ಸೋಮವಾರ, ಮೇ 17, 2021
23 °C

ಪ್ರಜಾವಾಣಿ ಪಾಡ್‌ಕಾಸ್ಟ್ 'ಕನ್ನಡ ಧ್ವನಿ'ಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಡ್‌ಕಾಸ್ಟ್ - ಇದು ವೆಬ್ ಜಗತ್ತಿನ ಹೊಸ ವಿದ್ಯಮಾನ. ಅಂತರಜಾಲದಲ್ಲಿ ಭರಪೂರ ಮಾಹಿತಿ, ಮನರಂಜನೆಗೆ ಬರಹ, ಚಿತ್ರ, ವಿಡಿಯೊ ಸಹಿತ ಸಾಕಷ್ಟು ಸಂಪನ್ಮೂಲಗಳಿವೆ. ಆದರೆ, ನಮ್ಮ ಕೆಲಸ ಮಾಡುತ್ತಲೇ, ಕಿವಿಗೆ ಇಯರ್ ಫೋನ್ ಆನಿಸಿಕೊಂಡು ಕೇಳುವುದರಲ್ಲಿರುವ ಆನಂದವೇ ಬೇರೆ. ಧ್ವನಿ ವಿಕಾರಗಳಿಲ್ಲದ ಕನ್ನಡ ಧ್ವನಿ ಕೇಳುವುದೂ ಮನಸ್ಸಿಗೆ ಹಿತಕರ ಮತ್ತು ಇಂದಿನ ಅಗತ್ಯವೂ ಹೌದು. ದಣಿದ ಮನಸ್ಸುಗಳನ್ನು ತಣಿಸಲು ಇದೋ ಬಂದಿದೆ, ಕನ್ನಡ ಪತ್ರಿಕಾ ರಂಗದಲ್ಲಿ ಹೊಸ ಪ್ರಯೋಗ ಪಾಡ್‌ಕಾಸ್ಟ್ 'ಕನ್ನಡ ಧ್ವನಿ'.

ಪಾಡ್‌ಕಾಸ್ಟ್ ಎಂಬುದು ಒಂದು ರೀತಿಯಲ್ಲಿ ರೇಡಿಯೊ ಚಾನೆಲ್‌ಗಳಂತೆಯೇ. ಇಲ್ಲಿ ಎಲ್ಲ ಮಾಹಿತಿಯೂ ಧ್ವನಿಯ ಮೂಲಕವೇ ಹರಿದುಬರುತ್ತದೆ.

ಸದಾ ಹೊಸತನಗಳಿಗೆ ಸ್ಪಂದಿಸುತ್ತಾ ಬಂದಿರುವ ಪ್ರಜಾವಾಣಿ, ಈಗ ಡಿಜಿಟಲ್ ಜಗತ್ತಿನಲ್ಲಿ ಹೊಸದಾಗಿ ಸಂಚಲನ ಮೂಡಿಸುತ್ತಿರುವ ಪಾಡ್‌ಕಾಸ್ಟ್ ಚಾನೆಲ್ ಅನ್ನು ನಲ್ಮೆಯ ಓದುಗರಿಗಾಗಿ ಪರಿಚಯಿಸುತ್ತಿದೆ.

ಓದುಗರು ಮಾಡಬೇಕಾದುದಿಷ್ಟೆ: Prajavani.net/podcast ಚಾನೆಲ್‌ಗೆ ಹೋಗಿ, ಶೀರ್ಷಿಕೆ ಕ್ಲಿಕ್ ಮಾಡಿ, ಅದರೊಳಗಿರುವ ಪ್ಲೇ ಬಟನ್ ಕ್ಲಿಕ್ ಮಾಡಿದರಾಯಿತು. ಮೊಬೈಲ್ ಫೋನನ್ನು ಜೇಬಲ್ಲಿಟ್ಟು ನಿಮ್ಮ ಕೆಲಸ ಮುಂದುವರಿಸುತ್ತಾ ಕನ್ನಡ ಧ್ವನಿಯನ್ನೂ ಆಲಿಸುತ್ತಿರಬಹುದು.

ಈ ಚಾನೆಲ್‌ನಲ್ಲಿ ದಿನದ ಸೂಕ್ತಿ, ಸಂಪಾದಕೀಯ, ಪ್ರಚಲಿತ ವಿದ್ಯಮಾನ ಜೊತೆಗೆ ಪ್ರತಿ ದಿನದ ವಿಶೇಷಗಳಾಗಿ ವಚನ ವಾಣಿ, ಹರಟೆ ಕಟ್ಟೆ, ವೈದ್ಯಮಿತ್ರ, ಸುದ್ದಿ ಸ್ವಾರಸ್ಯ, ಕಥೆ ಕೇಳು ಮಗುವೇ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬರಲಿವೆ.

ಇವೆಲ್ಲವನ್ನೂ ಆ್ಯಂಕರ್, ಸ್ಪಾಟಿಫೈ, ಗೂಗಲ್ ಪಾಡ್‌ಕಾಸ್ಟ್, ಪಾಕೆಟ್ ಕಾಸ್ಟ್, ಬ್ರೇಕರ್, ರೇಡಿಯೊ ಪಬ್ಲಿಕ್ ಮುಂತಾದ ತಾಣಗಳಲ್ಲಿ ಮತ್ತು ಆಯಾ ಆ್ಯಪ್‌ಗಳಲ್ಲಿ, 'ಪ್ರಜಾವಾಣಿ' ಸರ್ಚ್ ಮಾಡಿಯೂ ಆಲಿಸಬಹುದು.

ದೈನಂದಿನ ಕೆಲಸ ಮಾಡುತ್ತಲೇ ಆಲಿಸಿರಿ, ಆನಂದಿಸಿರಿ!
-ಸಂಪಾದಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು