ಪ್ರತಿ ದಿನ ಒರಟು ಬೆಟ್ಟ ಕಲ್ಲುಗಳ ಕುಟ್ಟುತ್ತಾ ದುಡಿಮೆ ಮಾಡುತ್ತ ಬೆವರು ಸುರಿಸುವ ಕಲ್ಲು ಕುಟಿಗನ ಕನಸೂ ನಮ್ಮದು. ಅವನಿಗೂ ಹಾಗೇ ಅನಿಸಿತು. ಎಷ್ಟು ದಿನ ಅಂತ ಹೀಗೇ ಕಲ್ಲು ಕುಟ್ಟುತ್ತಾ ಕಷ್ಟ ಪಡೋದು? ಬೇಕಾದ ಹಾಗೆ ಸುಖವಾದ ಜೀವನ ನಡೆಸಲು ಸಾಧವಿಲ್ಲವೇ ಎಂಬುದು ಅವನ ಅಳಲು. ಈ ಅಳಲು ವರವಾಗಿಯೂ ಪರಿಣಮಿಸಿ ಅವನು ಏನನ್ನು, ಯಾರ ಹಾಗೆ ಆಗಬೇಕು ಅಂತ ಬಯಸುವನೋ ಹಾಗೆ ಆಗುವ ಶಕ್ತಿಯನ್ನೂ ಪಡೆದೇ ಬಿಟ್ಟನು.

ಹೀಗೆ ಬಿಸಿಲಲ್ಲಿ ಕೂತು ಕಲ್ಲು ಒಡೆಯುವಾಗ ಎದುರು ಅತ್ಯುತ್ತಮ ಪೋಷಾಕು ಧರಿಸಿ ಕುದುರೆಯೇರಿ ಹೊರಟ ವರ್ತಕನೊಬ್ಬನನ್ನು ಕಂಡ. ತಾನೂ ಹೀಗೆ ಆಗಬೇಕು ಅಂತ ಅಂದುಕೊಂಡ ಕೂಡಲೇ ವರ್ತಕನಾದ. ಹಾಗೇ ಕಾಲ ಕಳೆವಾಗ ಆ ರಾಜ್ಯದ ಮಂತ್ರಿಯ ಆಮಂತ್ರಣದ ಮೇರೆಗೆ ಸಭೆಯಲ್ಲಿ ಭಾಗವಹಿಸುವಾಗ ತಾನೂ ಮಂತ್ರಿಯಾಗಬೇಕು ಎಂದು ಬಯಸಿ ಕೂಡಲೇ ಮಂತ್ರಿಯಾದ. ಕೆಲಕಾಲ ಅರಮನೆಯಲ್ಲಿ ಕೆಲಸ ಮಾಡಿ ರಾಜನ ವೈಭವವನ್ನು ಕಂಡು ರಾಜನಾಗಲು ಬಯಸಿ ರಾಜನಾಗೇ ಬಿಟ್ಟ. ಒಮ್ಮೆ ರಾಜ ಬೇಟೆ ಆಡಲು ಹೋದಾಗ ಸೂರ್ಯನ ಝಳದಿಂದ ಸುಸ್ತಾಗಿ ಬಳಲಿ ಹಿಂತಿರುಗಿದ. ಇಷ್ಟು ಬಲಾಢ್ಯ ಶೂರನಾದ ರಾಜನನ್ನೇ ಮಣಿಸಿದ ಸೂರ್ಯನಾಗಲು ಬಯಸಿ ಸೂರ್ಯನೂ ಆದ. ಎಷ್ಟೇ ಪ್ರಖರನಾಗಿದ್ದರೂ ಸರಿ ಒಮ್ಮೆ ದಟ್ಟವಾದ ಮೋಡವೊಂದು ಸೂರ್ಯನನ್ನು ಆವರಿಸಿದಾಗ ದಟ್ಟವಾದ ಮೋಡವಾಗಲು ಬಯಸಿ ಮೋಡವಾಗಿ ಮಳೆಸುರಿಸುತ್ತ ನಡೆದ. ಎಷ್ಟು ರಭಸವಾಗಿ ಸುರಿದರೂ ಅಳುಕದೆ ನಿಂತ ಬೆಟ್ಟವನ್ನು ನೋಡಿ ಬೆಟ್ಟವಾಗಲು ಹಂಬಲಿಸಿ ಬೆಟ್ಟವಾದ. ಒಮ್ಮೆ ದೈತ್ಯಾಕಾರದ ಬೆಟ್ಟವನ್ನೂ ಕತ್ತರಿಸಲು ಒಬ್ಬ ಕಲ್ಲು ಕುಟಿಗ ಬಂದ. ಬೆಟ್ಟವನ್ನೂ ಕುಟ್ಟಿ ಚೂರು ಮಾಡಬಲ್ಲ ಕಲ್ಲು ಕುಟಿಗನಾಗ ಬಯಸಿದ. ಕಲ್ಲು ಕುಟಿಗನೇ ಅದ. ಕಾಲ ಚಕ್ರ ಮತ್ತೆ ಅವನನ್ನು ಇಟ್ಟಲ್ಲಿಯೇ ತಂದು ಬಿಟ್ಟಿತ್ತು.

ಈಗ ನಮ್ಮ ಸರದಿ. ಸದಾ ಬೇರೆಯವರನ್ನು ನೋಡುತ್ತಲೇ ಅಸಮಾಧಾನದಿಂದ ತತ್ತರಿಸುವ ನಮಗೆ ದೊರೆತ ಪಾತ್ರ ವೊಂದನ್ನು ಪ್ರೀತಿಸುತ್ತಾ ಬೆಳೆಯುವ ಬಗೆಯೇ ಅಲರ್ಜಿಯಾಗಿದೆ. ದಕ್ಕಿದ ಪಾತ್ರ ಸಿಕ್ಕ ಹೊಣೆಯನ್ನು ಗೌರವಿಸುವ ಅಪ್ಪಿಕೊಳ್ಳುವ ಮತ್ತು ಅದರ ಮೂಲಕವೇ ತೃಪ್ತಿ ಪಡುವ ಹಿತ ನೆಮ್ಮದಿ ಕಾಡು ಪಾಲಾಗಿದೆ. ಪಾತ್ರಗಳನ್ನು ಗೌರವಯುತವಾಗಿ ನಿಭಾಯಿಸುತ್ತಾ ಅದರಲ್ಲೇ ಇನ್ನಷ್ಟು ಪರಿಪಕ್ವತೆ ಪಡೆದುಕೊಳ್ಳದೆ ಹಲುಬುವ ಗುಣ ರಕ್ತಗತವಾಗಿದೆ. ಹಾಗಾಗಿಯೇ ನಿತ್ಯ ನಿರಂತರ ಅತೃಪ್ತಿ ಮತ್ತು ನಿಟ್ಟುಸಿರು. ಜನ ಅವರವರ ಪಾಡಿಗೆ ಇದ್ದಂಗೆ ಇದ್ದಲ್ಲೇ ನೆಮ್ಮದಿ ಕಂಡುಕೊಳ್ಳುವಂತೆ ಆದಾಗ ಮತ್ತು ಅದರ ಮೂಲಕವೇ ಗೆಲ್ಲುವಂತೆ ಆದಾಗ ಲೋಕದಲ್ಲಿ ಯಾವ ವಿಕಾರಗಳೂ ಸಂಭವಿಸುತ್ತಿರಲಿಲ್ಲವೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.