ಬೆಂಗಳೂರು: ಮಣಿಪುರದ ಈಜುಪಟುಗಳು ಇಲ್ಲಿ ಸೋಮವಾರ ಆರಂಭಗೊಂಡ 41ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ಮತ್ತು 51ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಮೊದಲ ದಿನ ನಾಲ್ಕು ಚಿನ್ನ ಗೆಲ್ಲುವ ಮೂಲಕ ಪಾರಮ್ಯ ಮೆರೆದರು. ಕರ್ನಾಟಕದ ಸ್ಪರ್ಧಿಗಳು ಎರಡು ಚಿನ್ನದ ಪದಕ ಗೆದ್ದುಕೊಂಡರು.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಬಾಲಕರ ಗುಂಪು 3 ವಿಭಾಗದಲ್ಲಿ ಮಣಿಪುರದ ಕೊಯಿಜಮ್ ಅಥೋಯಿಬಾ ಸಿಂಗ್ (200 ಮೀ. ಫ್ರೀಸ್ಟೈಲ್, 100 ಮೀ. ಬಟರ್ಫ್ಲೈ), ಹಿಮಾನ್ಶು ಎನ್. (200 ಮೀ. ಮೆಡ್ಲೆ) ಮತ್ತು ಮೈಸ್ನಮ್ ಅರಿಂಧಮ್ ಸಿಂಗ್ (100 ಮೀ. ಬ್ರೆಸ್ಟ್ಸ್ಟ್ರೋಕ್) ಚಿನ್ನದ ಸಾಧನೆ ಮೆರೆದರು.

ಕರ್ನಾಟಕದ ಶ್ವಿತಿ ದಿವಾಕರ್ ಸುವರ್ಣ ಅವರು ಬಾಲಕಿಯರ ಗುಂಪು 3 ವಿಭಾಗದ 100 ಮೀ ಬಟರ್ಫ್ಲೈ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಅವರು 1 ನಿಮಿಷ 10.19 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಆರೋಹಿ ಚಿತ್ರಗಾರ್ (1:11.95) ಮತ್ತು ಗುಜರಾತ್ನ ಹಿರಣಶಿ ವಿಕ್ರಮ್ಸಿಂಗ್ (1:13.43) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಗ್ರೂಪ್ 3 ವಿಭಾಗದ 200 ಮೀಟರ್ ಫ್ರೀಸ್ಟೈಲ್ ರಿಲೆಯಲ್ಲಿ ಶ್ವಿತಿ ಅವರು ನೈರಾ ಬೋಪಣ್ಣ, ಪ್ರಾಪ್ತಿ ಜೆ.ಪಿ. ಮತ್ತು ಸ್ತುತಿ ಸಿಂಗ್ ಅವರೊಂದಿಗೆ ಸೇರಿ ಕರ್ನಾಟಕಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟರು. ಡೈವಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಸ್ಪರ್ಧಿಗಳು ಮೂರು ಚಿನ್ನ ಗೆದ್ದರು.

ಕರ್ನಾಟಕ ಶುಭಾರಂಭ: ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆದ ವಾಟರ್ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕದ ಪುರುಷರ ತಂಡ 11-3 ಅಂತರದಿಂದ ಮಣಿಪುರವನ್ನು ಸೋಲಿಸಿದರೆ, ಮಹಿಳಾ ತಂಡವು 8-1 ಅಂತರದಿಂದ ತಮಿಳುನಾಡನ್ನು ಮಣಿಸಿತು.

ಫಲಿತಾಂಶ: ಗುಂಪು 3: ಬಾಲಕರು: 200 ಮೀ. ಫ್ರೀಸ್ಟೈಲ್: ಕೊಯಿಜಮ್ ಅಥೋಯಿಬಾ ಸಿಂಗ್ (ಮಣಿಪುರ, ಕಾಲ 2ನಿ.09.63ಸೆ)–1, ಅಮಿತ್ ಎಚ್. ಪವನ್ (ಕರ್ನಾಟಕ)–2; ಕೃಷಿವ್ ದೋಷಿ (ಮಧ್ಯಪ್ರದೇಶ)–3.

200 ಮೀ. ಮೆಡ್ಲೆ: ಹಿಮಾನ್ಶು ಎನ್ (ಮಣಿಪುರ, ಕಾಲ: 2 ನಿ.23.80ಸೆ– 1; ಕೊಯಿಜಮ್ ಅಥೋಯಿಬಾ ಸಿಂಗ್ (ಮಣಿಪುರ)–2; ಎ.ಪಿ. ಆರ್ಯ ಸತಾರ್ (ತಮಿಳುನಾಡು)–3.

100 ಮೀ. ಬ್ರೆಸ್ಟ್ಸ್ಟ್ರೋಕ್: ಮೈಸ್ನಮ್ ಅರಿಂದಮ್ ಸಿಂಗ್ (ಮಣಿಪುರ, ಕಾಲ: 1 ನಿ.15.08ಸೆ)–1, ಸೊರಮ್ ಪೀಟರ್ಸನ್ (ಮಣಿಪುರ)– 2, ಕಬೀರ್ ನೀಲೇಶ್ ಸೋನೋಲೆ (ಮಹಾರಾಷ್ಟ್ರ)–3.

100 ಮೀ.ಬಟರ್ಫ್ಲೈ: ಕೊಯಿಜಮ್ ಅಥೋಯಿಬಾ ಸಿಂಗ್ (ಮಣಿಪುರ, ಕಾಲ: 1ನಿ.01.58ಸೆ)–1; ಲೈಟೊಂಜಮ್ ಪುಂಗೆನ್ (ಮಣಿಪುರ)–2; ಅಮಿತ್ ಎಚ್. ಪವನ್ (ಕರ್ನಾಟಕ)–3.

200 ಮೀ. ಫ್ರೀಸ್ಟೈಲ್ ರಿಲೆ: ತಮಿಳುನಾಡು (1ನಿ.57.07ಸೆ)–1, ಮಣಿಪುರ–2, ಅಸ್ಸಾಂ–3.

ಬಾಲಕಿಯರು: 200 ಮೀ. ಫ್ರೀಸ್ಟೈಲ್: ಪೂರ್ವಿ ರಿತೇಶ್ ನಾಯ್ಕ್ (ಗೋವಾ, ಕಾಲ: 2ನಿ.18.35ಸೆ)–1; ಸ್ತುತಿ ಸಿಂಗ್ (ಕರ್ನಾಟಕ)–2, ನೈರಾ ಬೋಪಣ್ಣ ಕೆ. (ಕರ್ನಾಟಕ)–3.

200 ಮೀ. ಮೆಡ್ಲೆ: ಹೀವಾ ಭಾವೇಶ್ ಪಟೇಲ್ (ಮಹಾರಾಷ್ಟ್ರ, ಕಾಲ: 2ನಿ.40.81ಸೆ)–1; ಅನ್ನಿಕಾ ಗೋಪ್ಲಾನಿ (ಮಹಾರಾಷ್ಟ್ರ)– 2; ಸೆರೆನಾ ಸರೋಹಾ (ಹರಿಯಾಣ)–3.

100 ಮೀ. ಬ್ರೆಸ್ಟ್ಸ್ಟ್ರೋಕ್: ಕಸ್ತೂರಿ ಗೊಗೊಯ್ (ಅಸ್ಸಾಂ, ಕಾಲ: 1ನಿ.20.42ಸೆ)–1; ಸಹಿತಾ ಗೋಷ್ (ಒಡಿಶಾ)–2; ನಿಧಿ ತುಷಾರ್ ಸಮಂತ್ (ಮಹಾರಾಷ್ಟ್ರ)–3.

100 ಮೀ. ಬಟರ್ಫ್ಲೈ: ಶ್ವಿತಿ ದಿವಾಕರ್ ಸುವರ್ಣ (ಕರ್ನಾಟಕ, ಕಾಲ: 1ನಿ.10.19ಸೆ)–1; ಆರೋಹಿ ಚಿತ್ರಗಾರ್ (ಕರ್ನಾಟಕ)–2; ಹಿರಾನ್ಶಿ ವಿಕ್ರಮಸಿಂಗ್ (ಗುಜರಾತ್)–3.

200 ಮೀ. ಬಟರ್ಫ್ಲೈ ರಿಲೆ: ಕರ್ನಾಟಕ (ಕಾಲ: 2ನಿ.01.26ಸೆ), ಮಹಾರಾಷ್ಟ್ರ–2, ಆರ್.ಆರ್. ಪೋಷಿಕಾ–3

ಡೈವಿಂಗ್: ಬಾಲಕರು: ಗುಂಪು I: ಪ್ಲಾಟ್ಫಾರಂ: ಸುಪ್ರದೀಪ್ ಸಹಾ (ಎಸ್ಎಸ್ಸಿಬಿ, 398.45 ಅಂಕ)–1; ರಿಸಾವ್ ದಾಸ್ (ಎಸ್ಎಸ್ಸಿಬಿ)–2; ಸ್ವರಾಜ್ ರಾಜೇಂದ್ರ ಲಾಡ್ (ಮಹಾರಾಷ್ಟ್ರ)–3

ಗುಂಪು 2: 1ಎಂಟಿ ಎಸ್ಬಿ: ಶ್ರೇಯಶ್ ಸಕ್ಪಾಲ್ (ಮಹಾರಾಷ್ಟ್ರ, 227.50 ಅಂಕ)– 1; ರಣವೀರ್ ರಾಜೇಂದ್ರ ಖಾಡೆ (ಮಹಾರಾಷ್ಟ್ರ)–2, ಅರುಶ್ ರಘುವಂಶಿ (ಮಧ್ಯಪ್ರದೇಶ)–3

ಬಾಲಕಿಯರು: ಗುಂಪು 2: ಪ್ಲಾಟ್ಫಾರಂ: ವಂಶಿಕಾ ಶಿಲಿಸಿದ್ಧ (ಮಹಾರಾಷ್ಟ್ರ, 181.15 ಅಂಕ)–1; ಅನನ್ಯ ಯಾದವ್ (ಮಧ್ಯಪ್ರದೇಶ)–2; ಇಶಾ ಸರ್ಕಾರ್ (ಪಶ್ಚಿಮ ಬಂಗಾಳ)–3

ಗುಂಪು 3: 2 ಎಂಟಿ ಎಸ್ಬಿ: ಮನಸ್ವಿ ರಾಜಶೇಖರ್ ಮಾನೆ (ಮಹಾರಾಷ್ಟ್ರ, 193.40 ಅಂಕ)–1; ನಿಶಿತಾ ರಾಜ್ ಠಾಕೂರ್ (ಮಹಾರಾಷ್ಟ್ರ)– 2; ಉರ್ಜಿತಾ ದಾಸ್ (ಪಶ್ಚಿಮ ಬಂಗಾಳ)–3.

ವಾಟರ್ ಪೋಲೊ: ಬಾಲಕರು: ಕರ್ನಾಟಕ 11–3ರಿಂದ ಮಣಿಪುರ ವಿರುದ್ಧ; ತಮಿಳುನಾಡು 17–1ರಿಂದ ತೆಲಂಗಾಣ ವಿರುದ್ಧ; ದೆಹಲಿ 13–3ರಿಂದ ಆಂಧ್ರಪ್ರದೇಶ ವಿರುದ್ಧ; ಪಂಜಾಬ್ 6–1ರಿಂದ ಅಸ್ಸಾಂ ವಿರುದ್ಧ; ಒಡಿಶಾ 12–4ರಿಂದ ಹರಿಯಾಣ ವಿರುದ್ಧ ಜಯ ಸಾಧಿಸಿದವು.

ಬಾಲಕಿಯರು: ಕೇರಳ 11–2ರಿಂದ ಒಡಿಶಾ ಎದುರು; ಕರ್ನಾಟಕ 8–1ರಿಂದ ತಮಿಳುನಾಡಿ ಎದುರು; ಮಹಾರಾಷ್ಟ್ರ 8–1ರಿಂದ ಅಸ್ಸಾಂ ಎದುರು ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.