ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಪ್ರಸಕ್ತ ಆರ್ಥಿಕ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಶೇಕಡ 6.2ಕ್ಕೆ ಹೆಚ್ಚಳವಾಗಿದೆ. ಎರಡನೆಯ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಪರಿಷ್ಕೃತ ಅಂದಾಜಿನ ಪ್ರಕಾರ ಶೇ 5.6ರಷ್ಟು ಇತ್ತು. ಈ ಬೆಳವಣಿಗೆಯು ಸಂಪೂರ್ಣವಾಗಿ ಅನಿರೀಕ್ಷಿತವೇನೂ ಅಲ್ಲ. ಆರ್ಥಿಕ ಬೆಳವಣಿಗೆಯನ್ನು ಹೇಳುವ ಹಲವು ಸೂಚಕಗಳು ಈ ಪ್ರಮಾಣದ ಬೆಳವಣಿಗೆಯ ಸಾಧ್ಯತೆಯನ್ನು ಹೇಳಿದ್ದವು. ಅವು ಹೇಳಿದ್ದನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಕಳೆದ ವಾರ ಬಿಡುಗಡೆ ಮಾಡಿದ ಅಂಕಿ–ಅಂಶಗಳು ದೃಢಪಡಿಸಿವೆ. ಮೂರನೆಯ ತ್ರೈಮಾಸಿಕದಲ್ಲಿ ಆಗಿರುವ ಸುಧಾರಣೆಯು ಈ ವರ್ಷದ ಡಿಸೆಂಬರ್ವರೆಗಿನ ಬೆಳವಣಿಗೆಯನ್ನು ಶೇ 6.1ಕ್ಕೆ ತಂದಿರಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಒಟ್ಟು ಆರ್ಥಿಕ ಬೆಳವಣಿಗೆಯು ಶೇ 6.5ರಷ್ಟು ಇರಲಿದೆ ಎಂದು ಎನ್ಎಸ್ಒ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಬೆಳವಣಿಗೆ ದರವನ್ನು ಮೊದಲಿನ ಅಂದಾಜು ಶೇ 6.4ಕ್ಕೆ ನಿಗದಿಪಡಿಸಿತ್ತು. ಕಳೆದ ಆರ್ಥಿಕ ವರ್ಷದಲ್ಲಿ (2023–24) ದೇಶದ ಅರ್ಥ ವ್ಯವಸ್ಥೆಯು ಶೇ 9.2ರಷ್ಟು ಬೆಳವಣಿಗೆ ಕಂಡಿದೆ ಎಂದು ಪರಿಷ್ಕೃತ ಅಂದಾಜು ಹೇಳುತ್ತಿದೆ. ಆದರೆ ಈಚಿನ ಕೆಲವು ತ್ರೈಮಾಸಿಕಗಳಲ್ಲಿ ಬೆಳವಣಿಗೆ ದರದಲ್ಲಿ ಒಂದಿಷ್ಟು ಇಳಿಕೆ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 6.5ರಷ್ಟು ಬೆಳವಣಿಗೆ ಆಗಬೇಕು ಎಂದಾದರೆ, ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಶೇ 7.6ರಷ್ಟು ಬೆಳವಣಿಗೆ ಸಾಧಿಸಬೇಕಾಗುತ್ತದೆ. ಇದು ಈಗಿನ ಸ್ಥಿತಿಯಲ್ಲಿ ಕಷ್ಟಸಾಧ್ಯ.

ಕೃಷಿ ಸೇರಿದಂತೆ ಅರ್ಥ ವ್ಯವಸ್ಥೆಯ ಪ್ರಾಥಮಿಕ ವಲಯಗಳಲ್ಲಿ ಒಳ್ಳೆಯ ಬೆಳವಣಿಗೆ ಕಂಡುಬಂದಿದೆ. ಹಿಂದಿನ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಶೇ 1.8ರಷ್ಟು ಬೆಳವಣಿಗೆ ಕಂಡಿದ್ದ ಈ ವಲಯಗಳು ಈ ಬಾರಿ ಶೇ 5.2ರಷ್ಟು ಬೆಳವಣಿಗೆ ದಾಖಲಿಸಿವೆ. ಆದರೆ ತಯಾರಿಕೆ ಮತ್ತು ಸೇವಾ ವಲಯಗಳ ಬೆಳವಣಿಗೆಯಲ್ಲಿ ಇಳಿಕೆ ಕಂಡುಬಂದಿದೆ. ತಯಾರಿಕಾ ವಲಯವು ಹಿಂದಿನ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಶೇ 12.4ರಷ್ಟು ಬೆಳವಣಿಗೆ ಕಂಡಿತ್ತು, ಅದು ಈ ಬಾರಿ ಶೇ 4.8ರಷ್ಟು ಬೆಳೆದಿದೆ. ಸೇವಾ ವಲಯವು ಹಿಂದಿನ ಬಾರಿ ಶೇ 8.3ರಷ್ಟು ಬೆಳವಣಿಗೆ ಕಂಡಿತ್ತು, ಈ ಬಾರಿ ಶೇ 7.4ರಷ್ಟು ಬೆಳವಣಿಗೆ ಸಾಧಿಸಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ನಂತರ ಸಾರಿರುವ ಸುಂಕ ಸಮರದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಈ ಎರಡು ವಲಯಗಳು ಮುಂದಿನ ತ್ರೈಮಾಸಿಕಗಳಲ್ಲಿಯೂ ದೊಡ್ಡ ಮಟ್ಟದ ಬೆಳವಣಿಗೆ ಸಾಧಿಸದೇ ಇರಬಹುದು. ಜಾಗತಿಕ ಅನಿಶ್ಚಿತ ಪರಿಸ್ಥಿತಿಯು ಭಾರತದ ರಫ್ತು ವಹಿವಾಟುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಸರ್ಕಾರದಿಂದ ಆಗುವ ವೆಚ್ಚಗಳಲ್ಲಿನ ಹೆಚ್ಚಳ ಹಾಗೂ ವ್ಯಕ್ತಿಗಳು ಮತ್ತು ಕುಟುಂಬಗಳು ಖಾಸಗಿಯಾಗಿ ಖರೀದಿಗಾಗಿ ಮಾಡಿದ ವೆಚ್ಚಗಳಲ್ಲಿ ಏರಿಕೆ ಆಗಿದ್ದು ಮೂರನೆಯ ತ್ರೈಮಾಸಿಕದಲ್ಲಿನ ಉತ್ತಮ ಸಾಧನೆಗೆ ಪ್ರಮುಖ ಕಾರಣಗಳು. ಈ ಎರಡು ವಿನಿಯೋಗಗಳಲ್ಲಿನ ಹೆಚ್ಚಳವು ಒಂದು ಬಗೆಯಲ್ಲಿ ಶುಭ ಶಕುನ ಇದ್ದಂತೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 4.8ಕ್ಕೆ ತಗ್ಗುವ ನಿರೀಕ್ಷೆ ಇದೆ. ಆದರೆ ಜಾಗತಿಕ ಮಟ್ಟದಲ್ಲಿನ ಅನಿಶ್ಚಿತ ಸ್ಥಿತಿಯು ದೇಶದಲ್ಲಿ ಹಣದುಬ್ಬರವನ್ನು ಜಾಸ್ತಿ ಮಾಡಬಹುದು ಎಂಬ ಆತಂಕವೂ ಒಂದೆಡೆ ಇದೆ. ದೇಶದ ಕಾರ್ಮಿಕ ಮಾರುಕಟ್ಟೆಯಲ್ಲಿ ಒಂದಿಷ್ಟು ಸುಧಾರಣೆಗಳು ಕಂಡುಬಂದಿವೆ. ಆದರೆ ಇವೆಲ್ಲ ಮುಂದಿನ ದಿನಗಳಲ್ಲಿಯೂ ಹೀಗೆಯೇ ಉಳಿದುಕೊಳ್ಳಲಿವೆಯೇ ಎಂಬ ಪ್ರಶ್ನೆಗೆ ಉತ್ತರ ತಕ್ಷಣಕ್ಕೆ ಸಿಗುವುದಿಲ್ಲ. ರಾಜ್ಯಗಳ ಮಟ್ಟದಲ್ಲಿ ಜನರನ್ನು ಓಲೈಸುವ ದೃಷ್ಟಿಯಿಂದ ಆಗುತ್ತಿರುವ ಹಲವು ವೆಚ್ಚಗಳು ಸರ್ಕಾರಗಳ ಹೂಡಿಕೆ ಶಕ್ತಿಯನ್ನು ಕುಗ್ಗಿಸಬಹುದು. ಆದಾಯ ತೆರಿಗೆಯ ಮಿತಿಯನ್ನು ಹೆಚ್ಚಿಸುವುದಾಗಿ ಕೇಂದ್ರ ಬಜೆಟ್ನಲ್ಲಿ ಮಾಡಿರುವ ಘೋಷಣೆಯು ಜಾರಿಗೆ ಬಂದ ನಂತರದಲ್ಲಿ ದಕ್ಕುವ ಲಾಭ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಅದರಲ್ಲೂ, ಈ ಕ್ರಮದಿಂದ ಮಧ್ಯಮಾವಧಿಯಲ್ಲಿ ಲಾಭ ಆಗಬಹುದೇ ವಿನಾ ತಕ್ಷಣಕ್ಕೆ ಆಗುವುದಿಲ್ಲ. ಉತ್ತರಪ್ರದೇಶದಲ್ಲಿ ನಡೆದ ಕುಂಭಮೇಳದಿಂದಾಗಿ ಮಾರುಕಟ್ಟೆಯಲ್ಲಿ ಎಷ್ಟರಮಟ್ಟಿಗೆ ಚೈತನ್ಯ ಸೃಷ್ಟಿಯಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಜಾಗತಿಕ ಅನಿಶ್ಚಿತತೆ ಸೇರಿದಂತೆ ಹಲವು ಕಾರಣಗಳಿಂದಾಗಿ ಖಾಸಗಿ ವಲಯದ ಕಾರ್ಪೊರೇಟ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಅಂದರೆ, ಆಂತರಿಕ ಹಾಗೂ ಜಾಗತಿಕ ವಿದ್ಯಮಾನಗಳ ಕಾರಣದಿಂದಾಗಿ ಒಟ್ಟಾರೆ ಪರಿಸ್ಥಿತಿಯು ಅನಿಶ್ಚಿತವಾಗಿದೆ. ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತವು ದಾಖಲಿಸಲಿದೆಯಾದರೂ ಒಂದಿಷ್ಟು ಅಡ್ಡಿಗಳನ್ನು ಎದುರಿಸಲಿದೆ ಎಂಬುದು ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.