ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ, 19–8–1970

Last Updated 18 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಕೆಂಪುಕೋಟೆ ಮೇಲೆಸೈನ್ಯಾಧಿಕಾರಿಯಿಂದ ಧ್ವಜಾರೋಹಣ
ನವದೆಹಲಿ, ಆ. 18
– ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ಪ್ರಧಾನಿ ಬದಲು ವಿಮಾನ ಪಡೆ ಅಧಿಕಾರಿಯೊಬ್ಬರಿಂದ ಧ್ವಜಾರೋಹಣವಾದ ಬಗೆಗೆ ಇಂದು ಲೋಕಸಭೆಯಲ್ಲಿ ಸ್ವತಂತ್ರ ಮತ್ತು ಸಂಸ್ಥಾ ಕಾಂಗ್ರೆಸ್‌ ಸದಸ್ಯರು ಹಾಗೂ ಆಡಳಿತ ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ ಸಿಡಿದೆದ್ದಿತ್ತು.

ಧ್ವಜದ ಕಟ್ಟನ್ನು ಒಬ್ಬ ಅಧಿಕಾರಿ ಹೇಗೆ ಬಿಚ್ಚಿ ಅದನ್ನು ಆರೋಹಿಸಬಹುದೆಂದು ಸ್ವತಂತ್ರ ಪಕ್ಷದ ಶ್ರೀ ಆರ್‌.ಕೆ.ಅಮೀನ್‌ ಅವರು ಮೊದಲು ಪ್ರಶ್ನಿಸಿ, ಪ್ರಧಾನಿ ತಮ್ಮ ವಿಷಾದ ವ್ಯಕ್ತಪಡಿಸಬೇಕೆಂದರು. ಸ್ವತಂತ್ರ ಪಕ್ಷದ ನಾಯಕ ಪ್ರೊ. ಎನ್‌.ಜಿ.ರಂಗಾ ಅವರು ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡುವ ಹಕ್ಕು ರಾಷ್ಟ್ರಪತಿಯದಾಗಿರಬೇಕೆಂದರು.

ಕೇಂದ್ರದ ‘ಗಡಿ ಸೂತ್ರ’ದ ಬಗ್ಗೆಎಂ.ಪಿ.ಗಳ ಜೊತೆ ಚರ್ಚೆ
ನವದೆಹಲಿ, ಆ.18–
ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾತುಕತೆಗಾಗಿ ನಾಳೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಲಿರುವ ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತಮ್ಮ ರಾಜ್ಯದಸಂಸತ್‌ ಸದಸ್ಯರೊಡನೆ ಇಂದು ಸಂಜೆ ಸಮಾಲೋಚನೆ ನಡೆಸಿದರು. ಜನಮತ ಸಂಗ್ರಹ, ತ್ರಿಸದಸ್ಯ ನ್ಯಾಯಮಂಡಲಿ ರಚನೆಯು ಕೇಂದ್ರದ ಆಲೋಚನೆಯಲ್ಲಿರುವ ಕೆಲವು ಸೂತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT