1948ರ ಜನವರಿ 30ರ ಸಂಜೆ ಮಹಾತ್ಮ ಗಾಂಧಿ ಅವರನ್ನು ತೀವ್ರಗಾಮಿಯೊಬ್ಬ ಗುಂಡಿಕ್ಕಿ ಕೊಲ್ಲುತ್ತಾನೆ. ಇಳಿ ವಯಸ್ಸಿನ ಮಹಾತ್ಮನ ಕೊನೆ ಮಾತು ‘ಹೇ ರಾಮ್’. 75 ವರ್ಷಗಳ ನಂತರ, 2025ರ ನವೆಂಬರ್ 18ರಂದು ಲೋಕಸಭೆಯಲ್ಲಿ, 19ರಂದು ರಾಜ್ಯಸಭೆಯಲ್ಲಿ ಚರ್ಚೆಯೇ ಇಲ್ಲದಂತೆ ಅನುಮೋದಿಸಿ, 20ರಂದು ರಾಷ್ಟ್ರಪತಿಯ ಸಹಿಯನ್ನೂ ಹಾಕಿಸಿ ಮೋದಿ ಹೇಳಿದ್ದು ‘ಜಿ ರಾಮ್’. ಮಹಾತ್ಮ ತನ್ನ ಕೊನೆಯುಸಿರಲ್ಲಿ ‘ಸೀತಾರಾಮ’ನನ್ನು ನೆನೆದರೆ, ಪ್ರಧಾನಿ ಮೋದಿ ತನ್ನ ಅಧಿಕಾರದ ಅಮಲಿನಲ್ಲಿ ಕೈ ಹಿಡಿದಿರುವುದು ಮಹಾತ್ಮನಿಗೆ ಗುಂಡಿಟ್ಟ ‘ನಾಥೂರಾಮ’ನನ್ನು