ಸಂಗ್ರಹಗೊಳ್ಳುತ್ತಿದ್ದ ಪ್ರದೇಶಗಳಲ್ಲಿ ಬೃಹದಾಕಾರದ ಕಟ್ಟಡಗಳು ನಿರ್ಮಾಣವಾಗಿದೆ.

ಎಲ್ಲಾ ಸರೋವರಗಳನ್ನು ಮತ್ತು ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಅಗತ್ಯವಾಗಿ ಮಾಡಬೇಕಿದೆ. ಜನಸಂಖ್ಯೆ ಹೆಚ್ಚಾದಂತೆ ನಗರಗಳು ವಿಸ್ತಾರಗೊಳ್ಳುತ್ತಿವೆ. ಮುಂದಿನ ವರ್ಷಗಳಲ್ಲಿ ಬರುವ ಪ್ರವಾಹದ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಎದುರಿಸಬೇಕಾದರೆ ‘ಸ್ಪಾಂಜ್ ನಗರ’ಪರಿಕಲ್ಪನೆಯ ಅಗತ್ಯವಿದೆ ಎಂದು ಪರಿಸರತಜ್ಞರು ಪ್ರತಿಪಾದಿಸಿದ್ದಾರೆ.

ಅಭಿಯಾನದ ಪ್ರಾಮುಖ್ಯತೆ

ಸ್ಪೋಂಜ್ ನಗರ ಅಭಿಯಾನವನ್ನು ಹಮ್ಮಿಕೊಂಡರೆ ನಗರ ಪ್ರದೇಶದ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಬಹುದು ಹಾಗೂ ಅಂತರರಾಜ್ಯ ನದಿ ನೀರಿನ ವಿವಾದಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದಾಗಿದೆ.

ಸ್ಪೋಂಜ್ ನಗರಗಳ ನಿರ್ಮಾಣದಿಂದ ಅಂತರ್ಜಲದ ಮಟ್ಟ ಹೆಚ್ಚಳವಾಗಿ ಸ್ಥಳೀಯ ಜಲ ಸಂಪನ್ಮೂಲಗಳನ್ನೇ ನಗರವಾಸಿಗಳು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ದೀರ್ಘಕಾಲದಲ್ಲಿ ಸ್ಪೋಂಜ್ ನಗರಗಳು ಇಂಗಾಲದ ಡೈಆಕ್ಸೈಡ್ ಹೊರಸುವಿಕೆಯನ್ನು ತಗ್ಗಿಸುತ್ತದೆ ಹಾಗೂ ನೈಸರ್ಗಿಕವಾಗಿ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆಗಳನ್ನು ತಗ್ಗಿಸಲು ಸಹಕಾರಿಯಾಗುತ್ತದೆ.

ಸ್ಪೋಂಜ್ ನಗರಗಳ ಅಭಿವೃದ್ಧಿಯನ್ನು ಸೂಕ್ತ ಗತಿಯಲ್ಲಿ ನಿರ್ವಹಿಸಿದರೆ ಪ್ರವಾಹಗಳ ದುಷ್ಪರಿಣಾಮವನ್ನು ಸಾಧ್ಯವಾದಷ್ಟು ತಗ್ಗಿಸಬಹುದು ಹಾಗೂ ಅಂತರ್ಜಲದ ನೀರಿನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದು.

ಸ್ಪೋಂಜ್ ನಗರಗಳ ಅಭಿವೃದ್ಧಿಯಾದರೆ ವಾಯುಗುಣಮಟ್ಟವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಹಾಗೂ ನಗರ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಬಹುದಾಗಿದೆ.

ಪ್ರಸ್ತುತ ಭಾರತ ಸರ್ಕಾರ ನಗರ ಪ್ರದೇಶಗಳ ಅಭಿವೃದ್ಧಿಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸ್ಪೋಂಜ್ ನಗರಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದರೆ ಮುಂದಿನ ದಿನಗಳಲ್ಲಿ ಪ್ರವಾಹದಂತ ಪರಿಸ್ಥಿತಿಗಳನ್ನು ಸೂಕ್ತವಾಗಿ ಎದುರಿಸಲು ಸಜ್ಜಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.