ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ನೌಕರರು ಭಾಗಿಯಾಗಲು ಇದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದೆ. ಸರ್ಕಾರದ ಈ ತೀರ್ಮಾನವನ್ನು ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಿಯ ಸ್ಥಾನದಲ್ಲಿರುವ ಆರ್ಎಸ್ಎಸ್ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಬಿಗುವಿನ ಸ್ಥಿತಿಯು ತಿಳಿಯಾಗುತ್ತಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕು, ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕೈಗೊಂಡಿರುವ ಈ ತೀರ್ಮಾನವು ಆರ್ಎಸ್ಎಸ್ ನಾಯಕತ್ವವನ್ನು ಸಮಾಧಾನಪಡಿಸಲು ನಡೆಸಿರುವ ಒಂದು ಯತ್ನವಾಗಿರಬಹುದು. ಈಚಿನ ದಿನಗಳಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕತ್ವದ ಕಡೆಯಿಂದ ಬಂದ ಕೆಲವು ಮಾತುಗಳು ಎರಡೂ ಸಂಘಟನೆಗಳ ನಡುವೆ ಅಂತರ ಸೃಷ್ಟಿಯಾಗಿರುವುದನ್ನು ತೋರಿಸುತ್ತಿದ್ದವು. ಆರ್ಎಸ್ಎಸ್ನ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಅದರ ಹಲವು ನಾಯಕರು, ಯಾರ ಹೆಸರನ್ನೂ ಉಲ್ಲೇಖಿಸದೆ ಬಿಜೆಪಿಯನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಬಿಜೆಪಿಯು ಸ್ವತಂತ್ರವಾಗಿದೆ, ತನ್ನ ಚಟುವಟಿಕೆಗಳನ್ನು ತಾನೇ ನಿಭಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದರು. ಸಂಬಂಧವನ್ನು ಉತ್ತಮಪಡಿಸಿ
ಕೊಳ್ಳುವ ಉದ್ದೇಶದಿಂದಲೇ ಈಗ ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು. ಕೇಂದ್ರದಲ್ಲಿ ಬಿಜೆಪಿಯು 10 ವರ್ಷ ಬಹುಮತದೊಂದಿಗೆ ಆಡಳಿತ ನಡೆಸಿದ್ದಾಗ ಈ ತೀರ್ಮಾನವನ್ನು ತೆಗೆದುಕೊಳ್ಳದೆ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ನಡೆಸ ಬೇಕಿರುವ ಸ್ಥಿತಿಯಲ್ಲಿ ಇರುವಾಗ ಇಂತಹ ತೀರ್ಮಾನ ಕೈಗೊಂಡಿರುವುದು ಈ ವಾದಕ್ಕೆ ಹೆಚ್ಚು ಬಲ ನೀಡು ತ್ತದೆ. ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ನೌಕರರು ಭಾಗಿಯಾಗಬಾರದು ಎಂಬ ನಿರ್ಬಂಧವು 50ಕ್ಕೂ ಹೆಚ್ಚು ವರ್ಷಗಳಿಂದ ಜಾರಿಯಲ್ಲಿ ಇತ್ತು ಎಂಬುದು ಗಮನಾರ್ಹ.

1966, 1970 ಹಾಗೂ 1980ರಲ್ಲಿ ಕೇಂದ್ರ ಸರ್ಕಾರವು ಹೊರಡಿಸಿದ್ದ ಸುತ್ತೋಲೆಗಳು, ಕೇಂದ್ರ ಸರ್ಕಾರದ ನೌಕರರು ಆರ್ಎಸ್ಎಸ್ ಮತ್ತು ಜಮಾತ್–ಎ–ಇಸ್ಲಾಮಿಯಂತಹ ಸಂಘಟನೆಗಳ ಸದಸ್ಯರಾಗುವುದನ್ನು ಅಥವಾ ಅವುಗಳ ಚಟುವಟಿಕೆ
ಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸಿದ್ದವು. ಅಖಿಲ ಭಾರತ ಸೇವಾ ನಿಯಮಗಳಲ್ಲಿ ಕೂಡ ಈ ಮಾತು ಇತ್ತು. ಕೇಂದ್ರ ಸರ್ಕಾರದ ನೌಕರರು ರಾಜಕೀಯ ಪಕ್ಷಗಳನ್ನು ಅಥವಾ ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಸಂಘಟನೆಗಳನ್ನು ಸೇರುವುದನ್ನು ಈ ನಿಯಮಗಳು ನಿಷೇಧಿಸಿವೆ. ಆದರೆ ಕೇಂದ್ರ ಸರ್ಕಾರವು ಜುಲೈ 9ರಂದು ಹೊರಡಿಸಿರುವ ಜ್ಞಾಪನಾಪತ್ರವು ಈ ಹಿಂದಿನ ಆದೇಶಗಳಲ್ಲಿ ಇದ್ದ ‘ಆರ್ಎಸ್ಎಸ್’ ಉಲ್ಲೇಖವನ್ನು ತೆಗೆದುಹಾಕಿದೆ. ಆ ಮೂಲಕ ಆರ್ಎಸ್ಎಸ್ನ ಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡಿದಂತಾಗಿದೆ. ಈ ವಿಚಾರವಾಗಿ ಕೆಲವು ರಾಜ್ಯಗಳ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಇದ್ದವು. ರಾಜಕೀಯ ಹಾಗೂ ಆಡಳಿತವು ಪ್ರತ್ಯೇಕವಾಗಿ ಇರಬೇಕು, ಇವೆರಡೂ ಪರಸ್ಪರ ಪೂರಕವಾದರೂ ನೌಕರರು ಅವೆರಡನ್ನು ಪ್ರತ್ಯೇಕಿಸುವ ಗೆರೆಯನ್ನು ದಾಟಬಾರದು ಎಂಬ ತತ್ವದ ಆಧಾರದಲ್ಲಿ ಸರ್ಕಾರಿ ನೌಕರರ ಮೇಲೆ ಈ ನಿರ್ಬಂಧ ವಿಧಿಸಲಾಗಿತ್ತು. ಅಧಿಕಾರಿಶಾಹಿ ವ್ಯವಸ್ಥೆಯು ಶಾಶ್ವತ, ಅದು ಕಾಲಕಾಲಕ್ಕೆ ಬದಲಾಗುವುದಿಲ್ಲ. ಆದರೆ ಸರ್ಕಾರದ ನೇತೃತ್ವವನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಪಕ್ಷಗಳು ವಹಿಸುತ್ತವೆ. ಹೀಗಾಗಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರಿಗಳು ಯಾವುದೇ ಸರ್ಕಾರದ ಜೊತೆ ರಾಜಕೀಯವಾಗಿ ನಂಟು ಹೊಂದಿರುವುದು ಸರಿಯಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಿರ್ವಹಿಸಬೇಕಿರುವ ಜವಾಬ್ದಾರಿಗಳ ನಡುವೆ ಸ್ಪಷ್ಟ ವ್ಯತ್ಯಾಸ ಇದೆ.

ಬಿಜೆಪಿಯ ಪಾಲಿಗೆ ಆರ್ಎಸ್ಎಸ್ ಸೈದ್ಧಾಂತಿಕ ಮಾರ್ಗದರ್ಶಕ ಇದ್ದಂತೆ. ಆರ್ಎಸ್ಎಸ್ ಎಂಬುದು ಸಾಂಸ್ಕೃತಿಕ ಸಂಘಟನೆ ಮಾತ್ರ ಎಂಬ ವಾದವನ್ನು ಯಾರೂ ಒಪ್ಪುವುದಿಲ್ಲ. ಆರ್ಎಸ್ಎಸ್ಗೆ ಸ್ಪಷ್ಟವಾದ ರಾಜಕೀಯ ಉದ್ದೇಶಗಳು ಇವೆ, ಈ ಸಂಘಟನೆಯ ಪ್ರಮುಖ ರಾಜಕೀಯ ಅಂಗ ಬಿಜೆಪಿ. ಸರ್ಕಾರಿ ನೌಕರರಿಗೆ ಆರ್ಎಸ್ಎಸ್ನ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವುದು, ಅಧಿಕಾರಿಶಾಹಿಯು ತಟಸ್ಥವಾಗಿರಬೇಕು ಎಂಬ ತತ್ವಕ್ಕೆ ವಿರುದ್ಧ. ಈ ನಿರ್ಧಾರದ ಕಾರಣದಿಂದಾಗಿ ಅಧಿಕಾರಿಶಾಹಿಯಲ್ಲಿ ರಾಜಕೀಯ ಬೆರೆಯುತ್ತದೆ, ಸರ್ಕಾರದ ನೇತೃತ್ವ ವಹಿಸಿದ ರಾಜಕೀಯ ಪಕ್ಷ ಬದಲಾದಾಗ ಅಧಿಕಾರಿಗಳು ಹಾಗೂ ಸರ್ಕಾರದ ನಡುವೆ ಸಂಘರ್ಷ ಮೂಡಬಹುದು. ಸರ್ಕಾರದ ನಿರ್ಧಾರವು ದೇಶದ ಆಡಳಿತದಲ್ಲಿ ಅತ್ಯಂತ ಸ್ಥಿರವಾದ ವ್ಯವಸ್ಥೆಯೊಂದರ ಮೇಲೆ ನಿಯಂತ್ರಣ ಸಾಧಿಸುವ ಯತ್ನ. ದೇಶದ ಹಲವು ರಾಜ್ಯ ಸರ್ಕಾರಗಳು ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ತಮ್ಮ ನೌಕರರ ಮೇಲೆ ವಿಧಿಸಿರುವ ನಿರ್ಬಂಧವು ಜಾರಿಯಲ್ಲಿ ಇನ್ನೂ ಇದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.