ಸೋಮವಾರ, ಜೂನ್ 1, 2020
27 °C

50 ವರ್ಷಗಳ ಹಿಂದೆ | ಭಾನುವಾರ 3, ಮೇ 1970

25 years ago Updated:

ಅಕ್ಷರ ಗಾತ್ರ : | |

ಗಡಿ ಪ್ರಶ್ನೆ: 15 ದಿನಗಳಲ್ಲಿ ಅಹ್ಮದ್‌–ಸ್ವರಣ್‌ಸಿಂಗ್‌ರ ಹೊಸ ಸೂತ್ರ ಸಲ್ಲಿಕೆ? 

ಮುಂಬಯಿ, ಮೇ 2– ಮೈಸೂರು ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಸಚಿವರಾದ ಫಕ್ರುದ್ದಿನ್‌ ಅಲಿ ಅಹ್ಮದ್‌ ಮತ್ತು ಸ್ವರಣ್‌ ಸಿಂಗ್‌ ಅವರು ಇನ್ನು ಹದಿನೈದು ದಿನದೊಳಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಹೊಸ ಸಲಹೆ, ಸೂಚನೆಗಳನ್ನು ಸಲ್ಲಿಸುವರು. 

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ ನಿಕಟ ಮೂಲಗಳು ಈ ತೀತಿ ಅಭಿಪ್ರಾಯ ಪಟ್ಟಿವೆ. ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಅಧ್ಯಯನಕ್ಕಾಗಿ ಶ್ರೀಮತಿ ಗಾಂಧಿಯವರಿಂದ ನೇಮಕಗೊಂಡಿರುವ ಕೇಂದ್ರ ಸಚಿವರುಗಳಾದ ಫಕ್ರುದ್ದಿನ್‌ ಅಲಿ ಅಹ್ಮದ್‌ ಮತ್ತು ಸ್ವರಣ್‌ಸಿಂಗ್‌ ಅವರು ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳುವುದಕ್ಕೆ ಮುಂಚೆ ಇಲ್ಲಿನ ಹಿರಿಯ ಕಾಂಗ್ರೆಸ್ಸಿಗರೊಡನೆ ಮಾತುಕತೆ ನಡೆಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.