ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್ಒ) ಹೊರಬರುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಟಿಸಿದ್ದಾರೆ. ಇದು ಸಂಸ್ಥೆಗೆ ಬಿದ್ದ ಗಂಭೀರವಾದ ಹೊಡೆತವಾಗಿದೆ. ಅಮೆರಿಕವೂ ಸೇರಿದಂತೆ ಎಲ್ಲ ದೇಶಗಳ ಆರೋಗ್ಯ ಸ್ಥಿತಿಯ ಮೇಲೆ ಇದು ಪ್ರತಿಕೂಲ ಪರಿಣಾಮವನ್ನು ಬೀರಲಿದೆ. ಟ್ರಂಪ್ ಅವರ ಈ ನಿರ್ಧಾರವು ನಿರೀಕ್ಷಿತ. ಡಬ್ಲ್ಯುಎಚ್ಒದಿಂದ ಹೊರಕ್ಕೆ ಬರುವ ಪ್ರಕ್ರಿಯೆಯನ್ನು ಟ್ರಂಪ್ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಗಲೇ ಆರಂಭಿಸಿದ್ದರು. ಜೋ ಬೈಡನ್ ಅಧ್ಯಕ್ಷರಾದ ಬಳಿಕ ಈ ನಿರ್ಧಾರವನ್ನು ಬದಲಿಸಿದ್ದರು. ಡಬ್ಲ್ಯುಎಚ್ಒಗೆ ಇನ್ನು ಮುಂದೆ ಅಮೆರಿಕ ಸರ್ಕಾರದಿಂದ ಯಾವುದೇ ದೇಣಿಗೆ ಇರುವುದಿಲ್ಲ. ಹಾಗೆಯೇ ಒಂದು ವರ್ಷದೊಳಗೆ ಸಂಬಂಧವನ್ನು ಸಂಪೂರ್ಣವಾಗಿ ಅಮೆರಿಕ ಕಡಿದುಕೊಳ್ಳಲಿದೆ. ‘ಅಮೆರಿಕಕ್ಕೆ ಡಬ್ಲ್ಯುಎಚ್ಒ ವಂಚನೆ ಮಾಡಿದೆ, ಕೋವಿಡ್ ಸಾಂಕ್ರಾಮಿಕ ಮತ್ತು ಇತರ ಆರೋಗ್ಯ ಬಿಕ್ಕಟ್ಟುಗಳನ್ನು ಸರಿಯಾಗಿ ನಿಭಾಯಿಸಿಲ್ಲ, ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ, ಸ್ವಾಯತ್ತವಾಗಿಲ್ಲ ಮತ್ತು ಚೀನಾದ ಪರವಾಗಿ ಇದೆ’ ಎಂಬ ಆರೋಪಗಳನ್ನು ಟ್ರಂಪ್ ಮಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ಅತಿಹೆಚ್ಚು ದೇಣಿಗೆ ನೀಡುತ್ತಿದ್ದ ದೇಶ ಅಮೆರಿಕ. ಈ ಸಂಸ್ಥೆಯು ಪಡೆಯುತ್ತಿದ್ದ ಒಟ್ಟು ದೇಣಿಗೆಯಲ್ಲಿ ಐದನೇ ಒಂದು ಭಾಗವನ್ನು ಅಮೆರಿಕ ಪಾವತಿಸುತ್ತಿತ್ತು. ಈ ಮೊತ್ತ ನಿಂತುಹೋದರೆ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳುತ್ತದೆ.

ಜಗತ್ತಿನಲ್ಲಿ ನಡೆಯುವ ಅನಾರೋಗ್ಯ ತಡೆ ಚಟುವಟಿಕೆಗಳಿಗೆ ಡಬ್ಲ್ಯುಎಚ್ಒ ಮಾರ್ಗದರ್ಶಿಯಾಗಿದೆ. ಮಲೇರಿಯಾ, ಎಚ್ಐವಿ, ಕ್ಷಯ ಮತ್ತು ಇತರ ಸೋಂಕುಗಳ ತಡೆಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ಬೆಂಬಲ ನೀಡುವ ಕೆಲಸವನ್ನು ಡಬ್ಲ್ಯುಎಚ್ಒ ಮಾಡುತ್ತದೆ. ಸಾಂಕ್ರಾಮಿಕಗಳ ಮೇಲೆ ನಿಗಾ ಇರಿಸಿ, ಅವು ಹರಡುವುದನ್ನು ತಡೆಯುವ ಕಾರ್ಯತಂತ್ರಗಳನ್ನು ರೂಪಿಸಿ, ಎಲ್ಲ ದೇಶಗಳಿಗೆ ಮುನ್ನೆಚ್ಚರಿಕೆ ನೀಡುವ ಕೆಲಸವನ್ನು ಮಾಡುತ್ತದೆ. ಲಸಿಕೆ ಕಾರ್ಯಕ್ರಮಗಳನ್ನು ಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬಡ ಮತ್ತು ಹಿಂದುಳಿದ ದೇಶಗಳಿಗೆ ಲಸಿಕೆ ಮತ್ತು ಜೀವರಕ್ಷಕ ಔಷಧಗಳು ಲಭ್ಯವಾಗುವುದನ್ನು ಖಾತರಿಪಡಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ವಿಚಾರಗಳಲ್ಲಿ ಅಧ್ಯಯನಗಳು ಮತ್ತು ಸಂಶೋಧನೆಗಳನ್ನು ನಡೆಸಿ ಅದರ ಫಲಿತಾಂಶಗಳನ್ನು ಸರ್ಕಾರಗಳು ಮತ್ತು ಆರೋಗ್ಯ ಸಂಸ್ಥೆಗಳ ಜೊತೆ ಹಂಚಿಕೊಳ್ಳುತ್ತದೆ. ತಳಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಇದರಿಂದಾಗಿ ಸಾಧ್ಯವಾಗುತ್ತದೆ. ಈ ಸಂಸ್ಥೆ ಕೈಗೊಂಡ ಕ್ರಮಗಳೇ ಸಿಡುಬು ನಿರ್ಮೂಲನೆಗೆ ಕಾರಣವಾಗಿವೆ. ಜಗತ್ತಿನ ಬಹುಭಾಗವು ಪೋಲಿಯೊ ಮುಕ್ತವಾಗಿದ್ದರಲ್ಲಿ ಡಬ್ಲ್ಯುಎಚ್ಒ ಪಾತ್ರ ಮಹತ್ವವಾದುದು. ಏಡ್ಸ್ ಸಂಬಂಧಿ ಸಾವು ಶೇ 70ರಷ್ಟು ಇಳಿಕೆಯಾಗಿದೆ. ಡಬ್ಲ್ಯುಎಚ್ಒ ಹೊಂದಿರುವ ಮಾಹಿತಿ, ಪರಿಣತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳ ಜೊತೆಗಿನ ಸಂಪರ್ಕವು ಈ ಸಂಸ್ಥೆಗೆ ಮಹತ್ವದ ಸ್ಥಾನವನ್ನು ಒದಗಿಸಿದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಈ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ.

ಜಗತ್ತಿನ ದೇಶಗಳೆಲ್ಲವೂ ಪರಸ್ಪರ ಬೆಸೆದುಕೊಂಡಿವೆ. ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುತ್ತಲೇ ಇರುತ್ತಾರೆ. ಈ ಜನರ ಜೊತೆಗೆ ರೋಗಗಳು ಮತ್ತು ಸೋಂಕುಗಳು ಕೂಡ ಸಂಚರಿಸುತ್ತವೆ. ಹಾಗಾಗಿಯೇ ಜಾಗತಿಕ ಮಟ್ಟದಲ್ಲಿ ಆರೋಗ್ಯ ಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡಲು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದರ ಅಗತ್ಯ ಇದೆ. 194 ದೇಶಗಳ ಸದಸ್ಯತ್ವ ಹೊಂದಿರುವ ಡಬ್ಲ್ಯುಎಚ್ಒ ಎಲ್ಲ ದೇಶಗಳಲ್ಲಿಯೂ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿಯೇ ನಿಭಾಯಿಸಿದೆ. ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತರಿಪಡಿಸುವವರೆಗೆ ಯಾರೊಬ್ಬರೂ ಸುರಕ್ಷಿತರಲ್ಲ ಎಂಬ ಮಾತು ಹಿಂದೆಂದಿಗಿಂತಲೂ ಈಗಿನ ಕಾಲಕ್ಕೆ ಹೆಚ್ಚು ಅನ್ವಯ ಆಗುತ್ತದೆ. ಡಬ್ಲ್ಯುಎಚ್ಒ ವಿವಿಧ ವಿಚಾರಗಳಿಗೆ ಸಂಬಂಧಿಸಿ ಟೀಕೆಗಳನ್ನು ಹಿಂದೆ ಎದುರಿಸಿದೆ. ಈ ಸಂಸ್ಥೆಯಲ್ಲಿ ಸುಧಾರಣೆಯ ಅಗತ್ಯವೂ ಇದೆ. ಆದರೆ, ಈ ಸಂಸ್ಥೆಯ ಕಾರ್ಯಚಟುವಟಿಕೆಗಳು ಕುಂಠಿತವಾದರೆ ಅದರಿಂದ ಇಡೀ ಜಗತ್ತು ಸಂಕಷ್ಟಪಡಬೇಕಾಗುತ್ತದೆ. ಸೋಂಕು ರೋಗಗಳ ಹೆಚ್ಚಿನ ಅಪಾಯ ಎದುರಿಸುತ್ತಿರುವ ಅಮೆರಿಕ ಕೂಡ ಸಂಕಷ್ಟದಿಂದ ತಪ್ಪಿಸಿಕೊಳ್ಳಲಾಗದು. ಹಣಕಾಸಿನ ಕೊರತೆಯಿಂದಾಗಿ ವೆಚ್ಚಗಳನ್ನು ಕಡಿತ ಮಾಡಲು ಮತ್ತು ಆದ್ಯತೆಗಳನ್ನು ಮರುರೂಪಿಸಲು ಡಬ್ಲ್ಯುಎಚ್ಒ ನಿರ್ಧರಿಸಿದೆ. ಹೊರಬರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಮೆರಿಕವನ್ನು ಕೋರಿದೆ. ಆದರೆ, ಟ್ರಂಪ್ ಅವರು ಈ ಕೋರಿಕೆಗೆ ಮನ್ನಣೆ ನೀಡುವ ಸಾಧ್ಯತೆ ಬಹಳ ಕ್ಷೀಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.