ಬೆಳಗಾವಿ ಜಿಲ್ಲೆಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ 31 ಕೃಷ್ಣಮೃಗಗಳು ಇದ್ದಕ್ಕಿದ್ದಂತೆ ಸಾವಿಗೀಡಾಗಿವೆ. ಈ ಘಟನೆ ಮೃಗಾಲಯದಲ್ಲಿನ ನಿರ್ವಹಣೆಯ ಗುಣಮಟ್ಟದ ಬಗ್ಗೆ ಅನುಮಾನ ಉಂಟುಮಾಡುವಂತಿದೆ. ಕೃಷ್ಣಮೃಗಗಳ ಸಾವಿನ ಕಾರಣ ಅಧಿಕೃತವಾಗಿ ಸ್ಪಷ್ಟಗೊಂಡಿಲ್ಲವಾದರೂ, ಅಲ್ಲಿನ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಇದ್ದೇ ಇವೆ. ಮೃಗಾಲಯದ ಆರೋಗ್ಯ ಸಲಹಾ ಸಮಿತಿ ಸಕ್ರಿಯವಾಗಿಲ್ಲ ಎಂದು ಪರಿಸರವಾದಿಗಳು ದೂರಿದ್ದಾರೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಮೃಗಾಲಯಗಳಲ್ಲಿ ಆರೋಗ್ಯ ಸಲಹಾ ಸಮಿತಿ ಇರುವುದು ಕಡ್ಡಾಯ. ಮೃಗಾಲಯದ ಸ್ಥಿತಿಗತಿ, ಪ್ರಾಣಿಗಳ ಆರೋಗ್ಯ, ಹವಾಮಾನ ವೈಪರೀತ್ಯ, ಆಹಾರ ಹಾಗೂ ಚುಚ್ಚುಮದ್ದು ಸೇರಿದಂತೆ ವನ್ಯಮೃಗಗಳ ಕಾಳಜಿಗೆ ಅಗತ್ಯವಾದ ಎಲ್ಲ ವಿಷಯಗಳ ಬಗ್ಗೆ ಸಮಿತಿ ಮಾರ್ಗದರ್ಶನ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ ಸಮಿತಿಯ ಹೊಣೆಗಾರಿಕೆ ಮತ್ತಷ್ಟು ಹೆಚ್ಚು. ಪ್ರಸ್ತುತ, ಕೃಷ್ಣಮೃಗಗಳ ಸಾವಿಗೆ ಸಂಬಂಧಿಸಿದಂತೆ ಆರೋಗ್ಯ ಸಮಿತಿಯ ಹೊಣೆಗಾರಿಕೆ ಏನು ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಸಾವಿಗೀಡಾದ ಪ್ರಾಣಿಗಳ ಒಳ ಅಂಗಾಂಗ ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ಜೈವಿಕ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೇ ದುರಂತದ ಕಾರಣ ಸ್ಪಷ್ಟಗೊಳ್ಳಲಿದೆ.

ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದು, ಅವುಗಳ ಪೈಕಿ 31 ಸಾವಿಗೀಡಾಗಿವೆ. ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಸೆಪ್ಟೆಸೀಮಿಯಾ ಹೆಮರೇಜ್ ಹೆಸರಿನ ಈ ಸೋಂಕು ಪ್ರಾಣಿಗಳಲ್ಲಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುವುದರ ಜೊತೆಗೆ ಅಂಗಾಂಗಗಳನ್ನು ತೀವ್ರವಾಗಿ ಗಾಸಿಗೊಳಿಸುತ್ತದೆ. ಸೋಂಕು ಉಂಟಾದ 24 ಗಂಟೆಗಳಲ್ಲೇ ಪ್ರಾಣಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ಮೃಗಾಲಯದಲ್ಲಿ ಉಳಿದಿರುವ ಏಳು ಕೃಷ್ಣಮೃಗಗಳಿಗೂ ಸೋಂಕು ತಗುಲಿದೆ ಎನ್ನಲಾಗಿದ್ದು, ಅವುಗಳ ಶುಶ್ರೂಷೆ ನಡೆದಿದೆ. ಕೃಷ್ಣಮೃಗಗಳ ವಾಸಸ್ಥಳಕ್ಕೆ ಹೊಂದಿಕೊಂಡಂತೆಯೇ ‘ಜಿಂಕೆ ವನ’ ಮತ್ತು ‘ಕಡವೆ ವನ’ ಇವೆ. ಇಡೀ ಮೃಗಾಲಯದಲ್ಲಿ ಒಟ್ಟು 208 ಪ್ರಾಣಿಗಳಿವೆ. ಅವುಗಳನ್ನು ಕೂಡ ಸೋಂಕು ಬಾಧಿಸಿದಲ್ಲಿ ಅಪಾಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದೇ ಇದೆ. ರಾಜ್ಯದ ಯಾವುದೇ ಮೃಗಾಲಯದಲ್ಲಿ ಕಾಣಿಸಿಕೊಳ್ಳದ ಮಾರಣಾಂತಿಕ ಸೋಂಕು ಭೂತರಾಮನ ಹಟ್ಟಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೂ ಉತ್ತರ ದೊರೆಯಬೇಕಾಗಿದೆ.

ಮನುಷ್ಯ ಹಾಗೂ ವನ್ಯಜೀವಿ ಸಂಘರ್ಷದ ತೀವ್ರತೆಯಲ್ಲಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವನ್ಯಮೃಗಗಳು ಕೊನೆಯುಸಿರು ಎಳೆಯುತ್ತಿವೆ. ಕನಕಪುರ ತಾಲ್ಲೂಕಿನ ಸಾತನೂರು ಅರಣ್ಯ ವಲಯದ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಇತ್ತೀಚೆಗೆ ಮೃತಪಟ್ಟಿದ್ದರೆ, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಸಾವಿಗೀಡಾದ ಘಟನೆ ದೇಶದ ಗಮನಸೆಳೆದಿತ್ತು. ಪ್ರಸ್ತುತ, ಕೃಷ್ಣಮೃಗಗಳ ಸಾವಿನ ಮೂಲಕ ಮೃಗಾಲಯಗಳು ಕೂಡ ವನ್ಯಮೃಗಗಳಿಗೆ ಸುರಕ್ಷಿತವಲ್ಲ ಎನ್ನುವಂತಾಗಿದೆ. ಪ್ರಾಣಿಗಳ ಸುರಕ್ಷತೆ, ಪೋಷಣೆ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಮೃಗಾಲಯಗಳಲ್ಲಿ ಇರುವ ಕುಂದುಕೊರತೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಪ್ರಾಣಿಗಳ ಸರಣಿ ಸಾವುಗಳ ಹಿನ್ನೆಲೆಯಲ್ಲಿ ದೆಹಲಿಯ ಮೃಗಾಲಯದ ಮಾನ್ಯತೆಯನ್ನು ‘ವಿಶ್ವ ಮೃಗಾಲಯ ಒಕ್ಕೂಟ’ ಕಳೆದ ವರ್ಷ ರದ್ದುಗೊಳಿಸಿತ್ತು. ದೇಶದ ಉಳಿದ ಭಾಗಗಳಲ್ಲಿನ ಮೃಗಾಲಯಗಳ ಸ್ಥಿತಿಗತಿ ಕೂಡ ಉತ್ತಮವಾಗಿಯೇನೂ ಇಲ್ಲ. ಪ್ರಸ್ತುತ, ಭೂತರಾಮನ ಹಟ್ಟಿಯಲ್ಲಿ ನಡೆದಿರುವ ದುರಂತ ಮೃಗಾಲಯಗಳ ಸ್ಥಿತಿಗತಿಯ ಪರಾಮರ್ಶೆಗೆ ಒತ್ತಾಯಿಸುವಂತಿದೆ. ಕೃಷ್ಣಮೃಗಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಈ ತನಿಖೆ ಆದಷ್ಟು ಬೇಗ ಮುಗಿದು, ನತದೃಷ್ಟ ಮೃಗಗಳ ಸಾವಿನ ನಿಖರ ಕಾರಣ ಬಹಿರಂಗ ಆಗಬೇಕಾಗಿದೆ. ಪ್ರಸಕ್ತ ಘಟನೆ, ರಾಜ್ಯದಲ್ಲಿನ ಮೃಗಾಲಯಗಳ ಸುಧಾರಣೆಗೂ ಕಾರಣ ಆಗಬೇಕಾಗಿದೆ. ಮೃಗಾಲಯಗಳ ಹೆಸರಿನಲ್ಲಿ ವನ್ಯಮೃಗಗಳ ಸ್ವಾತಂತ್ರ್ಯಹರಣ ಮಾಡುವುದು ಎಷ್ಟು ಸರಿ ಎನ್ನುವ ಚರ್ಚೆ ಹಳೆಯದು. ಪ್ರಾಣಿಗಳ ಸ್ವಾತಂತ್ರ್ಯಹರಣದ ಜೊತೆಗೆ ಪ್ರಾಣಹರಣವೂ ನಡೆಯುತ್ತಿರುವುದು ಮಾನವೀಯತೆ ಹಾಗೂ ನಾಗರಿಕತೆಯ ಅಣಕದಂತೆ ಕಾಣಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.