ಭಾರತದ ಸಿಲಿಕಾನ್ ವ್ಯಾಲಿ ಹಿರಿಮೆಯ ಬೆಂಗಳೂರು ಡಿಜಿಟಲ್ ವಂಚನೆಗಳ ಕುಖ್ಯಾತಿಯನ್ನೂ ಪಡೆಯುತ್ತಿದೆ. ಡಿಜಿಟಲ್ ವಹಿವಾಟಿನ ವ್ಯಾಪಕತೆ ಅಪರಾಧ ಪ್ರಕರಣಗಳಿಗೆ ಅವಕಾಶ ಕಲ್ಪಿಸಿದೆ.

ಕೇಂದ್ರ ಸರ್ಕಾರ ಹೆಮ್ಮೆಯಿಂದ ಪ್ರತಿಪಾದಿಸುವ ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಗೆ ವಿರೋಧಾಭಾಸದ ರೂಪದಲ್ಲಿ ಡಿಜಿಟಲ್ ಅಪರಾಧ ಕೃತ್ಯಗಳೂ ತೀವ್ರ ಗತಿಯಲ್ಲಿ ಹೆಚ್ಚುತ್ತಿದ್ದು, ಆ ವಂಚನೆಗಳ ಕೇಂದ್ರವಾಗಿ ಬೆಂಗಳೂರನ್ನು ಗುರ್ತಿಸಲಾಗುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ಧವಾದ ಬೆಂಗಳೂರು ಮಹಾನಗರದಲ್ಲಿ ಸೈಬರ್ ಅಪರಾಧ ಕೃತ್ಯಗಳಿಂದಾಗಿ ಪ್ರತಿ ದಿನವೂ ಸರಾಸರಿ ₹5.45 ಕೋಟಿ ರೂಪಾಯಿ ವಂಚನೆ ನಡೆಯುತ್ತಿದೆ ಎನ್ನುವ ಮಾಹಿತಿ ಆತಂಕ ಹುಟ್ಟಿಸುವಂತಹದ್ದು. ಸೈಬರ್ ಅಪರಾಧಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿನಿತ್ಯ ವರದಿಗಳು ಪ್ರಕಟಗೊಳ್ಳುತ್ತಿವೆ.

ಡಿಜಿಟಲ್ ಅಪರಾಧಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಣಕಿಸುವಂತೆ, ಡಿಜಿಟಲ್ ವಂಚನೆಗಳ ಪ್ರಮಾಣ ಏರುಗತಿಯಲ್ಲಿದೆ. ಈ ವರ್ಷದ ನವೆಂಬರ್ 15ರ ವೇಳೆಗೆ ಸೈಬರ್ ಅಪರಾಧಗಳಿಗೆ ಬಲಿಪಶು ಆಗಿರುವವರು ₹1,543 ಕೋಟಿ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಿಳಿಸಿದ್ದಾರೆ. 2024ರಲ್ಲಿ ವಂಚನೆಯ ಪ್ರಮಾಣ ₹1,995 ಕೋಟಿ ಇದ್ದುದನ್ನು ಗಮನಿಸಿದರೆ, ಎರಡು ವರ್ಷಗಳ ಅವಧಿಯಲ್ಲಿ ಬೆಂಗಳೂರು ಸೈಬರ್ ಅಪರಾಧಗಳ ನಗರವಾಗಿ ಕುಖ್ಯಾತಿ ಪಡೆಯುವ ಹಾದಿಯಲ್ಲಿ ದಾಪುಗಾಲು ಇಡುತ್ತಿರುವಂತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (₹49.85 ಕೋಟಿ), ಮಂಗಳೂರು (₹33.78 ಕೋಟಿ), ಮೈಸೂರು (₹33.17 ಕೋಟಿ) ಹಾಗೂ ಚಿಕ್ಕಬಳ್ಳಾಪುರ (₹28.13 ಕೋಟಿ) ಜಿಲ್ಲೆಗಳಲ್ಲೂ ಪ್ರಸಕ್ತ ವರ್ಷ ದೊಡ್ಡ ಪ್ರಮಾಣದಲ್ಲಿ ಸೈಬರ್ ವಂಚನೆ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸೈಬರ್ ವಂಚನೆಯ ಪ್ರಕರಣಗಳು ನಡೆಯುತ್ತಿದ್ದರೂ, ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿ ಗಾಬರಿ ಹುಟ್ಟಿಸುವಷ್ಟು ದೊಡ್ಡ ಮೊತ್ತದ ಹಣವನ್ನು ವಂಚಕರು ದೋಚುತ್ತಿದ್ದಾರೆ.

ಸೈಬರ್ ಅಪರಾಧಗಳ ಸ್ವರೂಪವೂ ನಿರಂತರವಾಗಿ ಬದಲಾಗುತ್ತಿದೆ. ಫಿಶಿಂಗ್, ಕಾರ್ಡ್ ಸ್ಕಿಮ್ಮಿಂಗ್, ಒಟಿಪಿ ದುರುಪಯೋಗ ರೂಪದ ಹೆಚ್ಚು ಪ್ರಚಲಿತ ಅಪರಾಧಗಳ ಜೊತೆಗೆ ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆಯ ಹೆಸರಿನ ವಂಚನೆಗಳು ಹೆಚ್ಚಾಗುತ್ತಿವೆ. ಪ್ರಾಧ್ಯಾಪಕರು, ವಿಜ್ಞಾನಿಗಳು, ವೈದ್ಯರು, ಸಾಫ್ಟ್ವೇರ್ ಎಂಜಿನಿಯರ್ಗಳು ಸೇರಿದಂತೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರೂ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸಿಕೊಡುವ ಆಮಿಷಕ್ಕೆ ಒಳಗಾಗಿ ಬೆಂಗಳೂರಿನ ಉದ್ಯಮಿಯೊಬ್ಬರು ಇತ್ತೀಚೆಗಷ್ಟೇ ₹8.3 ಕೋಟಿ ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು, ಡೇಟಿಂಗ್ ಆ್ಯಪ್ಗಳ ಮೂಲಕ ಪರಿಚಯ ಮಾಡಿಕೊಂಡು, ಭಾವನಾತ್ಮಕ ನಂಟನ್ನೂ ಬೆಳೆಸಿಕೊಂಡು, ಭಾವಿ ಜೀವನ ಸಂಗಾತಿಯಂತೆ ವರ್ತಿಸುವ ಮೂಲಕ ವಂಚಿಸುವ ಪ್ರಕರಣಗಳೂ ನಡೆದಿವೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ವಂಚನೆಗಳ ಪ್ರಮಾಣವೂ ಹೆಚ್ಚಾಗಿದೆ. ಡಿಜಿಟಲ್ ಅರೆಸ್ಟ್ ಸಂದರ್ಭದಲ್ಲಿ ಬಲಿಪಶುಗಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸಿ ಹಣ ಲಪಟಾಯಿಸಲಾಗುತ್ತಿದೆ.

ಡಿಜಿಟಲ್ ವಂಚನೆಗಳು ಹೆಚ್ಚುತ್ತಿದ್ದರೂ, ಅವುಗಳನ್ನು ಪತ್ತೆಹಚ್ಚುವ ಹಾಗೂ ಅಪರಾಧಿಗಳನ್ನು ಕಾನೂನುಕ್ರಮಕ್ಕೆ ಒಳಪಡಿಸುವ ವ್ಯವಸ್ಥೆ ಸಮರ್ಥವಾಗಿ ಬೆಳೆಯದಿರುವುದು ದುರದೃಷ್ಟಕರ. ಸೈಬರ್ ಅಪರಾಧಗಳ ತನಿಖೆಗೆಂದು ಪ್ರತ್ಯೇಕ ವಿಭಾಗವೇ ಇದ್ದರೂ, ಫಲಿತಾಂಶ ಆಶಾದಾಯಕವಾಗಿಯೇನೂ ಇಲ್ಲ. 2025ರಲ್ಲಿ ಅಪರಾಧ ಪತ್ತೆ ಪ್ರಮಾಣ ಸುಧಾರಿಸಿದ್ದರೂ, ವಂಚಕರ ಪಾಲಾದ ಹಣವನ್ನು ಸಂತ್ರಸ್ತರಿಗೆ ಮರಳಿಸುವ ನಿಟ್ಟಿನಲ್ಲಿ ಹೆಚ್ಚಿನ ಫಲಶ್ರುತಿ ಕಂಡುಬರುತ್ತಿಲ್ಲ. ದೊಡ್ಡ ಮೊತ್ತದ ವಂಚನೆಗಳು ಸುದ್ದಿಯಾಗುತ್ತವೆ ಹಾಗೂ ಆ ಪ್ರಕರಣಗಳ ತನಿಖೆಯೂ ನಡೆಯುತ್ತದೆ. ಆದರೆ, ಸಣ್ಣ ಪುಟ್ಟ ಪ್ರಮಾಣದ ಪ್ರಕರಣಗಳು ದಾಖಲಾಗದೆಯೇ ಉಳಿಯುತ್ತಿವೆ. ಸೀಮಿತ ಸಂಪನ್ಮೂಲಗಳೊಂದಿಗೆ ಕರ್ತವ್ಯ ನಿರ್ವಹಿಸು
ತ್ತಿರುವ ಸೈಬರ್ ಪೊಲೀಸರು, ಕೆಲಸದ ಒತ್ತಡದಿಂದಾಗಿ ಹೈರಾಣಾಗುತ್ತಿದ್ದಾರೆ ಹಾಗೂ ಜನಸಾಮಾನ್ಯರ ಪ್ರಕರಣಗಳನ್ನು ಗಮನಿಸುವ ಸಮಯ ಮತ್ತು ಸಾವಧಾನ ಕಳೆದುಕೊಂಡಿದ್ದಾರೆ. ಡಿಜಿಟಲ್ ವಹಿವಾಟಿನಲ್ಲಿ ಹಿಂದಿರುಗಿ ಬಾರದಷ್ಟು ದೂರಕ್ಕೆ ಸಾಗಿರುವುದರಿಂದ, ಸೈಬರ್ ವಂಚನೆಗಳ ವಿರುದ್ಧ ಸುರಕ್ಷತೆ ರೂಪಿಸಿಕೊಳ್ಳುವುದಷ್ಟೇ ನಮಗೆ ಉಳಿದಿರುವ ದಾರಿಯಾಗಿದೆ. ಸೈಬರ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತತ್ಪರ ಆಗಬೇಕಾಗಿದೆ. ಡಿಜಿಟಲ್ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಶಾಲಾಕಾಲೇಜುಗಳಲ್ಲಿ ನಡೆಸಬೇಕಾಗಿದೆ. ಸರ್ಕಾರ ಹಾಗೂ ಸಮಾಜದ ಪರಿಣಾಮಕಾರಿ ಸಹಯೋಗದಿಂದ ಮಾತ್ರ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕುವುದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.