ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ರೇಸಿಂಗ್‌ ಹಬ್ ಬೆಂಗಳೂರು

ಫಟಾಫಟ್‌
Last Updated 6 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಟಿವಿಎಸ್ ರೇಸಿಂಗ್ ಮಹಿಳಾ ತಂಡದ ಮ್ಯಾನೇಜರ್ ಆಗಿರುವ ಬಿ.ಸೆಲ್ವರಾಜ್ ಜೊತೆಗಿನ ಮಾತುಕತೆ

ಬೆಂಗಳೂರಿನಲ್ಲಿ ಮಹಿಳಾ ರೇಸಿಂಗ್ ಬೆಳವಣಿಗೆ ಆಗುತ್ತಿದೆಯೇ?
ಮೋಟರ್ ಸ್ಪೋರ್ಟ್ಸ್‌ ಚಟುವಟಿಕೆಗಳಿಗೆ ಬೆಂಗಳೂರು ಬಹಳ ಉತ್ತಮ ತಾಣವಾಗಿದೆ. ತರಬೇತಿ ಮತ್ತು ಕಲಿಕೆಗೆ ಬೇಕಾದ ಎಲ್ಲ ರೀತಿಯ ಉತ್ತಮ ಸೌಲಭ್ಯಗಳು ನಗರದಲ್ಲಿವೆ. ಕಳೆದ ಐಐದು ವರ್ಷಗಳಿಂದ ಬಹಳಷ್ಟು ಜನ ಆಸಕ್ತಿ ತೋರಿಸುತ್ತಿದ್ದಾರೆ. ಟಿವಿಎಸ್ ಮಹಿಳೆಯರ ಒನ್‌ ಮೇಕ್ ಚಾಂಪಿಯನ್‌ಷಿಪ್ (ಡಬ್ಲ್ಯುಒಎಂಸಿ) ಕಾರ್ಯಕ್ರಮದಡಿ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅದಕ್ಕಾಗಿ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಉದಯೋನ್ಮುಖ ರೇಸಿಂಗ್‌ ಆಸಕ್ತರಿಗೆ ಆಧುನಿಕ ಸೌಲಭ್ಯಗಳೊಂದಿಗೆ ತರಬೇತಿ ನೀಡಲಾಗುತ್ತಿದೆ. ಬರುವ ಡಬ್ಲ್ಯುಒಎಂಸಿಗೆ ಬೆಂಗಳೂರಿನಿಂದಲೇ 50ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ನಿಮ್ಮ ಮಹಿಳಾ ತಂಡವು ಈಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ವಿಶೇಷ ಸಾಧನೆಗಳೇನು?
ಟಿವಿಎಸ್ ರೇಸಿಂಗ್ ತಂಡದ ಐಶ್ವರ್ಯಾ ಪಿಸೆ, ಕಳೆದ ವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ರಾಷ್ಟ್ರೀಯ ರೋಡ್ ರೇಸಿಂಗ್ ಮತ್ತು ರ‍್ಯಾಲಿ ಚಾಂಪಿಯನ್‌ಷಿಪ್‌ಗಳಲ್ಲಿ ಐದು ಸಲ ಕಿರೀಟ ಧರಿಸಿದ್ದಾರೆ. 2019ರಲ್ಲಿ ಎಫ್‌ಐಎಂ ವಿಶ್ವ ಬಾಜಾ ಚಾಂಪಿಯನ್‌ಷಿಪ್‌ ಗೆದ್ದ ಭಾರತದ ಪ್ರಥಮ ಸ್ಪರ್ಧಿ ಎಂಬ ಹೆಗ್ಗಳಿಕೆ, ಬೆಂಗಳೂರು ಮತ್ತು ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟ ಸಾಧನೆ ಅವರದು

ಮಹಿಳಾ ರೇಸಿಂಗ್ ಕ್ರೀಡೆಯ ಭವಿಷ್ಯ ಹೇಗಿದೆ?
ಈ ಕ್ರೀಡೆಯು ಈಗ ತುಂಬಾ ವೇಗವಾಗಿ ಬೆಳೆಯುತ್ತಿದೆ. ಮಹಿಳಾ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಬರುತ್ತಿದ್ದಾರೆ. 38 ವರ್ಷಗಳ ಹಿಂದೆಯೇ ನಮ್ಮ ಸಂಸ್ಥೆಯು ರೂಪಿಸಿದ ರೇಸಿಂಗ್ ತಂಡದ ಯೋಜನೆಯ ಫಲ ಇದಾಗಿದೆ. ದ್ವಿಚಕ್ರ ವಾಹನಗಳ ರೇಸಿಂಗ್‌ನಲ್ಲಿ ನಮ್ಮ ತಂಡದ ಪಾರಮ್ಯ ಯಾವಾಗಲೂ ಇದೆ. ಟಿವಿಎಸ್ ಟ್ರೇನಿಂಗ್ ಸ್ಕೂಲ್, ಆಫ್‌ರೋಡ್ ಟ್ರ್ಯಾಕ್ ಸೌಲಭ್ಯಗಳು ಮಹಿಳಾ ರೇಸರ್‌ಗಳಿಗೆ ಸಿಗುತ್ತಿವೆ. ಅನುಭವಿ ರೇಸಿಂಗ್ ಚಾಂಪಿಯನ್‌ಗಳ ಮಾರ್ಗದರ್ಶನದಲ್ಲಿ ಅವರಿಗೆ ತರಬೇತಿಯೂ ಸಿಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯುವತಿಯರು ಇಂದು ದೊಡ್ಡ ರೇಂಜ್‌ನ ದ್ವಿಚಕ್ರವಾಹನಗಳ ಸವಾರಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅದೇ ಹವ್ಯಾಸವು ಅವರನ್ನು ಸ್ಪರ್ಧಾಕಣಕ್ಕೂ ಎಳೆದು ತರುತ್ತಿರುವುದು ಆಶಾದಾಯಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT