ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಐಪಿಎಲ್ ಧಾರಾವಾಹಿ

Last Updated 2 ಜೂನ್ 2022, 19:30 IST
ಅಕ್ಷರ ಗಾತ್ರ

(ಐಪಿಎಲ್ ಧಾರಾವಾಹಿ ಮುಗಿದ ಮೇಲೆ ಅಸಂಖ್ಯಾತ ಓದುಗ ಅಭಿಮಾನಿಗಳಿಂದ ಬಂದ ಪತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಾರಾಂಶವಾಗಿ ಕೊಡಲಾಗಿದೆ. ಯಾರೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ).

ಅಯ್ಯೋ ಐಪಿಎಲ್ ಮುಗಿದೇ ಹೋಯ್ತೆ?

ಐಪಿಎಲ್ ಇನ್ನೂ ಒಂದಿಷ್ಟು ದಿನ ನಡೆಯಬೇಕಿತ್ತು.

ಐಪಿಎಲ್ ಮುಂದುವರಿಸಿದ್ದಿದ್ದರೆ ಇವರ ಗಂಟೇನು ಹೋಗುತ್ತಿತ್ತು?

ಸತತವಾಗಿ 74 ಪಂದ್ಯಗಳನ್ನು ನೋಡಿದೆ. ಈಗ ನಾನೇನು ನೋಡಲಿ?

ಇನ್ನು ಮುಂದೆ ಕೆಲವು ದಿನ 7.30ರ ನಂತರ ರಾತ್ರಿ ಮನೆಯಲ್ಲಿ ಶೂನ್ಯ ಆವರಿಸುತ್ತದೆ.

-ಕೆಲವು ಗಂಡಸರು ಬರೆದ ಪತ್ರಗಳು.

ಇಷ್ಟು ದಿನ ನನ್ನ ಗಂಡ ಸರಿಯಾಗಿ 7.30ಕ್ಕೆ ಮೊದಲೇ ಮನೆಗೆ ಬರುತ್ತಿದ್ದರು. ಇನ್ನು ಮುಂದೆ ಹೇಗೋ ಏನೋ. ಎಲ್ಲಿ ಹೋಗಿ ಬರ್ತಾರೋ ಏನೋ?

ಸದ್ಯ ಮುಗಿಯಿತಲ್ಲ. ಮನೆಯಲ್ಲಿ ಕೂಗಾಟ, ಚೀರಾಟ ಇನ್ನು ಕಡಿಮೆಯಾಗುತ್ತದೆ.
ಕರೆಂಟ್ ಬಿಲ್ ಉಳಿಯುತ್ತದೆ. ಮ್ಯಾಚ್ ಇಲ್ಲದಿರುವುದರಿಂದ 10 ಗಂಟೆಗೇ ದೀಪ ಆರಿಸಬಹುದು.

ನಾಳೆಯಿಂದ ಮಕ್ಕಳು ಓದಿನ ಕಡೆ ಗಮನಹರಿಸುವರೇ?

-ಗೃಹಿಣಿಯರ ಅನಿಸಿಕೆ

ಕೊಹ್ಲಿ ತನ್ನ ಮಗುವಿನ ಕಡೆ ಹೆಚ್ಚು ಗಮನ ಕೊಡುವರೋ ಅಥವಾ ತಮ್ಮ ಫಾರ್ಮ್ ಉತ್ತಮ ಪಡಿಸಿಕೊಳ್ಳಲು ಅಭ್ಯಾಸದ ಕಡೆ
ಹೆಚ್ಚು ಗಮನ ಕೊಡುವರೋ ಕಾದು ನೋಡಬೇಕಿದೆ.

-ಒಬ್ಬ ಅಧಿಕ ಪ್ರಸಂಗಿ

ಮುಂದಿನ ಐಪಿಎಲ್‍ನಲ್ಲಿ ಆಟಗಾರರಿಗೆ ಸಂಭಾವನೆಯನ್ನು ಬಿಟ್ ಕಾಯಿನ್ ರೂಪದಲ್ಲಿ ಕೊಡುವರೇ? ಏಕೆಂದರೆ ಈಗಾಗಲೇ ಅವರ ಬಳಿ ಸಾಕಷ್ಟು ರೂಪಾಯಿ ನೋಟುಗಳಿವೆ.
-ಹಣಕಾಸು ತಜ್ಞ

ಆರ್‌ಸಿಬಿ ವಿರುದ್ಧ ಕೆಲವು ಕನ್ನಡಿಗ ಆಟಗಾರರೇ ಮೈದಾನದಲ್ಲಿ ದಾಳಿ ಮಾಡಿದ್ದು ದುರದೃಷ್ಟಕರ ಅಲ್ಲವೇ?

-ಕನ್ನಡಾಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT