ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸಿಹಿ ಸುದ್ದಿ

Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅಡುಗೆಮನೆಯಿಂದ ಹೊರಬರುತ್ತಿದ್ದ ತುಪ್ಪದ ಪರಿಮಳ... ಕಣ್ಣು ಪೇಪರಿನಲ್ಲಿ ಅಡ್ಡಾಡುತ್ತಿದ್ದರೂ ನಾಸಿಕ ಶಾರ್ಪ್ ಆಗಿತ್ತು. ‘ಸಿಹಿ ತಿಂಡಿಯ ತಯಾರಿ ನಡೆದಿದೆ ಅನ್ಸುತ್ತೆ? ಏನು ವಿಶೇಷವೋ?’ ಎಂದು ಕೇಳಬೇಕಾದವರಿಗೆ ಕೇಳುವಂತೆ ಕೊಂಚ ದನಿಯೇರಿಸಿದೆ.‌

‘ಪೇಪರ್ನಲ್ಲೇ ಮುಳುಗಿರ್ತೀಯಾ... ಅಷ್ಟೂ ಗೊತ್ತಾಗಲಿಲ್ವೇನಪ್ಪಾ?’ ಪುಟ್ಟಿ ಕಿಸಕ್ಕನೆ ನಕ್ಕಳು.

‘45 ವರ್ಷ ಮೇಲ್ಪಟ್ಟವರಿಗೆ ಲಸಿಕೆ? ಸೀನಿಯರ್ ಸಿಟಿಜನ್ ಅಂತ ಹೇಳ್ಕೊಳ್ಳೋಕ್ಕೆ ಹಿಂಜರಿಯೋವ್ರು ಈ ಅವಕಾಶ ಉಪಯೋಗಿಸಿಕೊಳ್ಳಬಹುದು. ಉದಾಹರಣೆಗೆ, ನಿಮ್ಮ ಸಮಾಜದ ಸರೋಜ’ ನನ್ನವಳ ಕಾಲೆಳೆದೆ.

‘ಖಾಲಿ ಕುಳಿತಿರೋ ನಿಮಗೆ ಈ ತುಟ್ಟಿ ಕಾಲದಲ್ಲೂ ಟೈಮ್ ಟೈಮ್‌ಗೆ ಮಾಡಿ ಹಾಕ್ತೀವಿ ನೋಡಿ?’ ಗುರಾಯಿಸಿದಳು.

‘ಕೆಲಸ ಮಾಡೋಕ್ಕೆ ನಾವು ರೆಡಿ. ಆದರೆ ಅರವತ್ತಾಯ್ತು ಅಂತ ಅಟ್ಬಿಟ್ರಲ್ಲ?’ ಹಲ್ಕಿರಿದೆ. ಸಮಯಕ್ಕೆ ಸರಿಯಾಗಿ ಕಂಠಿ ಜಾಯಿನ್ ಆದ.

‘ಇಕೋ, ತುಪ್ಪದ ಮೈಸೂರು ಪಾಕು’ ಜಿಡ್ಡು ಒಸರುತ್ತಿದ್ದ ಪೇಪರ್ ಬಾಕ್ಸ್ ಕೊಟ್ಟು ‘ಹಳೇ ಕಾರು ಗುಜರಿಗೆ ಹಾಕಿ, ಹೊಸದನ್ನು ಕೊಳ್ಳಿ ಸಬ್ಸಿಡಿ ಇದೆ ಅಂತ ಬಾಸ್‌ಗೆ ಸಜೆಶನ್ ಕೊಟ್ಟೆ. ಅವರ ಅತ್ತೆಗೆ ಲಸಿಕೆ ಹಾಕಿಸೋಕ್ಕೆ ನಾನೇ ಖುದ್ದು ನಿಂತೆ. ಬಾಸ್, ಜೊತೆಗೆ ಮೇಡಮ್ಮೂ ಖುಷ್‌. ಸಂಬಳದಲ್ಲಿ ಮಾಮೂಲಿ ಇನ್‌ಕ್ರಿಮೆಂಟ್ ಜೊತೆಗೆ ಐದು ಪರ್ಸೆಂಟ್ ಎಕ್ಸ್‌ಟ್ರಾ ಹೈಕು, ಅದಕ್ಕೆ ಈ ಸಿಹಿ’ ಬೀಗಿದ.

‘ನಮ್ಮ ಮನೇಲಿ ಇವತ್ತು ಸಜ್ಜಿಗೆ’ ನಾನೆಂದೆ.

‘ಅಲ್ವೇ ಮತ್ತೆ? ಸರ್ಕಾರೀ ಚಿನ್ನದ ಮಳಿಗೆ ಅಂದರೆ ನಮಗೂ ವಿಶ್ವಾಸ. ಇನ್ನೊಂದು ಆಕರ್ಷಣೆ ಎಂದರೆ ಉಡುಗೊರೆಯಾಗಿ ಕೊಡಲು ಗಂಡಭೇರುಂಡ ನಾಣ್ಯಗಳು’ ಅತ್ತೆಯ ರಿಯಾಕ್ಷನ್.

‘ಆ ಉಡುಗೊರೆ ಕೊಡೋ ಸಮಾರಂಭದಲ್ಲಿ ಒಂದು ಜಾಗ ಗಿಟ್ಟಿಸಿದರಾಯ್ತು’ ಕುಳಿತಲ್ಲಿಯೇ ಕನಸು ಕಂಡ ಕಂಠಿ.

ಹುರಿದ ದ್ರಾಕ್ಷಿ, ಗೋಡಂಬಿಗಳ ಅಲಂಕಾರದೊಂದಿಗೆ ಹದವಾದ ಸಜ್ಜಿಗೆ ಕಂಠಿಯ ಪಾಲಾಗಿತ್ತು, ನನಗಿಂತ ಮೊದಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT