ಮಹಾರಾಷ್ಟ್ರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಮುಟ್ಟಾಗಿರುವುದನ್ನು ತಿಳಿದುಕೊಳ್ಳಲು ಶಾಲೆಯ ಮುಖ್ಯಶಿಕ್ಷಕಿ ಮತ್ತು ಇತರ ಶಿಕ್ಷಕಿಯರು ಮಕ್ಕಳ ಬಟ್ಟೆ ಬಿಚ್ಚಿ ಪರೀಕ್ಷಿಸಿದ್ದಾರೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಾಣಿಸಿರುವುದು ವಿದ್ಯಾರ್ಥಿನಿಯರ ದೈಹಿಕ ತಪಾಸಣೆಗೆ ಕಾರಣವಾಗಿದೆ. ಈ ಅನಾಗರಿಕ ವರ್ತನೆ ಇಂದಿನ ಶಿಕ್ಷಣ ವ್ಯವಸ್ಥೆ ಕುರಿತು ಚಿಂತಿಸುವಂತೆ ಮಾಡಿದೆ.

ಶಾಲೆಯ ಮುಖ್ಯಶಿಕ್ಷಕಿ ಮತ್ತು ಇತರ ಶಿಕ್ಷಕಿಯರು ತಾವೂ ಹೆಣ್ಣೆಂಬುದನ್ನು ಮರೆತು ವಿದ್ಯಾರ್ಥಿನಿಯರ ಮುಟ್ಟಿನ ಪರೀಕ್ಷೆಗೆ ಮುಂದಾಗಿದ್ದು ವಿಪರ್ಯಾಸ. ಹೀಗೆ ಪರೀಕ್ಷೆಗೆ ಒಳಪಡಿಸುವಾಗ ವಿದ್ಯಾರ್ಥಿನಿಯರ ಮುಜುಗರ ಶಿಕ್ಷಕಿಯರ ಗಮನಕ್ಕೆ ಬರಬೇಕಾಗಿತ್ತು. ಇಂದಿನ ತಂತ್ರಜ್ಞಾನದ ಯುಗದಲ್ಲೂ, ಮುಟ್ಟಿನ ಪ್ಯಾಡ್ಗಳನ್ನು ಖರೀದಿಸುವಾಗ ಮಹಿಳೆಯರು ಮುಜುಗರಕ್ಕೆ ಒಳಗಾಗುವುದಿದೆ. ಪ್ಯಾಡ್ ತಮ್ಮ ಕೈಸೇರಿದ ತಕ್ಷಣ ಕರವಸ್ತ್ರದಲ್ಲೋ ಕೈಚೀಲದಲ್ಲೋ ಮರೆಮಾಚುತ್ತಾರೆ. ಅಕ್ಕಪಕ್ಕದಲ್ಲಿ ಇರುವವರ ಕಣ್ಣುಗಳಿಗೆ ಆಹಾರವಾಗುವ ಅಸಹಾಯಕತೆಯಿಂದ ಬಳಲುತ್ತಾರೆ.

ಹೆಣ್ಣುಮಕ್ಕಳಲ್ಲಿ ಮುಟ್ಟು ಸಹಜವಾದ ಜೈವಿಕ ಪ್ರಕ್ರಿಯೆ ಯಾಗಿದೆ. ಮಾನವ ಸಮಾಜದ ವಿಕಸನದಲ್ಲಿ ಮುಟ್ಟಿನ ಪಾತ್ರ ಮತ್ತು ಕೊಡುಗೆ ಗಮನಾರ್ಹ. ಆದರೆ, ಇಂದಿಗೂ ಸಮಾಜದಲ್ಲಿ ಮುಟ್ಟಿನ ಕುರಿತು ಮೂಢನಂಬಿಕೆ ಇದೆ. ಅದೆಷ್ಟೋ ಮಡಿವಂತ ಕುಟುಂಬಗಳಲ್ಲಿ ಮುಟ್ಟಾದ ಮಹಿಳೆಯರು ಮೂರು ದಿನಗಳ ಕಾಲ ಅಸ್ಪೃಶ್ಯತೆಯನ್ನು ಅನುಭವಿಸಬೇಕು. ಅಡುಗೆ ಮನೆ, ದೇವರ ಕೋಣೆಗಳಲ್ಲಿ ಅವರಿಗೆ ಪ್ರವೇಶ ನಿಷಿದ್ಧ. ಆ ದಿನಗಳಲ್ಲಿ ಅವರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಮುಟ್ಟನ್ನು ‘ಹೊರಗಾಗುವುದು’ ಎಂದು ಹೇಳುವ ರೂಢಿಯಿದೆ. ಹೊರಗಾಗುವುದು ಎಂದರೆ, ಮನೆಯಿಂದ ಹೊರಗಿರುವುದು ಎಂದರ್ಥ.

ಮುಟ್ಟಿನ ಕುರಿತು ಸಮಾಜದಲ್ಲಿ ಮನೆ ಮಾಡಿರುವ ಅಜ್ಞಾನ ಮತ್ತು ಕುರುಡು ಆಚರಣೆಯನ್ನು ಹೋಗಲಾಡಿಸುವುದು ಸುಶಿಕ್ಷಿತರ ಜವಾಬ್ದಾರಿ. ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರು ಅಶುದ್ಧರಾಗಿರುವರು, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲು ಯೋಗ್ಯರಾಗಿರುವು ದಿಲ್ಲ, ಅವರ ಸ್ಪರ್ಶದಿಂದ ಆಹಾರ ಕಲುಷಿತಗೊಳ್ಳುವುದು ಎನ್ನುವ ಮೂಢನಂಬಿಕೆಗಳು ಇನ್ನೂ ಸಮಾಜದಲ್ಲಿವೆ. ಮುಟ್ಟಾದ ಮಹಿಳೆಯರು ಕ್ರೀಡೆ ಮತ್ತಿತರ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಬಲರಾಗಿರುವುದಿಲ್ಲ ಎನ್ನುವ ತಪ್ಪುಕಲ್ಪನೆಗಳೂ ಇವೆ. ಸಾರ್ವಜನಿಕವಾಗಿ ಮುಟ್ಟಿನ ಸಂಗತಿಯನ್ನು ಮಾತನಾಡುವುದು ಹಾಗೂ ಚರ್ಚಿಸುವುದು ಸಲ್ಲದು ಎನ್ನುವಂತಹ ಸಾಮಾಜಿಕ ವಾತಾವರಣವಿದೆ.

ಮುಟ್ಟಿನ ಕುರಿತು ಸರಿಯಾದ ತಿಳಿವಳಿಕೆ ಮತ್ತು ಜಾಗೃತಿ ಮೂಡಿಸಲು ಇರುವ ಏಕೈಕ ಪರಿಹಾರ ಶಿಕ್ಷಣ ಮಾತ್ರವಾಗಿದೆ. ಸುಶಿಕ್ಷಿತ ಕುಟುಂಬಗಳಲ್ಲಿ ಮುಟ್ಟಾದ ಮಹಿಳೆಯರ ಕುರಿತು ಕುಟುಂಬದ ಸದಸ್ಯರ ಅನಾಗರಿಕ ವರ್ತನೆ ಕಡಿಮೆಯಾಗಿರುವುದನ್ನು ಕಾಣಬಹುದು. ಬದಲಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಬದಲಾವಣೆಗೆ ಕಾರಣ ಆಗಬೇಕಾದ ಶೈಕ್ಷಣಿಕ ಪರಿಸರದಲ್ಲೇ ವಿದ್ಯಾರ್ಥಿನಿಯರು ಮುಟ್ಟಾಗಿರುವುದನ್ನು ತಿಳಿದುಕೊಳ್ಳಲು ಶಿಕ್ಷಕಿಯರು ಮುಂದಾದುದು ವಿಷಾದಕರ. ಪರಿಶೀಲನೆಗೆ ಒಳಗಾದ ಮಕ್ಕಳ ಮನೋವೇದನೆಯನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಸಾಧ್ಯವಲ್ಲ.

ಶಾಲೆಗಳಲ್ಲಿ ಮುಟ್ಟಿನ ಕುರಿತು ಬಾಲಕಿಯರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನಗಳಾಗಬೇಕು. ಈ ಕಾರ್ಯಕ್ಕೆಂದೇ ಪ್ರತ್ಯೇಕ ತರಗತಿಗಳನ್ನು ಮೀಸಲಾಗಿರಿಸಬೇಕು. ಮುಟ್ಟಿನ ಸಂದರ್ಭದಲ್ಲೂ ವಿದ್ಯಾರ್ಥಿನಿಯರು ಶಾಲೆಗೆ ಹಾಜರಾಗುವ ವಾತಾವರಣವನ್ನು ಶಿಕ್ಷಕರು ಸೃಷ್ಟಿಸಬೇಕು. ವಿಪರ್ಯಾಸವೆಂದರೆ, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕಿಯರ ಕೊರತೆ ಇದೆ. ಪುರುಷ ಶಿಕ್ಷಕರು ಮುಟ್ಟಿನ ಕುರಿತು ವಿದ್ಯಾರ್ಥಿಗಳೊಡನೆ ಬಹಿರಂಗವಾಗಿ ಚರ್ಚಿಸುವಷ್ಟು ನಮ್ಮ ವ್ಯವಸ್ಥೆ ಇನ್ನೂ ಸುಧಾರಣೆಗೊಂಡಿಲ್ಲ. ಈ ಸಮಸ್ಯೆಯ ನಿವಾರಣೆಗಾಗಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಒಬ್ಬ ಶಿಕ್ಷಕಿ ಯನ್ನಾದರೂ ಕಡ್ಡಾಯವಾಗಿ ನಿಯುಕ್ತಿಗೊಳಿಸಬೇಕು.

ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ವಿತರಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ವಿಶೇಷವಾಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳ ಉಚಿತ ವಿತರಣೆ ಅವಶ್ಯಕ. ಬಡತನ ಮತ್ತು ಶಿಕ್ಷಣದ ಕೊರತೆಯ ಕಾರಣ ಅದೆಷ್ಟೋ ಪಾಲಕರಿಗೆ ಮುಟ್ಟಿನ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ಕಡಿಮೆ. ಬಡ ಕುಟುಂಬಗಳಲ್ಲಿ ಪ್ಯಾಡ್ಗಳ ಬದಲು ಬಟ್ಟೆಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ವಿಶ್ವದಾದ್ಯಂತ ಶೇ 39ರಷ್ಟು ಶಾಲೆಗಳಲ್ಲಿ ಮಾತ್ರ ಮುಟ್ಟಿನ ಕುರಿತು ಶಿಕ್ಷಣ ಮತ್ತು ತಿಳಿವಳಿಕೆಯನ್ನು ನೀಡಲಾಗುತ್ತಿದೆ. ಶಾಲೆಗಳಲ್ಲಿ ಶಿಕ್ಷಣ ಮತ್ತು ತಿಳಿವಳಿಕೆ ನೀಡುವ ಪ್ರಮಾಣ ಇನ್ನೂ ಹೆಚ್ಚಬೇಕಿದೆ. ಶಾಲೆಗಳ ಶೌಚಾಲಯದಲ್ಲಿ ಬಳಸಲು ಸ್ಯಾನಿಟರಿ ಪ್ಯಾಡ್ಗಳನ್ನಿಡುವ ವ್ಯವಸ್ಥೆ ಜಾರಿಗೆ ಬರಬೇಕು. ಆದರೆ, ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಮುಟ್ಟಿನ ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರು ಶೌಚಾಲಯದ ಕೊರತೆಯಿಂದ ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಮುಟ್ಟಾದ ಬಾಲಕಿಯರನ್ನು ಕುಹಕ ಮತ್ತು ವ್ಯಂಗ್ಯದಿಂದ ನೋಡದಂತೆ ಬಾಲಕರಿಗೂ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ.

ಮುಟ್ಟು ಒಂದು ಸಹಜವಾದ ಜೈವಿಕ ಪ್ರಕ್ರಿಯೆ ಎನ್ನುವಂಥ ವಾತಾವರಣವನ್ನು ಶಾಲೆಗಳಲ್ಲಿ ಶಿಕ್ಷಕರು ಸೃಷ್ಟಿಸಬೇಕು. ಮನೆಗಳಲ್ಲಿ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಮುಟ್ಟಾದ ಮಹಿಳೆಯರನ್ನು ಗೌರವದಿಂದ ನೋಡುವ ಮನೋಭಾವವನ್ನು ಎಲ್ಲರೂ
ರೂಢಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.