‘ಹಿಂದೂ’ ಎಂಬ ಪದದ ಮೂಲದ ಬಗ್ಗೆ ಸ್ವಾಮಿ ಹರ್ಷಾನಂದ ತಮ್ಮ ಮೂರು ಸಂಪುಟಗಳ ‘ಎ ಕನ್ಸೈಸ್ ಎನ್ಸೈಕ್ಲೊಪೀಡಿಯ ಆಫ್ ಹಿಂದೂಯಿಸಂ’ ಎಂಬ ಬೃಹತ್ ವಿಶ್ವಕೋಶದಲ್ಲಿ ಹೀಗೆ ದಾಖಲಿಸುತ್ತಾರೆ: ‘ಹಾಗೆ ನೋಡಿದರೆ, ‘ಹಿಂದೂ’ ಮತ್ತು ‘ಹಿಂದೂಯಿಸಂ’ ಎಂಬ ಪದಗಳು ಭೌಗೋಳಿಕ ವಾಗಿವೆ. ಸಿಂಧೂ ನದಿಯ ಪ್ರದೇಶ ಮತ್ತು ಅಲ್ಲಿ ವಾಸಿಸುವ ಜನರನ್ನು ಪ್ರಾಚೀನ ಪರ್ಷಿಯನ್ನರು ‘ಹಿಂದೂ’ ಎಂದು ಕರೆಯುತ್ತಿದ್ದರು. ಅವರ ಭಾಷೆಯಲ್ಲಿ ಸಂಸ್ಕೃತದ ‘ಸ’ ಎಂಬುದು ‘ಹ’ ಅಕ್ಷರವಾಯಿತು. ನಂತರ, ಹೇಗೋ ಅದೇ ಹೆಸರು ಉಳಿದುಬಂದಿದೆ’ (ಅನುವಾದಿತ, ಸಂ. 2, ಪುಟ 24).

ಇನ್ನು, ಆನ್ಲೈನ್ ವಿಶ್ವಕೋಶವಾದ ‘ವಿಕಿಪೀಡಿಯ’ ಹೀಗೆ ಹೇಳುತ್ತದೆ: ‘ಮೂಲತಃ, ಪರ್ಷಿಯನ್ ಭಾಷೆಯಿಂದ ಬಂದಿರುವ ಈ ಪದವು ಭೌಗೋಳಿಕ ನೆಲೆಯಲ್ಲಿದೆ. ಕ್ರಿ.ಪೂ. ಆರನೆಯ ಶತಮಾನದ ಡೇರಿಯಸ್ನ ಶಾಸನದಲ್ಲಿಯೂ ಕಂಡುಬರುತ್ತದೆ. ಆದರೆ ಈ ಪದವು ಹಿಂದೂ ಧರ್ಮಕ್ಕೆ ಅನ್ವಯಿಸುತ್ತಿರಲಿಲ್ಲ. ‘ಹಿಂದೂ’ ಪದಕ್ಕೆ ಧಾರ್ಮಿಕ ಆಯಾಮವು ಸುಮಾರು ಕ್ರಿ.ಶ. 13ನೆಯ ಶತಮಾನದಿಂದ ಪ್ರಾರಂಭವಾಯಿತು.’

ಕಲೆ ಮತ್ತು ವಿನ್ಯಾಸದ ಪುಸ್ತಕ ಪ್ರಕಾಶನ ಸಂಸ್ಥೆಯಾದ ‘ವಿಕ್ಷನರಿ’ಯು ಹಿಂದೂ ಪದದ ಬಗ್ಗೆ ಹೀಗೆ ಹೇಳುತ್ತದೆ: ‘ಈ ಪದವು ಪರ್ಷಿಯನ್ ಮೂಲದ್ದು. ಪ್ರಾಚೀನ ಪರ್ಷಿಯನ್ ಭಾಷೆಯಲ್ಲಿದ್ದ ‘hndn’ ಪದವು ‘ಸಿಂಧೂ’ ಎಂಬ ಪದದ ರೂಪಾಂತರ.

‘ಕೋರಾ’ (Quora) ಮತ್ತು ಇತರ ಕೆಲವು ಜಾಲತಾಣಗಳು ‘ಪರ್ಷಿಯನ್ ಭಾಷೆಯಲ್ಲಿ ‘ಹಿಂದೂ’ ಎಂಬ ಪದಕ್ಕೆ ಸೋತವನು, ಗುಲಾಮ, ಕಳ್ಳ ಎಂಬಂಥ ಅರ್ಥಗಳಿವೆಯೆಂದು, ಈ ಅರ್ಥಗಳು ಲಖನೌನಲ್ಲಿ 1964ರಲ್ಲಿ ಪ್ರಕಟವಾದ ಪರ್ಷಿಯನ್ ಡಿಕ್ಷನರಿಯಲ್ಲಿ ಇವೆ ಎಂದು ಹೇಳುತ್ತವೆ. ಆದರೆ, ಈ ಜಾಲತಾಣಗಳು ಎಷ್ಟರ ಮಟ್ಟಿಗೆ ವಿಶ್ವಸನೀಯ ಎಂಬುದು ಗೊತ್ತಿಲ್ಲ.

ಕೊನೆಯದಾಗಿ, ಯಾವ ಭಾಷೆಯ ಪದಗಳಿಗೂ ಸಾರ್ವಕಾಲಿಕ ಅರ್ಥ ಎಂಬುದು ಇರುವುದಿಲ್ಲ. ಎಲ್ಲಾ ಭಾಷೆಗಳ ಪದಗಳೂ ಕಾಲಕಾಲಕ್ಕೆ ತಮ್ಮ ಅರ್ಥವನ್ನು ವಿಸ್ತರಿಸಿಕೊಳ್ಳುತ್ತವೆ, ಹೊಸ ಅರ್ಥಗಳನ್ನು ಪಡೆಯು ತ್ತವೆ, ತಮ್ಮ ಹಳೆಯ ಅರ್ಥಗಳನ್ನು ಕಳೆದುಕೊಳ್ಳುತ್ತವೆ. ಉದಾಹರಣೆಗೆ, ಸರ್ವಜ್ಞನು ‘ಕನ್ನಡ’ ಪದವನ್ನು ‘ಮಾಯೆ’ ಎಂಬ ಅರ್ಥದಲ್ಲಿ ಉಪಯೋಗಿಸು
ತ್ತಾನೆ. ಹಳಗನ್ನಡದಲ್ಲಿ ‘ರಾವ’ ಎಂಬ ಪದವು ಇಂದು ‘ರವ’ (ಗಲಾಟೆ/ ಕೋಲಾಹಲ) ಎಂಬ ಅರ್ಥವನ್ನು ಕೊಡುತ್ತದೆ.

-ಸಿ.ಎನ್.ರಾಮಚಂದ್ರನ್, ಬೆಂಗಳೂರು

ಹಂಸಕ್ಷೀರ ನ್ಯಾಯವಿರಲಿ
ಯಾವುದೇ ಭಾಷೆಯ ಕೆಲವೊಂದು ಪದಗಳನ್ನು ಹೋಲುವ ಪದ ಜಗತ್ತಿನ ಇನ್ನಾವುದೋ ಭಾಷೆಯಲ್ಲೂ ಇರುವುದು ಅಚ್ಚರಿಯೂ ಅಲ್ಲ, ಆಕಸ್ಮಿಕವೂ ಅಲ್ಲ. ಬರೀ ಹೋಲಿಕೆ ಇದ್ದಾಕ್ಷಣ ಅರ್ಥವೂ ಸಮಾನವಾಗಿ ಇರಬೇಕೆಂಬ ನಿಯಮವೇನೂ ಇಲ್ಲ. ‘ಅವಸರ’ ಎಂಬುದಕ್ಕೆ ಕನ್ನಡದಲ್ಲಿ ಒಂದು ಅರ್ಥವಾದರೆ ಹಿಂದಿ, ಸಂಸ್ಕೃತದಲ್ಲಿ ಬೇರೆಯದೇ ಅರ್ಥವಾಗುತ್ತದೆ.
ಕನ್ನಡದಲ್ಲಿಯೇ ‘ನಾತ’ ಎಂಬುದಕ್ಕೆ ಮೂಲದ ಅರ್ಥ ವಾಸನೆ, ಪರಿಮಳ ಎಂದು ಇತ್ತು. ಇಂದು ಅದು ಗಬ್ಬು ವಾಸನೆ ಎಂಬ ಹೀನಾರ್ಥ ಪಡೆದುಕೊಂಡಿದೆ. ‘ಸೀರೆ’ ಎಂದರೆ ಮಹಿಳೆಯರು ಉಡುವ ಉಡುಗೆ ಎಂದು ಮಾತ್ರ ಈಗ ಅರ್ಥ. ಹಳಗನ್ನಡ ಕಾಲದಲ್ಲಿ ಗಂಡಸರು, ಹೆಂಗಸರು ಯಾರು ಬೇಕಾದರೂ ಸೊಂಟಕ್ಕೆ ಸುತ್ತಿಕೊಳ್ಳುವ ಬಟ್ಟೆ ಎಂದಾಗಿತ್ತು. ಆಗ ಅದಕ್ಕೆ ಲಿಂಗಭೇದ ಇರಲಿಲ್ಲ. ಭಾಷಾ ವಿಜ್ಞಾನಿಗಳು ಇಂಥ ಸೂಕ್ಷ್ಮಗಳನ್ನು ತಿಳಿಸಿಕೊಟ್ಟಿದ್ದಾರೆ.

ಹಿಂದೂ ಎಂಬುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ನೆಲಕ್ಕೆ ಸೇರಿದ ಪದ ಎಂಬ ಶಾಸಕ ಸತೀಶ ಜಾರಕಿಹೊಳಿ ಅವರ ಮಾತಿನ ವಿರುದ್ಧ ತಿಳಿವಿನ ಸೂಕ್ಷ್ಮತೆ ಇಲ್ಲದ ಕೆಲವರು ಗಲಾಟೆ ಎಬ್ಬಿಸುತ್ತಿರುವುದು ಅಚ್ಚರಿ ಏನಲ್ಲ. ಆ ಶಾಸಕರು ತಮ್ಮದೇ ಪಕ್ಷದವರಾಗಿದ್ದರೆ ಅನೇಕರು ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದಷ್ಟೇ ಹೇಳಿ ವಿಷಯಾಂತರ ಮಾಡುತ್ತಿದ್ದರು.

ಸತೀಶ ಅವರ ಹೇಳಿಕೆಯಲ್ಲಿ ಅವರದ್ದೆನ್ನುವ ಹೊಸದೇನೂ ಇಲ್ಲ. ಹಳೇ ಗ್ರಂಥಗಳಲ್ಲಿ, ನಿಘಂಟು ಗಳಲ್ಲಿ ಇದ್ದದ್ದೇ ಅಥವಾ ಹಿಂದಿನ ಮಹನೀಯರು ಹಲವಾರು ಬಾರಿ ಹೇಳಿದ್ದೇ. ಎಲ್ಲರ ಮಾತನ್ನು ಎಲ್ಲರೂ ಒಪ್ಪಬೇಕಿಲ್ಲ. ನಮ್ಮ ಜ್ಞಾನಿಗಳು ಬೋಧಿಸಿದ ಹಂಸಕ್ಷೀರ ನ್ಯಾಯದಂತೆ ಬೇಕಾದ್ದನ್ನು ಮಾತ್ರ ತೆಗೆದುಕೊಳ್ಳಬೇಕು.

‘ಹಿಂದೂ’ ಎಂಬುದು ಧರ್ಮ ಅಲ್ಲ, ಅದೊಂದು ಜೀವನ ಕ್ರಮ’ ಎಂದು ಡಾ. ಎಸ್.ರಾಧಾಕೃಷ್ಣನ್ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಇದನ್ನು ತಿಳಿಯುವ ಅಗತ್ಯ ಬಹಳವಾಗಿದೆ. ಹಿಂದೂಗೆ ಬೇರೆ ಭಾಷೆಯ ಅರ್ಥವೇನೇ ಇರಲಿ. ನಮ್ಮಲ್ಲಿ ಅದರ ಸರಿಯಾದ ಅರ್ಥ ಏನು, ಅದು ಸಂಸ್ಕೃತ ಮೂಲದಿಂದ ಬಂದಿರುವ ಪದವೋ, ಹಿಂದಿಯದೋ, ಕನ್ನಡದ್ದೋ ಅಥವಾ ಇವೆಲ್ಲಕ್ಕಿಂತ ಹೊರತಾದ ಅನ್ಯ ಭಾಷಾ ಮೂಲದ್ದೋ ಖಚಿತ ಮಾಡಬೇಕಿದೆ.-

ಡಾ. ಟಿ.ಗೋವಿಂದರಾಜು, ಬೆಂಗಳೂರು

ವಿವರ ನೀಡಲಿ
‘ಹಿಂದೂ’ ಪದದ ಅರ್ಥದ ಬಗೆಗಿನ ವಿವಾದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ವೇದ ಪುರಾಣಗಳಿಂದ ಇಲ್ಲಿಯವರೆಗೆ ಹಿಂದೂಸ್ಥಾನ ಹಿಂದೂಗಳಿಗೆ ಸೇರಿದ್ದು ಎಂದು ಎಲ್ಲರೂ ಹೇಳಿ ಕೊಂಡು ಬಂದಿದ್ದಾರೆ’ ಎಂದಿದ್ದಾರೆ. ಯಾವ ವೇದ ದಲ್ಲಿ, ಯಾವ ಪುರಾಣದಲ್ಲಿ ಹೀಗೆ ಹೇಳಲಾಗಿದೆ ಎಂಬುದರ ವಿವರವನ್ನು ಅವರು ನೀಡುವುದು ಲೇಸು. ಆಗ ಈ ಗೊಂದಲಕ್ಕೆ ತೆರೆ ಬೀಳಬಹುದು.
-ಟಿ.ಆರ್.ಚಂದ್ರಶೇಖರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.