ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 10–2–1970

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪ್ಲಾಸ್ಟಿಕ್ ಉದ್ಯಮದ ವಿಶೇಷ ಉಪಕರಣ ಕೇಂದ್ರ: ನಗರದಲ್ಲಿ ಸ್ಥಾಪಿಸಲು ನಿರ್ಧಾರ

ಬೆಂಗಳೂರು, ಫೆ. 9– ನಗರದಲ್ಲಿ ಪ್ಲಾಸ್ಟಿಕ್ ಉದ್ಯಮಕ್ಕೆ ಅಗತ್ಯವಾದ ವಿಶೇಷ ಉಪಕರಣ ಕೇಂದ್ರವು ಡೆನ್ಮಾರ್ಕ್ ಸರ್ಕಾರದ ನೆರವಿನೊಂದಿಗೆ ಸ್ಥಾಪಿತ
ವಾಗಲಿದೆ. ರಾಜಾಜಿನಗರದಲ್ಲಿರುವ ಸಣ್ಣ ಕೈಗಾರಿಕೆಗಳ ಸೇವಾ ಕಾರ್ಪೊರೇಷನ್ನಿನ ಆಶ್ರಯದಲ್ಲಿ ಅದನ್ನು
ಸ್ಥಾಪಿಸಲಾಗುವುದು.

ನಗರದಲ್ಲಿ ಇಂದು ಮುಕ್ತಾಯಗೊಂಡ, ಪ್ಲಾಸ್ಟಿಕ್ ಉದ್ಯಮಕ್ಕೆ ಸಂಬಂಧಿಸಿದ ಎರಡು ದಿನಗಳ ಅಖಿಲ ಭಾರತ ವಿಚಾರಗೋಷ್ಠಿಯು ಉಪಕರಣಗಳ ಬಿಡಿಭಾಗಗಳನ್ನು ತಯಾರಿಸುವಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಆಮದು
ಲೈಸೆನ್ಸ್‌ಗಳನ್ನು ನೀಡುವುದರಲ್ಲಿಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿತು. ಕೈಗಾರಿಕಾ ಉಪಸಚಿವ ಶ್ರೀ ಎ.ಪಿ. ಅಪ್ಪಣ್ಣನವರು ಗೋಷ್ಠಿಯ ಸಮಾರೋಪ ಭಾಷಣ ಮಾಡಿದರು.

ದೆಹಲಿಯಲ್ಲಿ ರಷ್ಯನ್ ಅಧಿಕಾರಿ ನಾಪತ್ತೆ

ನವದೆಹಲಿ, ಫೆ. 9– ಇಲ್ಲಿನ ಸೋವಿಯತ್ ಸಮಾಚಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ರಷ್ಯನ್ ಅಧಿಕಾರಿಯೊಬ್ಬರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾ
ರೆಂದು ಅಧಿಕೃತವಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT