ಇವತ್ತಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮನುಷ್ಯನ ಅಹಂಕಾರ ಅತಿರೇಕದ ಹಂತವನ್ನು ಮುಟ್ಟುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಅನಾದಿ ಕಾಲದ ಸಂಕಟಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಅಪೂರ್ವ ತೇಜಸ್ಸಿನ ಕಿಂದರಿಜೋಗಿ ಕುದುರೆಯೇರಿ ಬರುತ್ತಿದ್ದಾನೆ ಎಂದು ಕಾಯುತ್ತಾ ಕುಳಿತವರ ಭವಿಷ್ಯ ಅಯೋಮಯವಾಗಿದೆ. ಹಾಗೆ ಬಂದವನೇ ಕಲ್ಕಿ ಅವತಾರ ತಾಳಿದಂತಿದೆ. ಹುಲುಸಾಗಿ ಕಂಡದ್ದೆಲ್ಲಾ ನನಗೇ ಬೇಕು, ನನ್ನ ವಿನಾ ಹುಲ್ಲು ಕಡ್ಡಿ ಕೂಡ ಅಲ್ಲಾಡಕೂಡದು ಎಂದು ಸ್ವಯಂ ದೈವವಾಗಿ ಅವತರಿಸಿದ್ದಾನೆ. ನಾಟಕದ ತೆರೆ ಸರಿಯಲು ಇನ್ನೂ ಕಾಯಬೇಕು.

ನಿಸರ್ಗದಲ್ಲಿ ಭಿನ್ನ ಭಿನ್ನ ಆಕಾರ ಮತ್ತು ಗಾತ್ರದ ವೈವಿಧ್ಯಮಯ ಜೀವರಾಶಿಯಿದೆ. ತಾನು ಹೆಚ್ಚು ಅಂತ ಅಂದುಕೊಂಡದ್ದಕ್ಕೂ ಅಳಿವು ತಪ್ಪಿಲ್ಲ. ಅಂತಹದ್ದರಲ್ಲಿ ಜಗತ್ತು ನನ್ನಂತೆಯೇ ಇರಬೇಕು ಎಂದುಕೊಳ್ಳುವುದು ಉಳಿದವರ ಭಾವನೆ ಮತ್ತು ಧೋರಣೆಗಳನ್ನು ಕೀಳಾಗಿ ಕಂಡಂತೆ. ನಾನು ಹೇಳಿದ ಹಾಗೆ ಕೇಳಿಕೊಂಡಿರಬೇಕು ಎನ್ನುವುದು ಇನ್ನೊಬ್ಬರ ಸ್ವಾತಂತ್ರ್ಯವನ್ನು ನಿರಾಕರಿಸಿದ ಹಾಗೆ. ಎಲ್ಲ ನನ್ನ ಅಧೀನದಲ್ಲಿರಬೇಕೆಂಬುದು ಇತರರ ಅಸ್ತಿತ್ವವನ್ನು ಅಲ್ಲಗಳೆದ ಹಾಗೆ. ನನ್ನನ್ನು ಖುಷಿಪಡಿಸಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ ಎನ್ನುವುದು ನೀಚ ಭಯೋತ್ಪಾದನೆ. ನನ್ನಲ್ಲಿನ ಸಂಪತ್ತಿನಿಂದ ಬೇಕಾದ್ದನ್ನು ಕೊಳ್ಳಬಲ್ಲೆ ಎನ್ನುವುದು ಅಹಂಕಾರ. ತಾನು ಮಾತ್ರ ಬಲಿಷ್ಠ ಎಂದುಕೊಂಡು ಮಿಕ್ಕವರನ್ನು ಕ್ರಿಮಿಗಳಂತೆ ಕಾಣುವುದು ದುಷ್ಟತನದ ಪರಮಾವಧಿ. ಇಂಥ ವಿಕೃತ ಆಲೋಚನೆಗಳು ಯಾರಲ್ಲಿಯೂ ನೆಮ್ಮದಿಯನ್ನು ಹುಟ್ಟಿಸುವುದಿಲ್ಲ.

ಮನುಷ್ಯ ಚರಿತ್ರೆಯಲ್ಲಿ ಎಂತೆಂತಹ ದುಷ್ಟರು ಬಂದು ಹೇಳಲು ಹೆಸರಿಲ್ಲದಂತೆ ಹೋಗಿದ್ದಾರೆ. ಇನ್ನೊಬ್ಬರ ಅಸ್ತಿತ್ವವನ್ನು ಅಳಿಸುವ ಉದ್ದೇಶ ಹೊಂದಿದವರನ್ನು ಚರಿತ್ರೆ ಎಂದಿಗೂ ಗೌರವದಿಂದ ನೆನಪಿಸಿಕೊಂಡಿಲ್ಲ. ಇಂಥವರಿಂದ ಸ್ಮಶಾನಗಳು ತುಂಬಿ ಹೋಗಿವೆ. ಅವರ ಸಮಾಧಿಗಳು ಯಾವತ್ತೂ ಹೂವುಗಳಿಂದ ಅಲಂಕೃತಗೊಂಡಿಲ್ಲ. ಇವರು ಜನಜೀವನವನ್ನು ಆತಂಕಕ್ಕೆ ದೂಡಿದವರು. ಬಲಶಾಲಿಗಳು ಮತ್ತು ಬಲಹೀನರ ಮಧ್ಯೆ ಅಹಂಕಾರ ಸರ್ವವ್ಯಾಪಿಯಾಗಿದೆ. ಸರ್ವವಿನಾಶಿ ಗುಣದ ಈ ಇಗೋ ಸಂಘರ್ಷದಲ್ಲಿ ಕೊನೆಗೆ ಉಳಿಯುವವರು ಯಾರು? ಯಾರೋ ಒಬ್ಬಿಬ್ಬರಿಗೆ ಇರುವ ಬಲವು ಬಲವಿಲ್ಲದವರ ಬೆಂಬಲಕ್ಕೆ ನಿಲ್ಲಬೇಕು. ಔದಾರ್ಯವೇ ಒಲವು. ಒಲವಿಲ್ಲದ ಬಲವು ಕೇವಲ ಕಸರತ್ತು.

ಎಲ್ಲರೂ ಮುಖ್ಯರಾಗಬೇಕಾದ ಹೊತ್ತಿನಲ್ಲಿ ಸಾವಧಾನ ಸಾಯಬಾರದು. ನಿಧಾನಯಾನದಿಂದ ಮಾತ್ರ ಸರ್ವೋದಯದ ಗುರಿ ಸಾಧ್ಯ. ಇಂದಿನ ವೇಗಕ್ಕೆ ಗುರಿ ಮುಖ್ಯವಾಗಿದೆಯೇ ಹೊರತು ದಾರಿ ಮುಖ್ಯವಾಗಿಲ್ಲ. ನ್ಯಾಯವೇ ಪರಮನೀತಿ. ನೀತಿ ಪಥದಲ್ಲಿ ಸಾಗದ ಯಾನ ಯಾವ ತೀರವನ್ನು ಸೇರಿದರೆ ಏನು ಪ್ರಯೋಜನ? ತನ್ನ ಸಹ ಪ್ರಯಾಣಿಕರನ್ನು ದಡ ಮುಟ್ಟಿಸಿ ತಾನೂ ತಲುಪುವವನು ನಿಜದ ನಾವಿಕ, ಬಲಿಷ್ಠ ನಾಯಕ. ತಾನು ಮಾತ್ರ ಬದುಕಬೇಕು ಎನ್ನುವವನು ಭ್ರಮಾಧೀನ ಪಶುವಿನಂತೆ. ತಾವೂ ಉಳಿದು ಭೂಮಿಯನ್ನೂ ಉಳಿಸಿಕೊಳ್ಳುವುದು ಚಿಕ್ಕವರಿಗೂ ದೊಡ್ಡವರಿಗೂ ಇರಬೇಕಾದ ವಿವೇಕ. ಇರುವಷ್ಟು ದಿನ ಎಲ್ಲರೂ ನನ್ನವರು ಎಂದು ಎಲ್ಲರ ಜೊತೆಗೂಡಿ ಹಚ್ಚುವ ಹಣತೆ ಸಾವಿರದ ಸೂರ್ಯರಿಗೆ ಸಮಾನ. ಅಹಂಕಾರವೇ ಮರಣ ಮಮಕಾರವೇ ಜನನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.