‘ಸಾ, ನೀವ್ಯಾಕೆ ಬಾಡು-ಬಳ್ಳೆ ಬುಟ್ಟು ಮೋದಿ ಮಹಾರಾಜರ ಬೊಜ್ಜು ಅಭಿಯಾನಕ್ಕೆ ಸೇರಿಕ್ಯಂದು ಬೊಜ್ಜು ತ್ಯಾಗ ಮಾಡಬಾರದು?’ ಅಂತ ಸಲಹೆ ಕೊಟ್ಟೆ.

‘ಬೊಡ್ಡಿಹೈದ್ನೆ, ಬಾಡು-ಹಿಟ್ಟಿನ ಬಾಡುಗಾರಿಕೆಯಲ್ಲಿ ಪಾನೀಕರಿಗೆ ಬೊಜ್ಜು ಪಕ್ಕವಾದ್ಯ ಇದ್ದಂಗೆ ಕನೋ. ‘ನೀವೂ ಬಾಡು ತಿನ್ನಿ ಎಲ್ಲರಿಗೂ ಬಾಡು ತಿನ್ನಿಸಿ’ ಅಂಬೋ ಬೊಜ್ಜಿನಕೂಟ ನಮ್ಮದು’ ಅವರ ಉತ್ತರಕ್ಕೆ ದಂಗಾದೆ.

‘ಅಂದ್ರೆ ಬೊಜ್ಜುಗಾರರ ಮೆನು ಕಿ ಬಾತಿನಲ್ಲಿ ಬಾಡು ಇರಲೇಬೇಕು’ ಅಂತಂದೆ.

‘ನೋಡ್ಲಾ ಮೋದಿ ಮಹಾರಾಜರು ಅದಬುಡಿ, ಇದಬುಡಿ ಅಂತ ಹೇಳ್ತನೇ ಇರತರೆ. ಉಳ್ಳೋರೆಲ್ಲಾ ಗ್ಯಾಸ್ ಸಬ್ಸಿಡಿ ಬುಟ್ಕೊಡಿ ಅಂದುದ್ಕೆ ಎಷ್ಟು ಜನ ರಾಜಕಾರಣಿಗಳು ಸಬ್ಸಿಡಿ ಬುಟ್ಕೊಟ್ರು? ಯಾರಿಗೂ ಕಾಣದಂಗೆ ಗ್ಯಾಸ್ ಸಬ್ಸಿಡಿನೇ ಎಪ್ಪೆಸ್ ಆಗೋಯ್ತು’ ಅಂತ ನೊಂದ್ಕಂದರು.

‘ದಿಟ ಸಾ, ಮೋದಿ ಮಹಾರಾಜರು ಕರ್ನಾಟಕದ ಎಲ್ಲ ರಾಜಕಾರಣಿಗಳೂ ಒಂದು ತಿಂಗಳಲ್ಲಿ ಹತ್ತು ಕೇಜಿ ತೂಕ ಇಳಿಸಲೇಬೇಕು ಅಂತ ಅಭಿಯಾನ ಮಾಡಬಕು. ಯಾಕೇಂದ್ರೆ ಕೂತ ಕಡೆಗೇ ಕಾಸು ಬರಕ್ಕೆ ಸುರುವಾದಾಗ್ಲೇ ಮುದಿಮೋಹ, ಕೊಬ್ಬಿನ ಭಾರ, ಪಿತ್ತಭ್ರಮೆ ಬರದು’ ತುರೇಮಣೆ ಮಾತಿಗೆ ನಾನು ಒಪ್ಪಿದೆ.

‘ಮೋದಿ ಮಾರಾಜರ ಮಾತು ಕೇಳಬಾರದು ಅಂತ ಸಿಎಂ ಈ ಸಾರಿ ಕೂಕಂದೇ ಸಿಟ್ಟಿನ ಬಜೆಟ್ ಮಾಡ್ತರಂತೆ. ಈ ಬೇಗುದಿಯಲ್ಲಿ ಯಾರ್ಯಾರಿಗೆ ಬೈತಾರೋ ಕಾಣೆ’ ಯಂಟಪ್ಪಣ್ಣ ಒಗ್ಗರಣೆ ಹಾಕಿತು.

‘ಇವರು ಯಾವಾಗ ಎದ್ದಾರೋ ಅಂತ ಆಕಾಂಕ್ಷಿಗಳು ಗೋ-ನಾಮ ಹಾಡ್ತಾವ್ರೆ. ಸಿಎಂ ಮಾತ್ರ ‘ನಾನು ಎದ್ರೆ ತಾನೆ. ನಾನು ಕೂತ ಮ್ಯಾಲೆ ನನ್ನದೇ ಹವಾ’ ಅಂತ ನಾಟಿಪಟ್ಟು ಹಾಕ್ಯವ್ರಂತೆ’ ಅಂದ್ರು ತುರೇಮಣೆ.

‘ಯಂಗನ್ನಾ ಆಗ್ಲಿ ಈ ಸಾರಿ ಬಜೆಟ್ಟಲ್ಲಿ ತೀರ್ಥರೂಪರಿಗೆಲ್ಲಾ ವಿಸ್ಕಿ ನಿಧಿ ಯೋಜನೆಯಲ್ಲಿ ಬಾರಿಂದ ಮನೆಗೆ ಫ್ರೀ ಬಸ್ಸಿನ ಪಾನೀಕ ಶಕ್ತಿಭಾಗ್ಯ ಕೊಡಬೇಕು ಅಂತ ಪೆಗ್ಗುಪ್ರಣಾಮ ಮಾಡ್ತುದವಿ’ ಅಂತ ಬಾಯಿ ಚಪ್ಪರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.