ವಿಕ್ರಮ್ ಲ್ಯಾಂಡ್ ಆಗಿದ್ದನ್ನು, ಪ್ರಜ್ಞಾನ್ ರೋವರ್ ಹಗೂರಕ್ಕೆ ಕೆಳಗಿಳಿದು ಓಡಾಡಿದ್ದನ್ನು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಬೆಕ್ಕಣ್ಣ ನೋಡಿಯೇ ನೋಡಿತು.

‘ಏನು ಕೇಳಾಕೆ ಹತ್ತೀಯಲೇ’ ಎಂದು ನಾನು ಕುತೂಹಲದಿಂದ ಕೇಳಿದೆ.

‘ಅಲ್ಲೆಲ್ಲಾದರೂ ಚಂದ್ರಬೆಕ್ಕುಗಳ ಮ್ಯಾಂವ್ಗೀಂವ್ ಸದ್ದು ಬರತೈತೇನು ಅಂತ ಕೇಳಾಕೆ ಹತ್ತೀನಿ’ ಎಂದು ಘನಗಂಭೀರವಾಗಿ ಉಲಿಯಿತು.

‘ಮಂಗ್ಯಾನಂಥವ್ನೇ… ಇಲ್ಲೀವರೆಗೆ ಚಂದ್ರನ ಮ್ಯಾಗೆ ಮಾಡಿದ ಯಾವ ಸಂಶೋಧನೆಯಲ್ಲೂ ಜೀವಿಗಳು ಇದ್ದ ಕುರುಹು ಸಿಕ್ಕಿಲ್ಲ, ಅಂತಾದ್ರಾಗೆ ಚಂದ್ರಬೆಕ್ಕುಗಳು ಎಲ್ಲಿರತಾವು?’

‘ನೀರೈತಿ ಅಂತ ಅಲ್ಲಿ ನಮ್ ಚಂದ್ರಯಾನ– 1 ಹೇಳೈತಿ. ನೀರೈತಿ ಅಂದ್ರ ಜೀವಿಗಳಿದ್ದೇ ಇರತಾವು. ಸೇಫ್ ಲ್ಯಾಂಡಿಂಗ್ ಮಾಡೋ ರಹಸ್ಯ ನಮ್ ಇಸ್ರೊ ವಿಜ್ಞಾನಿಗಳಿಗೆ ಈಗ ಕರಗತ ಆಗೈತಿ. ಯಾವುದಕ್ಕೂ ನಾವು ಸ್ವಲ್ಪ ರೊಕ್ಕ ರೆಡಿ ಇಟ್ಕಂಡಿರೂಣು’.

ನನಗೆ ತಲೆಬುಡ ತಿಳಿಯಲಿಲ್ಲ.

‘ತಿಂಗಳ ಖರ್ಚಿಗೆ ರೊಕ್ಕ ಹೊಂದಿಸೂದೆ ರಗಡ್ ಆಗೈತಿ ನನಗ. ರೊಕ್ಕ ಹೆಂಗ ರೆಡಿ ಇಟ್ಕಳದು…?’

‘ನೀ ಎಲ್ಲಾದಕ್ಕೆ ಏನರೆ ಕೊಸರು ತೆಗೀಬ್ಯಾಡ. ನಮ್ ಮೋದಿಮಾಮಾರ ಆಡಳಿತಾವಧಿಯಲ್ಲೇ ಎರಡು ಬಾರಿ ಚಂದ್ರಯಾನ ನಡೆದದ. ಹಿಂಗಾಗಿ ಮುಂದಿನ ವರ್ಷ ಸಂಸತ್ತಿನಾಗೆ ಪ್ರಧಾನಿಯಾನ 3 ಖಂಡಿತಾ ಅವರಿದ್ದೇ! ಅದಾದಮ್ಯಾಗೆ ಅವರು ರೆಗ್ಯುಲರ್ ಸ್ಪೇಸ್ ಶಿಪ್ ಬಿಡ್ತಾರಂತ. ಆಮ್ಯಾಗೆ ಅಲ್ಲಿ ಸೈಟು, ಅಪಾರ್ಟಮೆಂಟು, ರೆಸಾರ್ಟು, ತೋಟ ಎಲ್ಲ ಶುರುವಾಗತೈತಿ. ನಾವು ರೊಕ್ಕ ರೆಡಿ ಇಟ್ಕಂಡಿರೂಣು’.

‘ಮೊದ್ಲು ಚಂದ್ರಯಾನ– 3 ಸಕ್ಸೆಸ್ಫುಲ್ ಮಾಡಿದ ನಮ್ ವಿಜ್ಞಾನಿಗಳಿಗೆ ಛಲೋ ಸಂಬಳಸಾರಿಗೆ ಕೊಡಲಿ, ಬಾಹ್ಯಾಕಾಶ ಇಲಾಖೆಗೆ ಜಾಸ್ತಿ ಅನುದಾನ ಕೊಡಲಿ. ಆಮ್ಯಾಗೆ ಮುಂದಿನ ಯಾನಗಳ ಬಗ್ಗೆ ಮಾತಾಡೂಣು’.

‘ಅವರು ದೇಶಕ್ಕಾಗಿ ಅಂಥವೆಲ್ಲ ತ್ಯಾಗ ಮಾಡತಾರೆ. ನಮ್ ಮೋದಿಮಾಮಾರು ಪ್ರಧಾನಿಯಾನಕ್ಕಾಗಿ ಎಷ್ಟ್ ತ್ಯಾಗ ಮಾಡಿಲ್ಲೇನ್? ಅಲ್ಲದೇ ಮೋದಿಮಾಮಾರು, ಸಿದ್ದುಅಂಕಲ್ಲು ಅವ್ರಿದ್ದಲ್ಲೇ ಹೋಗಿ ಸ್ವೀಟ್ ತಿನ್ನಿಸ್ಯಾರೆ. ಅದೇ ಸಾಕೇಳು’ ಬೆಕ್ಕಣ್ಣ ಉಡಾಫೆಯಿಂದ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.