ಶಿಕ್ಷಕರ ತೀವ್ರ ಕೊರತೆಯನ್ನು ನೀಗಿಸಲು 2025–26ನೇ ಶೈಕ್ಷಣಿಕ ವರ್ಷಕ್ಕೆ 51 ಸಾವಿರ ಅತಿಥಿ ಶಿಕ್ಷಕರನ್ನು
ನೇಮಿಸಲಾಗುವುದು ಎಂದು ಕರ್ನಾಟಕದ ಶಿಕ್ಷಣ ಇಲಾಖೆಯು ತಿಳಿಸಿದೆ. ಈ ನೇಮಕಾತಿ ಪೂರ್ಣಗೊಂಡಲ್ಲಿ ಇದು ಈವರೆಗಿನ ಗರಿಷ್ಠ ಸಂಖ್ಯೆಯ ನೇಮಕವಾಗಲಿದೆ. ಮೇಲ್ನೋಟಕ್ಕೆ ಇದು ಸ್ವಾಗತಾರ್ಹ ಮತ್ತು ದೀರ್ಘಾವಧಿ ಬಿಕ್ಕಟ್ಟೊಂದಕ್ಕೆ ತಕ್ಷಣದ ಪ್ರತಿಸ್ಪಂದನ ಎಂಬಂತೆ ಕಾಣಿಸುತ್ತಿದೆ. ಆದರೆ, ಈ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿ ಸರ್ಕಾರದ ಯೋಜನೆ, ಆದ್ಯತೆಗಳು ಮತ್ತು ಬದ್ಧತೆಯ ಕುರಿತು ಹಲವು ಕಠಿಣ ಪ್ರಶ್ನೆಗಳು ಎದುರಾಗುತ್ತವೆ. ಮೊದಲನೆಯದಾಗಿ, 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ಖಾಲಿ ಬಿಟ್ಟಿರುವಂತಹ ಸನ್ನಿವೇಶವನ್ನು ನಾವು ಸೃಷ್ಟಿ ಮಾಡಿಕೊಂಡಿದ್ದಾದರೂ ಏಕೆ? ಅಲ್ಪಾವಧಿಯಲ್ಲಿ ಅತ್ಯಗತ್ಯವಾದ ಈ ನೇಮಕವು ವ್ಯವಸ್ಥೆಯ ವೈಫಲ್ಯಕ್ಕೆ ಕಣ್ಣಿಗೆ ಕುಕ್ಕುವ ಉದಾಹರಣೆಯಾಗಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸಮಸ್ಯೆಗೆ ಇರುವ ತುರ್ತು ಸ್ಪಂದನವೇ ವಿನಾ ಶಾಶ್ವತ ಪರಿಹಾರವಲ್ಲ. ಇಷ್ಟೊಂದು ಹುದ್ದೆಗಳನ್ನು ಖಾಲಿ ಬಿಟ್ಟಿರುವುದು ಆಡಳಿತ ವ್ಯವಸ್ಥೆಯು ಎಷ್ಟೊಂದು ನಿರ್ಲಕ್ಷ್ಯದಿಂದ ಇದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.

ಕಾಯಂ ಶಿಕ್ಷಕರ ನೇಮಕ ಆಗುವವರೆಗೆ ಅಥವಾ ಈ ಶೈಕ್ಷಣಿಕ ವರ್ಷದ ಕೊನೆಯವರೆಗೆ ಮಾತ್ರ ಈ ಅತಿಥಿ ಶಿಕ್ಷಕರು ಕೆಲಸದಲ್ಲಿ ಇರುತ್ತಾರೆ. ಅದಾದ ಬಳಿಕ ಅವರು ಏನು ಮಾಡಬೇಕು? ತಾತ್ಕಾಲಿಕ ಕೆಲಸವು ಮುಂದೊಂದು ದಿನ ಕಾಯಂ ಆಗಬಹುದು ಎಂಬ ನಿರೀಕ್ಷೆಯಲ್ಲಿ ಈ ಅತಿಥಿ ಶಿಕ್ಷಕರು ಉತ್ತಮ ವೇತನ ನೀಡುವ ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದುರದೃಷ್ಟ ವೆಂದರೆ, ಅತಿಥಿ ಶಿಕ್ಷಕರ ಈ ನಿರೀಕ್ಷೆ ಸಾಕಾರವಾದ ನಿದರ್ಶನಗಳು ಈಚಿನ ವರ್ಷಗಳಲ್ಲಂತೂ ಇಲ್ಲ. ಹಲವು ವರ್ಷ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದವರು ಕಾಯಂ ಶಿಕ್ಷಕರ ನೇಮಕವಾದ ಕೂಡಲೇ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇವರಲ್ಲಿ ಹಲವರಿಗೆ ನಿಗದಿತ ವಿದ್ಯಾರ್ಹತೆ ಇರುವುದಿಲ್ಲ.

ಹಲವು ವರ್ಷ ಬೋಧನೆಯ ಕೆಲಸ ಮಾಡಿದವರಿಗೆ ಹೊಸ ನೇಮಕಾತಿ ಪ್ರಕ್ರಿಯೆ ಯಲ್ಲಿ ಭಾಗವಹಿಸಲು ವಯೋಮಿತಿ ಅಡ್ಡ ಬರುತ್ತದೆ. ಪರ್ಯಾಯ ಕೆಲಸವನ್ನು ಹುಡುಕಿಕೊಳ್ಳುವುದಕ್ಕೂ ವಯಸ್ಸು ತೊಡಕಾಗುತ್ತದೆ. ಆದರೆ, ಇಂತಹ ತಾತ್ಕಾಲಿಕ ನೀತಿಯು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅತಿಥಿ ಶಿಕ್ಷಕರು ಮಾತ್ರವಲ್ಲದೆ ಅವರ ಮೇಲೆ ಅವಲಂಬಿತರಾಗಿರುವ ವಿದ್ಯಾರ್ಥಿಗಳ ಮೇಲೆಯೂ ಈ ವ್ಯವಸ್ಥೆಯು ಕೆಟ್ಟ ಪರಿಣಾಮ ಬೀರುತ್ತದೆ. ಪರಿಶಿಷ್ಟ ಜಾತಿಯ ಒಳಮೀಸಲು ವರ್ಗೀಕರಣವು ಪೂರ್ಣಗೊಂಡ ಬಳಿಕ ಕಾಯಂ ನೇಮಕಾತಿ ನಡೆಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಅದಕ್ಕಾಗಿ ಎಷ್ಟು ಸಮಯ ಕಾಯಬೇಕು? ನೇಮಕಾತಿ ಎಂಬುದು ನಿರಂತರವಾಗಿ ತಡೆಯಿಲ್ಲದೆ ನಡೆಯಬೇಕಾದ ಪ್ರಕ್ರಿಯೆಯೇ ಹೊರತು ಹುದ್ದೆಗಳು ಖಾಲಿ ಉಳಿದು ಬಿಕ್ಕಟ್ಟು ಎದುರಾದಾಗ ನಡೆಸುವ ಹೋರಾಟ ಅಲ್ಲ. ಆಡಳಿತಾತ್ಮಕ ಅದಕ್ಷತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಶಿಕ್ಷಣದಂತಹ ಮಹತ್ವದ ಕ್ಷೇತ್ರದ ಮೇಲೆ ಬೀರುವ ಪರಿಣಾಮಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

ದತ್ತಾಂಶಗಳು ದಿಗಿಲುಗೊಳಿಸುವ ರೀತಿಯಲ್ಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 20,875 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಲಬುರಗಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣ ಪ್ರಮಾಣವು ಕೇವಲ ಶೇ 42.43ರಷ್ಟಿದೆ ಎಂಬುದು ಆಶ್ಚರ್ಯ ಹುಟ್ಟಿಸಲು ಕಾರಣವೇ ಇಲ್ಲ. ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿನ ಉತ್ತೀರ್ಣ ಪ್ರಮಾಣವು ಶೇ 62.07ರಷ್ಟು ಇದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆಆರ್ಇಐಎಸ್) ನಡೆಸುವ ಶಾಲೆಗಳು ಶೇ 91ರಷ್ಟು ಫಲಿತಾಂಶ ಪಡೆದು ಅಚ್ಚರಿ ಮೂಡಿಸಿವೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವು ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ. ಹಾಗಾಗಿ, ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ವಿಚಾರದಲ್ಲಿ ಗಂಭೀರವಾಗಿದ್ದರೆ, ತಾತ್ಕಾಲಿಕ ಪರಿಹಾರಗಳ ಆಚೆಗಿನ ದಾರಿ ಹುಡುಕಿಕೊಳ್ಳಬೇಕು. ಅಗತ್ಯ ವಿದ್ಯಾರ್ಹತೆ ಇರುವ ಕಾಯಂ ಶಿಕ್ಷಕರನ್ನು ನೇಮಿಸುವುದು ಮಾತ್ರ ಇಲ್ಲಿ ಇರುವ ಪರಿಹಾರ. ರಾಜ್ಯ ಸರ್ಕಾರವು ಗಟ್ಟಿ ನಿರ್ಧಾರ ಕೈಗೊಂಡು ನೇಮಕಾತಿಗೆ ವೇಗ ತುಂಬಬೇಕು. ಶಿಕ್ಷಕರಿಗೆ ತರಬೇತಿ ನೀಡಿ ಶಾಲೆಗಳಲ್ಲಿ ಸ್ಥಿರತೆ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಅರೆ ಬರೆ ಶಿಕ್ಷಣ ವ್ಯವಸ್ಥೆ ಬೇಕಾಗಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬಲ್ಲ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.