‘ಇದೇನ್ರಿ, ಹಮ್ ದೊ ಬದಲು ಹಮಾರೆ ತೀನ್ ಅಂತಿದಾರೆ ಇವರು?’ ಎಂದು ಮಡದಿ ಆಶ್ಚರ್ಯಪಟ್ಟಳು.

‘ಯಾರು?’ ಎಂದೆ. ‘ಭಗತ್’ ಎಂದಳು.

‘ಚೇತನ್ ಭಗತ್ ತಾನೆ? ಅವರು ಬರೆದಿದ್ದು ‘ತ್ರೀ ಮಿಸ್ಟೇಕ್ಸ್ ಇನ್ ಮೈ ಲೈಫ್’ ಕಾದಂಬರಿ.
ತ್ರೀ ಕಿಡ್ಸ್ ಅಲ್ಲ’ ಎಂದೆ.

‘ಆ ಭಗತ್ ಅಲ್ಲಾರಿ. ಆರ್ಎಸ್ಎಸ್ ಬಾಸ್’.

‘ಅವರು ಭಾಗವತ್, ಮೋಹನ್ ಭಾಗವತ್’.

‘ಹ್ಞೂಂ! ಅವರೇ. ಎಲ್ಲರಿಗೂ ಮೂವರು ಮಕ್ಕಳಿರಲಿ ಎಂದು ಹಾರೈಸಿದಾರಲ್ಲ ಓದಿದ್ರಾ?’

‘ಗೊತ್ತಾಯಿತು. ಭಾರತದ ಜನಸಂಖ್ಯೆ ಕಡಿಮೆ ಆಗ್ತಿದೆ ಎಂದು ಅವರಿಗೆ ಕಳವಳ’.

‘ಕಡಿಮೆ? ನಾವು ಚೀನಾವನ್ನು ಹಿಂದಿಕ್ಕಿದೀವಿ ಈ ವಿಷಯದಲ್ಲಿ. ಅವರಿಗೇಕೆ ಕಳವಳ?’

‘ಫಲವಂತಿಕೆ ದರ ಕುಸೀತಾ ಇದೆ, ಹೀಗೇ ಮುಂದುವರಿದರೆ ಹಿಂದೂಗಳ ಸಂಖ್ಯೆ ಕುಸಿಯುತ್ತೆ. ಆದ್ದರಿಂದ ಜನಸಂಖ್ಯೆ ಮೇಕಪ್ ಮಾಡಲು ಎಲ್ಲ ಹೆಣ್ಣುಮಕ್ಕಳು ಮೂವರು ಮಕ್ಕಳನ್ನು ಹೆರಬೇಕು ಎಂದು ಕಳಕಳಿಯಿಂದ ಹೇಳಿದ್ದಾರೆ’.

‘ಈಗ ಆರತಿಗೊಂದು ಕೀರ್ತಿಗೊಂದು. ಮೂರನೆಯದು? ಆರತಿಗೊ ಕೀರ್ತಿಗೊ?’

‘ಆರತಿಗೆ ಎರಡು ಕೀರ್ತಿಗೆ ಒಂದು ಆದರೆ?’

‘ಅಥವಾ ಕೀರ್ತಿಗೆ ಎರಡು ಆಗಿ ಆರತಿಗೆ ಒಂದು ಸಹ ಆಗಬಹುದು’.

‘ಎರಡೂ ಆರತಿಗೆ ಆಗಿ ಕೀರ್ತಿಗೆ ಒಂದಿರಲಿ ಎಂದು ಪ್ರಯತ್ನಿಸಿದಾಗ ಅದೂ ಎಡವಟ್ಟಾಗಿ ಆರತಿಗೇ ಆದರೆ? ಆಗ ಕೀರ್ತಿಗೆ ಬೇಕೇಬೇಕು ಎಂದು ಮತ್ತೆ ಪ್ರಯತ್ನಿಸಿದರೆ?’

‘ಭಾಗವತ್ರಿಗೆ ಖುಷ್ ಆಗಬಹುದು. ಜನಸಂಖ್ಯೆ ಜಾಸ್ತಿ ಆಗುತ್ತಲ್ಲ’.

‘ಅಪ್ಪ ಅಮ್ಮನ ಪಾಡು? ಹಮ್ ದೊ ಹಮಾರ ದೊ ಪ್ರಕಾರವೇ ಪ್ರತಿವರ್ಷ ಎರಡೆರಡು ಬರ್ತ್ಡೇ, ಎರಡೆರಡು ನರ್ಸರಿ ಶಾಲೆಯಲ್ಲಿ ಸೀಟ್, ಎರಡೆರಡು ಕಾಲೇಜು ಅಡ್ಮಿಷನ್ಗೆ ಅಲೆದಾಟ, ಎರಡೆರಡು ಡೊನೇಷನ್... ಹೀಗಿರುವಾಗ ಈ ಎರಡು ಮೂರಾದರೆ?’

‘ಬರಗಾಲದಲ್ಲಿ ಅಧಿಕಮಾಸದಂತೆ ಆಗುತ್ತೆ’.

‘ಅಂದಹಾಗೆ ಭಾಗವತರಿಗೆ ಮಕ್ಕಳೆಷ್ಟು?!’

‘ಅವರಿಗೆ ಮದುವೆಯೇ ಆಗಿಲ್ಲ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.