ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಆಕ್ಸಿಯಂ–4ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಪ್ರವೇಶ ಮಾಡಿರುವುದು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿನ ಹೊಸ ಹಂತವೊಂದನ್ನು ಸೂಚಿಸುತ್ತದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಈವರೆಗೆ ಸಾಂಪ್ರದಾಯಿಕವಾಗಿ ಆರ್ಥಿಕ ಪ್ರಗತಿಯನ್ನೇ ಕೇಂದ್ರೀಕರಿಸಿಕೊಂಡಿತ್ತು. ಈ ಹಿಂದಿನವರು ಲಭ್ಯ ಸಂಪನ್ಮೂಲವನ್ನು ಸಮಾಜದ ‘ನಿಜವಾದ ಸಮಸ್ಯೆ’ಗಳನ್ನು ಪರಿಹರಿಸಲು ಬಳಸಿಕೊಂಡಿದ್ದರು. ಹಣಕಾಸಿನ ಕೊರತೆಯು ತೀವ್ರವಾಗಿಯೇ ಇತ್ತು. ಬಾಹ್ಯ ಜಗತ್ತಿನ ಶೋಧದ ವಿಚಾರದ ಕುರಿತು ಗಮನ ಕೇಂದ್ರೀಕರಿಸಲು ಸಾಧ್ಯವಿರಲಿಲ್ಲ. ಕಳೆದ ಎರಡು ದಶಕಗಳಲ್ಲಿ ಈ ಪರಂಪರೆಯನ್ನು ಮುರಿಯಲಾಗಿದೆ. ಆಸ್ಟ್ರೊಸ್ಯಾಟ್, ಚಂದ್ರಯಾನ–1 ಮತ್ತು ಮಂಗಳ ಗ್ರಹದ ಕಕ್ಷೆಗೆ ಉಪಗ್ರಹ ಮುಂತಾದ ಕಾರ್ಯಕ್ರಮಗಳು ಬಾಹ್ಯಾಕಾಶದಲ್ಲಿ ಭಾರತದ ಬದಲಾದ ಆಸಕ್ತಿಗೆ ನಿದರ್ಶನಗಳಾಗಿವೆ. ಚಂದ್ರಯಾನ–2 ವಿಫಲವಾಯಿತು. ಆದರೆ, ಚಂದ್ರಯಾನ–3 ಯಶಸ್ವಿಯಾಯಿತು. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯೊಂದನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇತಿಹಾಸ ಬರೆಯಿತು. ಈ ವಿರಳ ವೈಜ್ಞಾನಿಕ ಸಾಧನೆಯನ್ನು ಇಡೀ ದೇಶವು ಉಸಿರು ಬಿಗಿಹಿಡಿದು ನೋಡಿತ್ತು. ವಿಕ್ರಮ್ ನೌಕೆಯು ಚಂದ್ರನ ಅಂಗಳದಲ್ಲಿ ಇಳಿದುದನ್ನು ಕಂಡು ಇಡೀ ದೇಶ ಸಂಭ್ರಮಪಟ್ಟಿತ್ತು.

ಈ ಯಶಸ್ಸಿನಿಂದ ಉತ್ತೇಜಿತಗೊಂಡ ಕೇಂದ್ರ ಸರ್ಕಾರವು ಆಳ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅನುಮೋದನೆ ಕೊಟ್ಟಿದೆ. ಚಂದ್ರನ ಮೇಲೆ ಮಾನವಸಹಿತ ನೌಕೆಯನ್ನು 2040ರ ಹೊತ್ತಿಗೆ ಇಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸೂರ್ಯ ಮತ್ತು ಶುಕ್ರ ಗ್ರಹವನ್ನು ಅಧ್ಯಯನ ನಡೆಸುವ ಯೋಜನೆಗಳೂ ಇವೆ. ಅತ್ಯಲ್ಪ ಗುರುತ್ವಾಕರ್ಷಣ ಶಕ್ತಿ ಇರುವ ವಾತಾವರಣದಲ್ಲಿ ಶುಭಾಂಶು ಅವರು 14 ದಿನ ಇರಲಿದ್ದಾರೆ. ಮುಂದಿನ ಹಂತದಲ್ಲಿ ಇರುವುದು ಗಗನಯಾನ ಯೋಜನೆ– ಇದರ ಮೊದಲ ಉಡ್ಡಯನವನ್ನು 2027ರಲ್ಲಿ ನಿರೀಕ್ಷಿಸಬಹುದು. ಅದಾದ ಬಳಿಕ ಭಾರತೀಯ ಅಂತರಿಕ್ಷ ನಿಲ್ದಾಣ ಕಾರ್ಯಕ್ರಮ ಇದೆ. ಇದರ ಮೊದಲ ಭಾಗವು 2028ರಲ್ಲಿ ಉಡ್ಡಯನಗೊಳ್ಳಬಹುದು. ಶುಭಾಂಶು ಅವರ ಬಾಹ್ಯಾಕಾಶ ಯಾತ್ರೆಯು ನಾಲ್ಕು ದಶಕ ಹಿಂದಿನ ರಾಕೇಶ್ ಶರ್ಮಾ ಅವರ ಯಾತ್ರೆಯಂತೆ ಅಲ್ಲ. ಭಾರತವು ವಿಸ್ತೃತವಾದ ಕಾರ್ಯಕ್ರಮಗಳೊಂದಿಗೆ ಸಜ್ಜಾಗಿದೆ. ಶುಭಾಂಶು ಮತ್ತು ಅವರ ಜೊತೆಗಾರ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರು ಪಡೆದುಕೊಳ್ಳುವ ಅನುಭವವು ನಮ್ಮ ಕಾರ್ಯಕ್ರಮಗಳಿಗೆ ವರವಾಗಿ ಪರಿಣಮಿಸಲಿದೆ. ಗಗನಯಾತ್ರಿಕರ ಪಡೆಯೊಂದನ್ನು ರೂಪಿಸಲು ಭಾರತವು ಬಹಳ ಗಂಭೀರವಾಗಿ ಸಿದ್ಧವಾಗಿದೆ ಎಂಬುದನ್ನು ಈ ಗಗನಯಾತ್ರಿಕರು ಜಗತ್ತಿಗೆ ತೋರಲಿದ್ದಾರೆ.

ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾಲು ಈಗ ಶೇ 2ರಷ್ಟು ಮಾತ್ರ. ಈಗ ಇದರ ಮೌಲ್ಯವು 840 ಕೋಟಿ ಡಾಲರ್ (₹72 ಸಾವಿರ ಕೋಟಿ) ಮಾತ್ರ. ಆದರೆ, 2033ರ ಹೊತ್ತಿಗೆ ಇದನ್ನು 4,400 ಕೋಟಿ ಡಾಲರ್ಗೆ (₹3.76 ಲಕ್ಷ ಕೋಟಿ) ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆಯಲಾಗಿದೆ. ಈ ಕಂಪನಿಗಳು ಏನು ಮಾಡಬೇಕು ಮತ್ತು ಇಸ್ರೊ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧಪಡಿಸಲಾಗಿದೆ. ಹೊಸದಾಗಿ ಈ ವಲಯಕ್ಕೆ ಬರುವವರನ್ನು ಕೈಹಿಡಿದು ಮುನ್ನಡೆಸುವ ಕೆಲಸವನ್ನೂ ಇಸ್ರೊ ಮಾಡಲಿದೆ. ಬುದ್ಧಿವಂತ ಯುವ ವಿಜ್ಞಾನಿಗಳು, ಎಂಜಿನಿಯರ್ಗಳು, ಗಗನಯಾನಿಗಳು ಮತ್ತು ಉದ್ಯಮಿಗಳ ಅಗತ್ಯ ಇದೆ. ತನ್ನ ಎಂಜಿನಿಯರ್ಗಳಲ್ಲಿ ಹೆಚ್ಚಿನವರು ಐಐಟಿಯ ಹೊರಗೆಯೇ ಕಲಿತವರು ಎಂಬುದನ್ನು ಇಸ್ರೊ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ, 1960 ಮತ್ತು 1970ರ ದಶಕದ ರೀತಿಗೆ ವ್ಯತಿರಿಕ್ತವಾಗಿ ಬುದ್ಧಿವಂತ ಯುವಜನರು ಬಾಹ್ಯಾಕಾಶ ಕಾರ್ಯಕ್ರಮದಿಂದ ಹೊರಗೆ ಏಕೆ ಉಳಿಯುತ್ತಿದ್ದಾರೆ ಎಂಬುದರ ಕುರಿತು ಇಸ್ರೊ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲಿ ಆಕರ್ಷಕ ವೃತ್ತಿ ಅವಕಾಶಗಳನ್ನು ಒದಗಿಸಲು ಹೊಸ ಕ್ರಮಗಳನ್ನು ಕೈಗೊಳ್ಳಬೇಕು. ಯುವ ಆಕಾಂಕ್ಷಿಗಳಲ್ಲಿ ಸ್ಫೂರ್ತಿ ತುಂಬುವಲ್ಲಿ ಸಂವಹನವು ಮಹತ್ವದ ಪಾತ್ರ ವಹಿಸಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಬೇಕಿದ್ದರೆ ಇದು ಅನಿವಾರ್ಯವಾಗಿ ಬೇಕಿರುವ ಕ್ರಮಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.