ಡಿಸೆಂಬರ್ 10, 1930. ಸ್ಟಾಕ್ಹೋಮ್ನ ಆ ಭವ್ಯ ಸಭಾಂಗಣದಲ್ಲಿ ಭಾರತದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪದಕವನ್ನು ನೀಡಿ ಗೌರವಿಸಲಾಯಿತು. ಇಡೀ ಸಭೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿತ್ತು.ಆದರೆ ಅಂತಹ ಅದ್ಭುತ ಕ್ಷಣದಲ್ಲಿ ವಿಜ್ಞಾನಿಯ ಕಣ್ಣುಗಳು ತೇವವಾಗಿದ್ದವು.

ನೊಬೆಲ್ ಬಹುಮಾನ ಗಳಿಸಿದ ಆ ಭಾರತೀಯ ವಿಜ್ಞಾನಿ ಬೇರಾರೂ ಅಲ್ಲ.ಚಂದ್ರಶೇಖರ ವೆಂಕಟ್ ರಾಮನ್.ಪ್ರಪಂಚದ ಅತಿ ದೊಡ್ಡ ಗೌರವ ಸಿಕ್ಕಾಗ ಆ ಮಹಾನ್ ಚೇತನದ ಕಣ್ಣಾಲಿಗಳೇಕೆ ತುಂಬಿದ್ದವು?ಅದನ್ನು ಅವರ ಮಾತಿನಲ್ಲೇ ಸ್ಮರಿಸೋಣ.

"ನಾನು ಪ್ರಶಸ್ತಿ ಸ್ವೀಕರಿಸಿ ಸುತ್ತಲೂ ನೋಡಿದಾಗ, ಅಲ್ಲಿ ಹಾರಾಡುತ್ತಿದ್ದದ್ದು ಬ್ರಿಟಿಷರ ಯೂನಿಯನ್ ಜಾಕ್ ಧ್ವಜ. ನನ್ನ ದೇಶಕ್ಕೆ ತನ್ನದೇ ಆದ ಧ್ವಜವಿಲ್ಲವಲ್ಲ, ನಾನು ಇನ್ನೂ ಒಬ್ಬ ಗುಲಾಮ ದೇಶದ ಪ್ರಜೆಯಾಗಿ ಇಲ್ಲಿ ನಿಂತಿದ್ದೇನಲ್ಲ ಎಂಬ ನೋವು ನನ್ನನ್ನು ಕಣ್ಣೀರು ಹಾಕುವಂತೆ ಮಾಡಿತು" ಎಂದಿದ್ದರು.ಅಸಾಧಾರಣ ಪ್ರತಿಭೆ ಮತ್ತು ಅಪ್ಪಟ ದೇಶಭಕ್ತಿಯ ಸಾಕಾರದಂತಿದ್ದ ರಾಮನ್ ವಿಜ್ಞಾನವೆಂದರೆ ಕೇವಲ ಅಂಕಿ-ಅಂಶಗಳಲ್ಲ, ಅದು ಹಗಲಿರುಳು ಕಾಣುವ ಒಂದು ಕನಸು ಎಂದು ನಂಬಿದ್ದರು. 1930ರ ದಶಕದಲ್ಲಿ ಇಡೀ ಜಗತ್ತೇ ಬೆರಗಿನಿಂದ ಭಾರತದತ್ತ ನೋಡುವಂತೆ ಮಾಡಿದ ಕೀರ್ತಿ ಸರ್ ಸಿ.ವಿ.ರಾಮನ್ ರದ್ದು.ಆ ಯಶಸ್ಸಿನ ಹಿಂದೆ ಎಂತಹ ಅದಮ್ಯ ಆತ್ಮವಿಶ್ವಾಸ ಮತ್ತು ದೇಶಪ್ರೇಮದ ತಳಮಳವಿತ್ತು ಎಂಬುದು ಇಂದಿಗೂ ನಮಗೆ ಸ್ಪೂರ್ತಿದಾಯಕ.

ರಾಮನ್ ಅವರಿಗೆ ತಮ್ಮ ಸಂಶೋಧನೆಯ ಮೇಲೆ ಎಂತಹ ಅಚಲ ನಂಬಿಕೆಯಿತ್ತೆಂದರೆ, ನೊಬೆಲ್ ಪ್ರಶಸ್ತಿ ಘೋಷಣೆಯಾಗುವುದಕ್ಕಿಂತ ಐದು ತಿಂಗಳು ಮೊದಲೇ, ಅಂದರೆ ಜುಲೈ 1930ರಲ್ಲಿಯೇ, ಅವರು ಸ್ಟಾಕ್ಹೋಮ್ಗೆ ಹೋಗಲು ಹಡಗಿನ ಟಿಕೆಟ್ ಕಾಯ್ದಿರಿಸಿದ್ದರು! ಪ್ರಶಸ್ತಿ ಬರುತ್ತದೆ ಎಂದು ಜಗತ್ತು ಹೇಳುವ ಮೊದಲೇ ಅವರ ಅಂತರಾತ್ಮ ಅದನ್ನು ಸಾರುತ್ತಿತ್ತು. ಇದು ಅಹಂಕಾರವಲ್ಲ, ಬದಲಿಗೆ ಸತ್ಯವನ್ನು ಹುಡುಕಿದ ಒಬ್ಬ ಸಾಧಕನಿಗೆ ತನ್ನ ಶ್ರಮದ ಮೇಲಿದ್ದ ಅತೀವ ವಿಶ್ವಾಸ.

ಆ ದಿನಗಳಲ್ಲಿ ರಾಮನ್ ಅವರು ಕಲ್ಕತ್ತಾದಲ್ಲಿ ಅಕೌಂಟೆಂಟ್ ಜನರಲ್ ಆಗಿ ಕೆಲಸ ಮಾಡುತ್ತಿದ್ದರು. ಹೊಟ್ಟೆಪಾಡಿಗಾಗಿ ಹಗಲಿಡೀ ಲೆಕ್ಕಪತ್ರಗಳ ಕೆಲಸ ಮಾಡಿದರೆ, ರಾತ್ರಿಯಾಗುತ್ತಿದ್ದಂತೆ ಅವರ ಪಾದಗಳು ಓಡುತ್ತಿದ್ದುದು ಪ್ರಯೋಗಾಲಯದ ಕಡೆಗೆ. ಸಣ್ಣ ದೀಪದ ಬೆಳಕಿನಲ್ಲಿ, ಅತಿ ಸಾಮಾನ್ಯ ಉಪಕರಣಗಳನ್ನು ಬಳಸಿಕೊಂಡು ಅವರು ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಹವಣಿಸುತ್ತಿದ್ದರು. ಅವರಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಬೆಳಕು ಮತ್ತು ಬಣ್ಣಗಳ ಬಗ್ಗೆ ಒಂದು ವಿಚಿತ್ರವಾದ ಅನುರಾಗವಿತ್ತು.

ವಿಜ್ಞಾನದ ಶ್ರೇಷ್ಠತೆಯ ನಡುವೆಯೂ ಅವರ ಎದೆಯಲ್ಲಿ ಮಿಡಿಯುತ್ತಿದ್ದದ್ದು ದೇಶಪ್ರೇಮದ ಕಿಚ್ಚು. ಭಾರತೀಯ ವಿಜ್ಞಾನಿಗಳು ಪಾಶ್ಚಿಮಾತ್ಯರ "ದೌಲತ್ತು"ಗಳನ್ನು ಅವಲಂಬಿಸಬಾರದು, ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳಲ್ಲೇ ಜಗತ್ತನ್ನು ಗೆಲ್ಲಬೇಕು ಎಂಬುದು ಅವರ ಛಲವಾಗಿತ್ತು.

ಅದು 1921ರ ಸಮಯ. ರಾಮನ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಮಾವೇಶ ಮುಗಿಸಿ ಹಡಗಿನಲ್ಲಿ ಲಂಡನ್ನಿಂದ ಭಾರತಕ್ಕೆ ಮರಳುತ್ತಿದ್ದರು. ಅಂದು ಮೆಡಿಟರೇನಿಯನ್ ಸಮುದ್ರದ ಮೇಲೆ ಸೂರ್ಯ ಪ್ರಕಾಶಿಸುತ್ತಿದ್ದನು. ಆ ನೀಲಿ ಸಮುದ್ರದ ಸೌಂದರ್ಯವನ್ನು ಕಂಡು ರಾಮನ್ ಮಂತ್ರಮುಗ್ಧರಾದರು.ಅಷ್ಟೇಅಲ್ಲ,ಸಮುದ್ರದ ಬಣ್ಣವೇಕೆ ನೀಲಿ ?ಎಂಬ ಕುತೂಹಲದ ಪ್ರಶ್ನೆ ಮನದಲ್ಲಿ ಮಾಡಿತು. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಆಗಲೇ ಶುರುವಾಯಿತು.

ಅಲ್ಲಿಯವರೆಗೆ ವಿಜ್ಞಾನಿಗಳು "ಸಮುದ್ರದ ನೀಲಿ ಬಣ್ಣವು ಕೇವಲ ಆಕಾಶದ ಪ್ರತಿಬಿಂಬ" ಎಂದು ನಂಬಿದ್ದರು. ಆದರೆ ರಾಮನ್ ಅವರಿಗೆ ಇದು ಸರಿಯೆನಿಸಿರಲಿಲ್ಲ. ಅವರು ತಕ್ಷಣ ತಮ್ಮ ಜೇಬಿನಲ್ಲಿದ್ದ ಒಂದು ಪುಟ್ಟ ಗಾಜಿನ ರೋಹಿತ (Prism) ವನ್ನು ಹೊರತೆಗೆದು ಪರೀಕ್ಷಿಸಿದರು. ಸಮಾಧಾನದ ಉತ್ತರ ಸಿಗಲಿಲ್ಲ. ಪ್ರಯೋಗಾಲಯದಲ್ಲಿ ಹಲವು ಬಾರಿ ಪರೀಕ್ಷಿಸಿದರು.ಬೆಳಕಿನ ಚದುರುವಿಕೆಯಿಂದ ಸಮುದ್ರದ ಬಣ್ಣ ನೀಲಿಯಾಗಿರುತ್ತದೆ ಎಂಬುದನ್ನು ಕಂಡುಕೊಂಡರು.

ಭಾರತಕ್ಕೆ ಮರಳಿದ ನಂತರ ಅವರು ಕಲ್ಕತ್ತಾದಲ್ಲಿ ಪ್ರಯೋಗ ಆರಂಭಿಸಿದರು.ಅಚ್ಚರಿಯ ವಿಷಯವೆಂದರೆ, ಅವರು ಬಳಸಿದ್ದು ಇಂದಿನ ಕೋಟ್ಯಂತರ ರೂಪಾಯಿಗಳ ಲ್ಯಾಬ್ ಉಪಕರಣಗಳನ್ನಲ್ಲ! ಅವರ ಪ್ರಯೋಗದ ಮೂಲವಸ್ತು ಬೆಳಕು.ಆ ಬೆಳಕಿನ ಮೂಲ ಸಾಕ್ಷಾತ್ ಸೂರ್ಯನೇ ಆಗಿದ್ದ.ಬೆಳಕನ್ನು ಪಡೆಯಲು ಯಾವ ಖರ್ಚೂ ಇರಲಿಲ್ಲ. ಆ ಬೆಳಕಿನ ತೀವ್ರತೆ (Intensity) ಸಾಲದು ಎನ್ನಿಸಿದಾಗ ಅವರು ಅವಲಂಬಿಸಿದ್ದು ಅಲ್ಪದರದ ಪಾದರಸ ದೀಪಗಳನ್ನು.ಜೊತೆಗೆ ಪ್ರಯೋಗಗಳಿಗೆ ಬೇಕಾಗಿದ್ದ ಯoತ್ರ ಸ್ಪೆಕ್ಟ್ರೋಗ್ರಾಫ್ ನ ಬೆಲೆ 500 ರೂಪಾಯಿಗಳನ್ನು ಮೀರಿರಲಿಲ್ಲ. ಇದರಲ್ಲಿ ಕಡಿಮೆ ಬೆಲೆಯ ಸಾಮಾನ್ಯ ಮಸೂರಗಳು ಮತ್ತು ರೋಹಿತಗಳಿದ್ದವು.

ರಾಮನ್ ಅವರು ಈ ಪ್ರಯೋಗ ಮಾಡುವಾಗ ಸೂರ್ಯನ ಬೆಳಕನ್ನು ಕೇಂದ್ರೀಕರಿಸಲು ಕೆಲವೊಮ್ಮೆ ತಮ್ಮ ವಿದ್ಯಾರ್ಥಿಗಳನ್ನು ಕನ್ನಡಿ ಹಿಡಿದು ನಿಲ್ಲುವಂತೆ ಹೇಳುತ್ತಿದ್ದರಂತೆ! ಅಷ್ಟು ಸರಳವಾಗಿತ್ತು ಅವರ ಸಂಶೋಧನಾ ವಿಧಾನ!

ರಾಮನ್ ರ ಪ್ರಯೋಗದ ಪ್ರಕಾರ ಬೆಳಕಿನ ಕಿರಣವು ಪಾರದರ್ಶಕ ವಸ್ತುವಿನ ಮೂಲಕ ಹಾದು ಹೋದಾಗ ಚದುರಿದ ಬೆಳಕಿನ ಒಂದು ಭಾಗವು ಮೂಲ ಬೆಳಕಿನ ತರಂಗಾಂತರಕ್ಕಿoತ ಭಿನ್ನ ತರಂಗಾಂತರ ಹೊಂದಿರುತ್ತದೆ. ಇದನ್ನೇ ರಾಮನ್ ಪರಿಣಾಮ ಎನ್ನಲಾಗುತ್ತದೆ.ಇದು ಅಣುಗಳ "ಬೆರಳಚ್ಚು" (Fingerprint) ಇದ್ದಂತೆ.ಇಂದು ಈ ತಂತ್ರಜ್ಞಾನವನ್ನು ಬಳಸಿ ಕ್ಯಾನ್ಸರ್ ಪತ್ತೆಯಿಂದ ಹಿಡಿದು,ವಸ್ತುಗಳ ರಸಾಯನಿಕ ವಿಶ್ಲೇಷಣೆ, ವಿಧಿ ವಿಜ್ಞಾನ ಮತ್ತು ಮಂಗಳ ಗ್ರಹದ ಮೇಲಿರುವ ಖನಿಜಗಳವರೆಗೆ ಎಲ್ಲವನ್ನೂ ಪತ್ತೆಹಚ್ಚಲಾಗುತ್ತಿದೆ!

ವಿಜ್ಞಾನ ವಿಷಯದಲ್ಲಿ ಭಾರತಕ್ಕೆ ಮೊಟ್ಟ ಮೊದಲ ನೊಬೆಲ್ ಬಹುಮಾನ ಗಳಿಸಿಕೊಟ್ಟ ರಾಮನ್ ಸದಾ"ವಿಜ್ಞಾನವು ದುಬಾರಿ ಉಪಕರಣಗಳಲ್ಲಿಲ್ಲ, ಅದನ್ನು ನೋಡುವ ಕಣ್ಣು ಮತ್ತು ಯೋಚಿಸುವ ಮೆದುಳಿನಲ್ಲಿದೆ"ಎನ್ನುತ್ತಿದ್ದರು. ಈ ವಿವೇಕದಿಂದಲೇ ಅವರು ಅಪರೂಪದ ಸಂಶೋಧನೆ ಮಾಡಿ ವಿಶ್ವ ಭೂಪಟದಲ್ಲಿ ಭಾರತದ ಸ್ಥಾನವನ್ನು ಶಾಶ್ವತಗೊಳಿಸಿದರು.ಇನ್ನೆರಡು ವರ್ಷ ಕಳೆದರೆ ರಾಮನ್ ರ ಸಂಶೋಧನೆಗೆ (1928) ನೂರು ವರ್ಷ ತುಂಬುತ್ತದೆ.ವಿಜ್ಞಾನರಂಗದ ಸಾಧನೆಗೆ ಅಂಥದೇ ಇನ್ನೊಂದು ನೊಬೆಲ್ ಬಹುಮಾನ ಗಳಿಸಲು ಈ ದೇಶ ಇನ್ನೆಷ್ಟು ವರ್ಷ ಕಾಯಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.