‘ನಮ್ಮ ಮೆಟ್ರೊ’ ಜಾಲವನ್ನು ಬೆಂಗಳೂರಿನಿಂದ ತುಮಕೂರಿನವರೆಗೆ ವಿಸ್ತರಿಸುವ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರಾಜ್ಯ ಸರ್ಕಾರ ಮುಂದಡಿ ಇರಿಸಿರುವುದು ಹಲವು ಕಾರಣಗಳಿಂದಾಗಿ ತಪ್ಪು. ಈ ಯೋಜನೆಯು ತರ್ಕಹೀನ, ಇದು ತಜ್ಞರ ಸಲಹೆಗಳಿಗೆ ವಿರುದ್ಧ, ಸಾರಿಗೆ ವ್ಯವಸ್ಥೆಗಳ ಮೂಲತತ್ತ್ವಗಳಿಗೂ ವಿರುದ್ಧ. ಹೀಗಿರುವಾಗ, ಡಿಪಿಆರ್ ಸಿದ್ಧಪಡಿಸಲು ಮುಂದಾಗಿರುವುದು ಸಾರ್ವಜನಿಕರ ಹಣವನ್ನು ಪೋಲು ಮಾಡುವ ಕ್ರಮವಾಗುತ್ತದೆ. ಮೆಟ್ರೊ ಜಾಲವನ್ನು ಬೆಂಗಳೂರಿನಿಂದ ತುಮಕೂರಿಗೆ ವಿಸ್ತರಣೆ ಮಾಡುವ ಪ್ರಸ್ತಾವವನ್ನು ಪರಿಗಣಿಸುವ ಅಗತ್ಯವೂ ಇಲ್ಲವಾಗಿತ್ತು. ತುಮಕೂರು ಜಿಲ್ಲೆಯವರೇ ಆಗಿರುವ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರು, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಯೋಜನೆಯನ್ನು ಕೈಗೆತ್ತಿಕೊಂಡಲ್ಲಿ ಅಗತ್ಯವಿರುವ ಅಷ್ಟೂ ಹಣವನ್ನು ಹೂಡಿಕೆ ಮಾಡಲು ಕತಾರ್ನ ಕಂಪನಿಯೊಂದು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಹಣ ಸಿಗುವುದು ಖಚಿತ ಎಂಬುದು ಆ ಹಣವನ್ನು ಅರ್ಥಹೀನವಾದ ಯೋಜನೆಯೊಂದರ ಮೇಲೆ ಸುರಿಯಲು ಪರವಾನಗಿ ಆಗುವುದಿಲ್ಲ. ವಿದೇಶದಿಂದ ಹಣ ತಂದು, ಅದನ್ನು ಬಿಳಿಯಾನೆಯೊಂದರ ಮೇಲೆ ಸುರಿದರೆ ಬಿಳಿಯಾನೆಯ ಸ್ವರೂಪವೇನೂ ಬದಲಾಗುವುದಿಲ್ಲ.

ಅಗತ್ಯವೇ ಇಲ್ಲದ ಹಾಗೂ ಸೂಕ್ತವಲ್ಲದ ಮಾರ್ಗವೊಂದರಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣ ಮಾಡುವುದಕ್ಕಿಂತ ಹೆಚ್ಚು ಮಹತ್ವದ ಸಾರಿಗೆ ಅಗತ್ಯಗಳನ್ನು ಪೂರೈಸಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಮೆಟ್ರೊ ರೈಲು ವಿನ್ಯಾಸವಾಗಿರುವುದು ನಗರವೊಂದರ ಒಳಗಿನ ಸಂಚಾರಕ್ಕಾಗಿ. ಅದು ಹತ್ತಿರದ ಹಾಗೂ ಹೆಚ್ಚು ಓಡಾಟ ನಡೆಸುವ ಮಾರ್ಗಗಳಿಗಾಗಿ ಇದೆ. ಮೆಟ್ರೊ ರೈಲು ಮಾರ್ಗದಲ್ಲಿ ನಿಲ್ದಾಣಗಳ ನಡುವಿನ ಅಂತರವು ಕಡಿಮೆ ಇರುತ್ತದೆ. ಇಂಥದ್ದೊಂದು ಸಾರಿಗೆ ವ್ಯವಸ್ಥೆಯನ್ನು 70 ಕಿ.ಮೀ. ದೂರವಿರುವ ಇನ್ನೊಂದು ನಗರಕ್ಕೆ ಸಂಪರ್ಕ ಕಲ್ಪಿಸಲು ವಿಸ್ತರಿಸುವುದು ಇದರ ಮೂಲ ಉದ್ದೇಶಕ್ಕೆ ವಿರುದ್ಧ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಹೇಳಿರುವ ಪ್ರಕಾರ ಮಾದಾವರ–ನೆಲಮಂಗಲದ ನಡುವೆ ಪ್ರತಿ 1ರಿಂದ 2 ಕಿ.ಮೀ.ಗೆ ಒಂದು ನಿಲ್ದಾಣ ಇರಲಿದೆ. ನೆಲಮಂಗಲದಿಂದ ತುಮಕೂರಿನ ನಡುವಿನ ಮಾರ್ಗದಲ್ಲಿ 4ರಿಂದ 5 ಕಿ.ಮೀ. ನಡುವೆ ಒಂದು ನಿಲ್ದಾಣ ಇದ್ದರೆ ಸಾಕು ಎಂದು ಅದು ಅಂದಾಜಿಸಿದೆ. ಹೀಗೆ ಮಾಡುವುದರಿಂದ ಬೆಂಗಳೂರು ನಗರದ ಅಗತ್ಯಗಳಿಗೂ ಸ್ಪಂದಿಸಿದಂತೆ ಆಗುವುದಿಲ್ಲ, ಎರಡು ನಗರಗಳ ನಡುವೆ ನಿತ್ಯ ಓಡಾಡುವವರಿಗೂ ಅನುಕೂಲ ಆಗುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ಮೆಟ್ರೊ ಮೂಲಕ ಸಂಚರಿಸಲು ಎರಡು ತಾಸು ಬೇಕಾಗಬಹುದು. ಈ ರೀತಿ ಆದರೆ, ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸುವುದೇ ಹೆಚ್ಚು ಅನುಕೂಲಕರ ಆಗುತ್ತದೆ. ವೇಗವಾಗಿ ಪ್ರಯಾಣಿಸಲು ಆಗದಿದ್ದರೆ, ಇಷ್ಟು ದೂರದ ಪ್ರಯಾಣಕ್ಕೆ ಮೆಟ್ರೊ ರೈಲಿನಲ್ಲಿ ಆರಾಮದಾಯಕ ಆಸನಗಳ ವ್ಯವಸ್ಥೆ ಇಲ್ಲದಿದ್ದರೆ, ಎರಡು ನಗರಗಳ ನಡುವಿನ ಮೆಟ್ರೊ ರೈಲು ಸಂಪರ್ಕವು ತನ್ನದೇ ದ್ವಂದ್ವಗಳ ಪರಿಣಾಮವಾಗಿ ನಿರರ್ಥಕವಾಗುತ್ತದೆ. ವಿಶ್ವದ ಇತರೆಡೆಗಳಲ್ಲಿ ಮೆಟ್ರೊ ರೈಲುಗಳು ಎರಡು ನಗರಗಳ ನಡುವೆ ಸಂಪರ್ಕ ಬೆಳೆಸಲು ಬಳಕೆಯಾಗುತ್ತಿಲ್ಲ; ಆ ಉದ್ದೇಶಕ್ಕೆ ಉಪನಗರ ರೈಲುಗಳನ್ನು ಬಳಸಲಾಗುತ್ತದೆ.

ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ತುಮಕೂರಿನ ನಡುವೆ ನಾಲ್ಕು ಪಥಗಳ ರೈಲು ಹಳಿ ನಿರ್ಮಾಣಕ್ಕೆ ₹3,500 ಕೋಟಿ ಹೂಡಿಕೆ ಮಾಡುತ್ತಿದೆ. ಇದು ಮೆಟ್ರೊ ಮಾರ್ಗವನ್ನು ತುಮಕೂರಿಗೆ ವಿಸ್ತರಿಸಲು ಅಗತ್ಯವಿರುವ ಅಂದಾಜು ವೆಚ್ಚಕ್ಕೆ ಹೋಲಿಸಿದರೆ ಬಹಳ ಕಡಿಮೆ. ತುಮಕೂರಿಗೆ ಉಪನಗರ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಕೆ–ರೈಡ್ ಹೊಂದಿದೆ. ಮೇಲ್ದರ್ಜೆಗೆ ಬರಲಿರುವ ರೈಲ್ವೆ ಕಾರಿಡಾರ್ಗೆ ಪರ್ಯಾಯವಾಗಿ ಮೆಟ್ರೊ ರೈಲು ಮಾರ್ಗವನ್ನು ನಿರ್ಮಾಣ ಮಾಡುವುದು ‘ವ್ಯರ್ಥ ವೆಚ್ಚ’ಕ್ಕೆ ಹೊಸತೊಂದು ವ್ಯಾಖ್ಯಾನದಂತೆ ಕಾಣಿಸುತ್ತಿದೆ. ಬೆಂಗಳೂರಿನ ವಾಯವ್ಯ ಹೆಬ್ಬಾಗಿಲನ್ನು ಸಂಪರ್ಕಿಸುವ ಬಹುಮಾದರಿಗಳ ಸಂಪರ್ಕ ವ್ಯವಸ್ಥೆ ಈಗ ತುಮಕೂರಿಗೆ ಬೇಕಾಗಿದೆ. ತುಮಕೂರಿನ ಕಡೆಯಿಂದ ಉಪನಗರ ರೈಲು ಅಥವಾ ಮುಖ್ಯ ರೈಲಿನಲ್ಲಿ ಬಂದಿಳಿಯುವವರು ಯಾವ ತೊಂದರೆಯೂ ಇಲ್ಲದೆ ಬೆಂಗಳೂರಿನ ಬಿಎಂಟಿಸಿ ಅಥವಾ ಮೆಟ್ರೊ ರೈಲು ಮಾರ್ಗವನ್ನು ಬಳಸಲು ಸಾಧ್ಯವಾಗುವಂತೆ ಆಗಬೇಕು. ತುಮಕೂರಿನ ಕಡೆಯಿಂದ ಬರುವ ರೈಲುಗಳು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ, ಕೆಎಸ್ಆರ್ ರೈಲು ನಿಲ್ದಾಣದವರೆಗೆ ಯಾವ ಅಡ್ಡಿಗಳೂ ಇಲ್ಲದೆ ಬರುತ್ತಿವೆ. ಅಂದರೆ ₹20,000 ಕೋಟಿ ಅಂದಾಜು ವೆಚ್ಚದ ಮೆಟ್ರೊ ರೈಲು ಸಂಪರ್ಕ ಇಲ್ಲದಿದ್ದರೂ, ತುಮಕೂರಿನ ಕಡೆಯಿಂದ ಬರುವವರು ಬೆಂಗಳೂರಿನ ಹೃದಯಭಾಗವನ್ನು ಆರಾಮವಾಗಿ ತಲುಪಬಲ್ಲರು. ತುಮಕೂರಿಗೆ ಮೆಟ್ರೊ ಸಂಪರ್ಕ ಕಲ್ಪಿಸುವುದು ಸಾರಿಗೆ ವ್ಯವಸ್ಥೆ ಸುಗಮವಾಗಲಿ ಎಂಬ ಉದ್ದೇಶದ ಯೋಜನೆ ಅಲ್ಲ. ಅದು ರಾಜಕೀಯಕ್ಕೆ ಅನುಕೂಲಕರವಾದ, ಹಣಕಾಸಿನ ದೃಷ್ಟಿಯಿಂದ ಬೇಜವಾಬ್ದಾರಿಯ, ತಾಂತ್ರಿಕವಾಗಿ ಕಾರ್ಯಸಾಧು ಅಲ್ಲದ, ಆಡಂಬರದ ಯೋಜನೆಯಂತೆ ಇದೆ. ಡಿಪಿಆರ್ ಉದ್ದೇಶವನ್ನು ಸರ್ಕಾರ ಕೈಬಿಡಬೇಕು. ಸಾರ್ವಜನಿಕರ ಹಿತಾಸಕ್ತಿಯನ್ನು ನಿಜವಾಗಿಯೂ ಕಾಯುವ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಗಮನ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.