ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೇಕು ತರಬೇತಿ

ಪ್ರತಿಭಾ ಶೋಧ
Last Updated 2 ಅಕ್ಟೋಬರ್ 2021, 18:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: 2012ರಲ್ಲಿ ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುವೊಬ್ಬರು ‘ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಈ ಪದಕ ಸಾಕು’ ಎಂದು ಸಂಭ್ರಮಪಟ್ಟಿದ್ದರು.

ಯಾಕೆ ಎಂದು ಪ‍್ರಶ್ನಿಸಿದಾಗ, ‘ಒಳ್ಳೆಯ ಉದ್ಯೋಗ ಕಂಡುಕೊಂಡು ಜೀವನ ಭದ್ರ ಮಾಡಿಕೊಂಡರೆ ಕ್ರೀಡಾಕ್ಷೇತ್ರಕ್ಕೆ ಬಂದಿದ್ದಕ್ಕೂ ಸಾರ್ಥಕ ಎನಿಸುತ್ತದೆ’ ಎಂದಿದ್ದರು. ‘ಹೊಟ್ಟೆಪಾಡಿಗಾಗಿ ಆಟ’ ಎನ್ನುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು.

ಪ್ರಾಥಮಿಕ ಹಂತದಿಂದಲೇ ಪ್ರತಿಭಾ ಶೋಧದ ಕೊರತೆ ಹಾಗೂ ಕ್ರೀಡಾ ಮಹತ್ವ ಹೇಳಿಕೊಡುವಲ್ಲಿ ಆಗುತ್ತಿರುವ ಲೋಪದಿಂದ ಇಂಥ ಸಮಸ್ಯೆ ಹೆಚ್ಚುತ್ತಿವೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ನೆರವಾಗಲು ರಾಷ್ಟ್ರೀಯ ಮಟ್ಟದಲ್ಲಿ ಒಂದು ಪದಕ ಗೆದ್ದರೆ ಸಾಕು ಎನ್ನುವ ಮನೋಭಾವ ಕ್ರೀಡಾಪಟುಗಳಲ್ಲಿ ಬೆಳೆಯುತ್ತಿದೆ.

ಒಂದು ಸರ್ಕಾರಿ ಶಾಲಾ–ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಒಬ್ಬರು ಅಥವಾ ಗರಿಷ್ಠ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಇರುತ್ತಾರೆ. ದಿನದ ಒಂದು ತಾಸು ಮಾತ್ರ ‘ಆಟದ ಅವಧಿ’ಗೆ ಇರುತ್ತದೆ. ಈ ಸಮಯದಲ್ಲಿ ಯಾವ ಶಿಕ್ಷಕರಿಗೂ ಗಂಭೀರವಾಗಿ ಮಕ್ಕಳಿಗೆ ಕ್ರೀಡಾ ಕೌಶಲಗಳನ್ನು ಹೇಳಿಕೊಡಲು ಸಾಧ್ಯವಾಗುತ್ತಿಲ್ಲ.

ಮುಖ್ಯವಾಗಿ ಬಹುತೇಕ ದೈಹಿಕ ಶಿಕ್ಷಣ ಶಿಕ್ಷಕರಿಗೆ ಈಗಿನ ಸ್ಪರ್ಧಾತ್ಮಕತೆಗೆ ಬೇಕಾದ ಕೌಶಲಗಳು ಗೊತ್ತಿಲ್ಲ. ಶಿಕ್ಷಣ ಸಂಸ್ಥೆಗಳು, ಸರ್ಕಾರಗಳು ತರಬೇತಿ ಕೊಡಿಸುತ್ತಿಲ್ಲ.ಶಿಕ್ಷಕರಿಗೇ ಹೊಸ ಕ್ರೀಡಾ ಕೌಶಲಗಳು ತಿಳಿದಿಲ್ಲವಾದರೆ ಮಕ್ಕಳಿಗೆ ಹೇಳಿ ಕೊಡುವುದಾದರೂ ಏನು? ಯುವಪ್ರತಿಭೆಗಳ ಶೋಧ ಹೇಗೆ ಸಾಧ್ಯ?

ಧಾರವಾಡ ಜಿಲ್ಲೆ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ್ ಕುರಕುರಿ, ‘ಶಾಲಾ–ಕಾಲೇಜುಗಳಲ್ಲಿ ಎಲ್ಲರ ಪ್ರತಿಭೆಯನ್ನೂ ಒಬ್ಬ ಶಿಕ್ಷಕ ಶೋಧಿಸುವುದು ಕಷ್ಟ. ಪ್ರಾದೇಶಿಕತೆಗೆ ಅನುಗುಣವಾಗಿ ಕ್ರೀಡೆಗಳನ್ನು ವಿಭಜಿಸಿ ಶಿಬಿರ ನಡೆಸಬೇಕು. ಕ್ರೀಡೆಗೆ ಹೆಚ್ಚು ಸಮಯ ಇಡಬೇಕು. ಪ್ರತಿಭಾನ್ವಿತರಿಗೆ‌ ಆರ್ಥಿಕ ನೆರವು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT