‘ಗುರೂ... ಸ್ಪೀಕರ್ ಸಾಹೇಬ್ರು ಶಾಸಕರನ್ನ ಸಿನಿಮಾಕ್ಕೆ ಕರೆದ್ರೆ ಬಹಳ ಜನ ಹೋಗ್ಲೇ ಇಲ್ಲಂತೆ. ಪಾಪ ಅವರು ಬಹಳ ಬೇಜಾರ್ ಮಾಡ್ಕಂಡ್ರಂತೆ’ ಗುಡ್ಡೆ ಪೇಪರಲ್ಲಿ ಬಂದಿದ್ದ ಸುದ್ದಿಯನ್ನ ತೆಪರೇಸಿಗೆ ತೋರಿಸಿದ.

‘ಅಯ್ಯೋ ಬೆಳಿಗ್ಗೆ ನನ್ ಹೆಂಡ್ತಿನೂ ಗಂಟು ಬಿದ್ದಿದ್ಲಪ್ಪ, ಪುನೀತ್ದು ಹೊಸ ಸಿನಿಮಾಕ್ಕೆ ಕರ್ಕೊಂಡ್ ಹೋಗಿ ಅಂತ. ರಶ್ ಕಡಿಮಿ ಆಗ್ಲಿ ತಡಿ ಅಂದಿದ್ಕೆ ಸಿಟ್ ಮಾಡ್ಕಂಡಿದ್ಲು’ ತೆಪರೇಸಿ ನಕ್ಕ.

‘ಸ್ಪೀಕರ್ ಮಾತು ಕೇಳದಿದ್ರೂ ನಡೀತತಿ, ಹೆಂಡ್ತಿ ಮಾತು ಕೇಳದಿದ್ರೆ ನಡೆಯಲ್ಲಲೆ ತೆಪರ...’ ಗುಡ್ಡೆ ಬುದ್ಧಿ ಹೇಳಿದ.

‘ಆತು ಬಿಡಪ, ಈಗ ಸ್ಪೀಕರ್ ಅಂದ್ರೆ ಏನು?’

‘ಮಾತಾಡೋರು ಅಂತ...’

‘ಆದ್ರೆ ಸ್ಪೀಕರ್ ಮಾತಾಡಲ್ಲ. ಬೇರೆಯವರನ್ನ ಮಾತಾಡಕೆ ಹಚ್ಚಿ ತಾವು ಕೇಳ್ತಾ ಕುಂತಿರ್ತಾರೆ... ವಿಚಿತ್ರ ಅಲ್ವಾ?’

‘ನನ್ ಪ್ರಕಾರ ವಿಧಾನಸಭೇಲಿ ಸ್ಪೀಕರು, ಮನೇಲಿ ಗಂಡಂದಿರು ಇಬ್ರೂ ಒಂದೇ, ಜಾಸ್ತಿ ಮಾತಾಡಂಗಿಲ್ಲ. ಮಾತು ಕೇಳಿಸ್ಕಾಬೇಕು ಅಷ್ಟೆ...’

‘ಸ್ಪೀಕರು ಮಾತಾಡದಿದ್ರೂ ಅವರಿಗೆ ಶಾಸಕರನ್ನ ಹೊರಗೆ ಹಾಕೋ ಪವರ್ ಐತಿ, ನಿನಗೆ, ಐ ಮೀನ್ ಗಂಡಂದಿರಿಗೆ ಆ ಪವರ್ ಐತಾ?’ ತೆಪರೇಸಿ ಪ್ರಶ್ನೆ.

‘ಪವರ್ರಾ? ನಮ್ದು ಯಾವಾಗ್ಲು ಲೋಡ್ ಶೆಡ್ಡಿಂಗು...’

‘ಗೊತ್ತು ಬಿಡು, ನೀನು ಹೆಂಡ್ತಿ ಮುಂದೆ ಪಿಟಿಕ್ ಅನ್ನಲ್ಲ. ಮೌನಂ ಸೇಫೆಸ್ಟ್ ಸಾಧನಂ...’

‘ನೀನೇನ್ ಮಹಾ ಶೂರನಾ? ಮೊದ್ಲು ಪಮ್ಮಿನ ಸಿನಿಮಾಕ್ಕೆ ಕರ್ಕೊಂಡು ಹೋಗು, ಇಲ್ಲಾಂದ್ರೆ ರಾತ್ರಿ ಲೇಟಾಗ್ ಬಂದಾಗ ಬಾಗಿಲ ಹೊರಗೇ ಭಾಷಣ ಕೇಳ್ಬೇಕಾಗುತ್ತೆ...’ ಗುಡ್ಡೆ ನಕ್ಕ.

‘ನನ್ ಪ್ರಕಾರ ಹೆಂಡತಿಯರೂ ಸ್ಪೀಕರ್ ತರಾನೇ. ಆದ್ರೆ ಒಂದು ವ್ಯತ್ಯಾಸ’.

‘ಏನು?’

‘ಇವರು ಮಾತಾಡೋ ಸ್ಪೀಕರ್ಗಳು!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.