ಮಂಗಳವಾರ, ಜನವರಿ 28, 2020
29 °C

ಶುಕ್ರವಾರ, 5–12–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭೆಯಲ್ಲಿ ರಾಜ್ಯದ ಮೂವರು ಸದಸ್ಯರ ಸಭಾತ್ಯಾಗ

ನವದೆಹಲಿ, ಡಿ. 4– ಕೇಂದ್ರ ರೇಷ್ಮೆ ಮಂಡಳಿಯ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸುವ ವಿಷಯದಲ್ಲಿ ವಿದೇಶ ವಾಣಿಜ್ಯ ಉಪಸಚಿವರಾದ ಚೌಧುರಿ ರಾಮಸೇವಕ್ ಯಾದವ್ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿದ ಕಾರಣ ಮೈಸೂರಿನ ಮೂವರು ಪಾರ್ಲಿಮೆಂಟ್ ಸದಸ್ಯರಾದ ಎಸ್.ಎಂ. ಕೃಷ್ಣ ಮತ್ತು ಕೆ. ಲಕ್ಕಪ್ಪ (ಇಬ್ಬರೂ ಪಿ.ಎಸ್.ಪಿ.), ಜೆ.ಎಚ್. ಪಟೇಲ್ (ಎಸ್.ಎಸ್.ಪಿ.) ಅವರು ಇಂದು ಲೋಕಸಭಾತ್ಯಾಗ ಮಾಡಿದರು.

ಕೋಮು ಗಲಭೆ: ಗುಜರಾತ್ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಲೋಕಸಭೆಯಲ್ಲಿ ಕಟು ಟೀಕೆ?

ನವದೆಹಲಿ, ಡಿ. 4– ದೇಶದಲ್ಲಿನ ಕೋಮು ಪರಿಸ್ಥಿತಿ ಬಗ್ಗೆ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಮಂಡಿಸಿದ ನಿರ್ಣಯದ ಮೇಲೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆದಾಗ ಇತ್ತೀಚಿನ ಕೋಮು ಗಲಭೆಗಳ ಕಾಲದಲ್ಲಿ ಗುಜರಾತ್ ಸರ್ಕಾರ ಕಾರ್ಯನಿರ್ವಹಿಸಿದ ರೀತಿಯನ್ನು ಕಟುವಾಗಿ ಟೀಕಿಸಲಾಯಿತು.

ಪ್ರತಿಕ್ರಿಯಿಸಿ (+)