ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | 2024ರ ರಜಾಪರ್ವ

ಆನಂದ
Published 6 ಜನವರಿ 2024, 0:14 IST
Last Updated 6 ಜನವರಿ 2024, 0:14 IST
ಅಕ್ಷರ ಗಾತ್ರ

ಜನವರಿ: ಸೋಮವಾರದ ಸಂಕ್ರಾಂತಿಯಿಂದ ರಜಾಪರ್ವದ ಶುಭಾರಂಭ. ಶನಿವಾರ, ಭಾನುವಾರ ಸೇರಿಸಿಕೊಂಡರೆ ಮೂರು ದಿನಗಳ ರಜೆ. ಶುಕ್ರವಾರದ ರಿಪಬ್ಲಿಕ್ ಡೇ ಜತೆ ಶನಿವಾರ, ಭಾನುವಾರ ಕಂಬೈನ್ಡ್ ಮಾಡಿದರೆ ಮತ್ತೆ ತ್ರೀ ಡೇಸ್‌ ಹಾಲಿಡೆ.

ಫೆಬ್ರುವರಿ: ನೀರಸ ತಿಂಗಳು.

ಮಾರ್ಚ್: ಶಿವರಾತ್ರಿ ಮರುದಿನ ಸೆಕೆಂಡ್ ಸಾಟರ್ಡೇ ರಜೆ. ನಂತರ ಭಾನುವಾರ ರಜೆ. ಮತ್ತೆ 3 ದಿನಗಳ ರಜಾಪರ್ವ. ಗುಡ್ ಫ್ರೈಡೆಗೆ ರಜೆ. ಶನಿವಾರ ರಜೆ ಹಾಕಿ ಮರುದಿನದ ಭಾನುವಾರ ಸೇರಿಸಿದರೆ ಮೂರು ದಿನ ಚುಟ್ಟಿ!

ಏಪ್ರಿಲ್: ರಜೆಗಳ ಮಹಾಪೂರವಿದೆ. ಆದರೆ, ಕ್ಯಾಲೆಂಡರ್ ಎಡವಟ್ಟಿನಿಂದ ಅಂಬೇಡ್ಕರ್ ಮತ್ತು ಮಹಾವೀರ ಜಯಂತಿಗಳು ಭಾನುವಾರ ಬಂದು ಎರಡು ರಜೆ ಲಾಸ್. ಇಲ್ಲದಿದ್ದಲ್ಲಿ ಯುಗಾದಿ ಮತ್ತು ರಂಜಾನ್ ಸೇರಿ 5 ದಿನ ರಜೆ ಇರುತ್ತಿತ್ತು.

ಮೇ: ಬಸವ ಜಯಂತಿ ಶುಕ್ರವಾರ, ಶನಿವಾರ ಸೆಕೆಂಡ್ ಸಾಟರ್ಡೇ ಆಗಿರುವುದರಿಂದ ಮತ್ತೆ ತ್ರೀಡೇಸ್‌ ಹಾಲಿಡೆ. ಬುದ್ಧಪೂರ್ಣಿಮಾ ಗುರುವಾರವಾದ್ದರಿಂದ ಅಟ್ಯಾಚ್‍ಮೆಂಟ್ ಅಸಾಧ್ಯ.

ಜೂನ್: ಬಕ್ರೀದ್ ಸೋಮವಾರ. ಶನಿವಾರ, ಭಾನುವಾರದ ಜತೆ ಅಟ್ಯಾಚ್ ಮಾಡಿ.

ಜುಲೈ: ಯೂಸ್‍ಲೆಸ್. ಒಂದೂ ಇಲ್ಲ.

ಆಗಸ್ಟ್: ಪಂದ್ರ ಆಗಸ್ಟ್ ಗುರುವಾರ. ರಿಪಬ್ಲಿಕ್ ಡೇ ತರಹ ಕೊಆಪರೇಟಿವ್ ಅಲ್ಲ.

ಸೆಪ್ಟೆಂಬರ್: ವಿನಾಯಕ ಜಯಂತಿ ಶನಿವಾರ. ಮರುದಿನ ಭಾನುವಾರ. ಗಣೇಶ ಪೂಜೆ ಮಾಡದಿರುವವರಿಗೆ 2 ದಿನದ ಪಿಕ್‍ನಿಕ್ ಸಾಧ್ಯ.

ಅಕ್ಟೋಬರ್: ಓವರ್‌ಕ್ರೌಡೆಡ್ ಮಂತ್. ಗಾಂಧಿ ಜಯಂತಿ, ಆಯುಧಪೂಜೆ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ ಎಲ್ಲವೂ ಈ ತಿಂಗಳಲ್ಲೇ. ಆಯುಧಪೂಜೆ ಶುಕ್ರವಾರ ಬಂದಿದ್ದು ಶನಿವಾರ, ಭಾನುವಾರದ ಜತೆ ಅಟ್ಯಾಚ್‍ಮೆಂಟ್ ಸಾಧ್ಯ.

ನವೆಂಬರ್: ಶುಕ್ರವಾರದಂದು ರಾಜ್ಯೋತ್ಸವ. ಶನಿವಾರ ಬಲಿಪಾಡ್ಯಮಿ. ಭಾನುವಾರ ರಜೆ. 15 ದಿನಗಳ ನಂತರ ಕನಕ ಜಯಂತಿ ಸೋಮವಾರ. ಶನಿವಾರ, ಭಾನುವಾರದ ಜತೆ ಸೇರಿಸಿಕೊಳ್ಳಿ.

ಡಿಸೆಂಬರ್: ಕ್ರಿಸ್‍ಮಸ್ ಒಂದೇ ಸೇವಿಂಗ್ ಗ್ರೇಸ್. ಅದೂ ವಾರದ ಮಧ್ಯದಲ್ಲಿ.

ಹ್ಯಾಪಿ ಹಾಲಿಡೇಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT