‘ಪಾಕಿಸ್ತಾನ ಬುಟ್ಟ ಡ್ರೋನು, ರಾಕೆಟ್ ಅರರ್ಧ ದಾರೀಲೇ ವಯಕ್ ಅಂತ ಬಿದ್ದೋತಿದ್ವಲ್ಲ ಯಾಕೆ ಸಾ?’ ಅಂತ ತುರೇಮಣೆಗೆ ಕೇಳಿದೆ.

‘ಇದಕ್ಕೆ ಎರಡು ಕಾರಣ ಅವೆ ಕಲಾ. ಒಂದು ನಮ್ಮ ಸೇನೆಯ ಪರಾಕ್ರಮ ನೋಡಿ ಹೆದರಿ ತಲೆ ತಿರುಗಿ ಬಿದ್ದೋತಿದ್ದೊ. ಇನ್ನೊಂದು ಈ ಡ್ರೋನು, ರಾಕೆಟ್ಟುಗಳ ತಯಾರಿಸಿದೋರು ಯಾರೇಳು?’ ತುರೇಮಣೆ ಪ್ರಶ್ನೆ ಕೇಳಿದರು.

‘ಇದೇನ್ಸಾ ಅರೀದೋರಂಗೆ ಕೇಳ್ತಿರಾ. ಚೀನದೋರಲ್ವಾ ಅವುನ್ನೆಲ್ಲಾ ತಯಾರು ಮಾಡಿದ್ದು’ ಅಂತಂದೆ.

‘ಚೀನದೋರು ಅವರು ತಯಾರು ಮಾಡಿದ ಹಾಫ್ರೇಟ್-ಚೀಪ್ರೇಟ್ ಡ್ರೋನಿಗೆ ಸ್ಯಾನ್ ಬಿಯಾಂಶಿ ಕ್ಸಿಂಗಲಿ ಅಂತ ಹೆಸರಿಟ್ಟು ನಮ್ಮ ಐನಾತಿ ಮಾಲು ಭಾರತದ ಮ್ಯಾಲೆ ಹಾರಿಕ್ಯಂದೋಗಿ ಪೋಟ ತೆಗುದು ಇನ್ಸ್ಟಾಗ್ರಾಮಿಗೆ ಹಾಕ್ತದೆ ಅಂತ ಪಾಕಿಗೆ ಅಡ್ಡಗ್ಯಾನ ಮಾಡಿ ಮಾರಿದ್ರು’ ಅಂತಂದು ವಡಪು ಹಾಕಿದರು.

‘ಸ್ಯಾನ್ ಬಿಯಾಂಶಿ ಕ್ಸಿಂಗಲಿ ಅಂದ್ರೆ ಏನು ಸಾ?’

‘ಹಂಗಂದ್ರೆ ಚೀನೀ ಭಾಷೇಲಿ ಮೂರುಕಾಸಿನ ಸಾಮಾನು ಅಂತ ಅರ್ಥ ಕಲಾ. ಅದಕ್ಕೇ ಅವು ಗುರಿ ಮುಟ್ಟದೇ ಸುಸೈಡ್ ಮಾಡಿಕ್ಯಂದು ಬಿದ್ದೋಗ್ಯವೆ’ ಅಂತಂದ್ರು.

‘ಕಾಸಿಗೆ ತಕ್ಕ ಕಜ್ಜಾಯ ಕಾ ಬುಡಿ. ಅರುಣಾಚಲ ನಮ್ಮದು ಅಂತಾವ್ರೆ ಚೀನದೋರು. ನಾವೇನು ಅವರಿಗೆ ಅಕ್ಕಿ, ಬೆಲ್ಲ, ಕಾಯಿ ಜೊತೆ ಅರುಣಾಚಲ ಕೊಟ್ಟು ಆಶೀರ್ವಾದ ಮಾಡಿ ಮಡಿಲುದುಂಬಿ ಕಳಿಸಿದ್ವಾ?’ ಅಂತಂದೆ.

‘ಇದು ನನ್ನೂರು, ನನ್ ಏರಿಯಾ. ಇಲ್ಲಿಗೆ ಬಂದು ನನಗೇ ಆಪು ಇಡ್ತೀಯಾ? ನಮ್ಮ ಸೈನ್ಯ ಒಂದುಕಡೆ ಗುಡುಗಿದ್ರೆ ಎಷ್ಟೋ ದೇಶಗಳು ನಡುಗೋಯ್ತವೆ. ಇನ್ಮುಂದೆ ನಮ್ ಸೈನ್ಯ ನಿನಗೆ ಕಣ್ಣಿಗೆ ಕೈಯ್ಯಿಟ್ಟು ಚುಚ್ಚುತಾನೆ ಇರತದೆ. ಯಾಕಪ್ಪಾ ಇಲ್ಲಿಗೆ ಬಂದೆ. ಯಾಕಪ್ಪಾ ಭಾರತಾನ ಎದುರಾಕ್ಕೊಂಡೆ ಅಂತ ನಿದ್ದೆ ಇಲ್ದೆ ನರಳ್ತೀಯ. ಯಾಕೆ ಶಾಕ್ ಆಯ್ತಾ? ಆಗಲೇಬೇಕು. ಇದು ಅರುಣಾಚಲಪ್ರದೇಶದ ಇಚಾರ ಕನೋ’ ತುರೇಮಣೆ ಬುಟ್ಟ ಡೈಲಾಗ್ ಕೇಳಿ ನಗದೇ ಇರಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.