ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂದರ್ಶನ | ಕೇಂದ್ರೀಕರಣ ಪ್ರವೃತ್ತಿಯ ವಿರುದ್ಧ ಹೋರಾಟ ಅಗತ್ಯ: ಕೆ.ವಿ. ನಾರಾಯಣ

Published : 18 ಡಿಸೆಂಬರ್ 2024, 23:09 IST
Last Updated : 18 ಡಿಸೆಂಬರ್ 2024, 23:09 IST
ಫಾಲೋ ಮಾಡಿ
Comments
‘ಎಲ್ಲವನ್ನೂ ಕೇಂದ್ರೀಕರಣ ಮಾಡುವ ಪ್ರವೃತ್ತಿ ರಾಜಕೀಯವಾಗಿ ನಡೆಯುತ್ತಿರುವುದರಿಂದ ಭಾಷೆ ಹೇರಿಕೆ ಅದರ ಭಾಗವಾಗಿದೆ. ಕೇಂದ್ರೀಕರಣ ಪ್ರವೃತ್ತಿಯ ವಿರುದ್ಧದ ಹೋರಾಟ ಅಗತ್ಯ’ ಎಂದು ಭಾಷಾ ತಜ್ಞ ಕೆ.ವಿ. ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ‘ನುಡಿಗಳ ಅಳಿವು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಹೊತ್ತಿನೊಳಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದು ಇಲ್ಲಿದೆ.
ಪ್ರ

ಕನ್ನಡ ಭಾಷೆ ಅಳಿಯುತ್ತಿದೆ, ಭವಿಷ್ಯದಲ್ಲಿ ಆಡು ಭಾಷೆಯಾಗಿ ಮಾತ್ರ ಉಳಿಯಲಿದೆ ಎಂಬ ಚರ್ಚೆ ವಿದ್ವಾಂಸರ ವಲಯದಲ್ಲಿದೆ...

ಕನ್ನಡ ಭಾಷೆ ಅಳಿಯುತ್ತಿದೆ, ಭವಿಷ್ಯದಲ್ಲಿ ಆಡು ಭಾಷೆಯಾಗಿ ಮಾತ್ರ ಉಳಿಯಲಿದೆ ಎಂಬ ಚರ್ಚೆ ವಿದ್ವಾಂಸರ ವಲಯದಲ್ಲಿದೆ...

ಪ್ರ

ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ತುರ್ತಾಗಿ ಆಗಬೇಕಾಗಿದ್ದು ಏನು?

ಸರ್ಕಾರವು ಭಾಷಾ ಯೋಜನೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಲಿಕೆಯ ಹಂತದಲ್ಲಿಯೇ ಕನ್ನಡ ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಲು ಕ್ರಮವಹಿಸಬೇಕಿದೆ. ಪ್ರಾದೇಶಿಕ ಕನ್ನಡಗಳ ನಡುವೆ ಸಮನ್ವಯ ಸಾಧಿಸುವ ಕೆಲಸವಾಗಬೇಕಿದೆ. ಈ ಕಾರ್ಯ ಶಿಕ್ಷಣದ ಮೂಲಕ ಆಗಲಿದೆ ಅನಿಸುತ್ತದೆ.

ಪ್ರ

 ಕನ್ನಡ ಅನ್ನದ ಭಾಷೆ ಆಗಬೇಕೆಂಬ ಆಗ್ರಹವಿದೆ. ಈ ಬಗ್ಗೆ...

ಭಾಷೆಯಿಂದ ಉದ್ಯೋಗ ದೊರೆಯುವುದಿಲ್ಲ. ಕೌಶಲದಿಂದ ಉದ್ಯೋಗ ದೊರೆಯುತ್ತದೆ. ಇಂಗ್ಲಿಷ್‌ ಬಂದರೆ ಮಾತ್ರ ಉದ್ಯೋಗ ಸಿಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಕಾಲ್‌ ಸೆಂಟರ್‌ ಮೊದಲಾದ ಕಡೆ ಮಾತ್ರ ಇಂಗ್ಲಿಷ್‌ ಬಂದವರಿಗೆ ಉದ್ಯೋಗ ದೊರೆಯಬಹುದು. ಭಾಷೆಗೂ ಉದ್ಯೋಗಕ್ಕೂ ನೇರವಾದ ಸಂಬಂಧವಿಲ್ಲ.

ಪ್ರ

ಬ್ಯಾಂಕಿಂಗ್ ಕ್ಷೇತ್ರ ಸೇರಿ ವಿವಿಧೆಡೆ ದಕ್ಷಿಣ ಭಾರತೀಯ ಭಾಷೆಗಳನ್ನು ಕಡೆಗಣಿಸಿ, ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ವಾದವಿದೆ.

ನಿಜ, ಈ ಹೇರಿಕೆ ಭಾಷೆಗೆ ಮಾತ್ರ ಸೀಮಿತವಾಗಿರದೇ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ನೀಟ್ ಪರೀಕ್ಷೆ ಸೇರಿ ವಿವಿಧೆಡೆ ಕಾಣಬಹುದಾಗಿದೆ. ಹಿಂದಿ ಹೇರಿಕೆಯಷ್ಟನ್ನೇ ವಿರೋಧಿಸಿ, ಜಿಎಸ್‌ಟಿ, ನೀಟ್‌ ಸೇರಿ ವಿವಿಧ ಕೇಂದ್ರೀಕರಣ ಪ್ರಕ್ರಿಯೆ ಒಪ್ಪಿಕೊಳ್ಳುವುದು ಸರಿಯಲ್ಲ.

ಪ್ರ

ಸಾಹಿತ್ಯ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತು...

ಓದುವ ಪ್ರವೃತ್ತಿ ಹೆಚ್ಚಬೇಕು. ಸಮಕಾಲೀನದ್ದು ಮಾತ್ರವಲ್ಲದೆ, ಕನ್ನಡದಲ್ಲಿ ಮಹತ್ವದ ಬರಹಗಾರರು ಆಗಿ ಹೋಗಿದ್ದಾರೆ. ಅವರೆಲ್ಲರ ಬಗ್ಗೆಯೂ ತಿಳಿದು, ಸಾಹಿತ್ಯ ಕೃತಿಗಳನ್ನು ಓದಬೇಕು.

ಪ್ರ

ಈ ಪ್ರಶಸ್ತಿಯ ನಿರೀಕ್ಷೆಯಿತ್ತೆ?

ಪ್ರಶಸ್ತಿಗಳ ಬಗ್ಗೆ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಂಡಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಈ ಪ್ರಶಸ್ತಿಗಳೆಲ್ಲ ಆಕಸ್ಮಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT