ಕೃತಕ ಬುದ್ಧಿಮತ್ತೆ ಬಳಕೆ ಶಿಕ್ಷಣ ಕ್ಷೇತ್ರದ ಅಂತಃಸತ್ತ್ವವನ್ನೇ ಕುಗ್ಗಿಸುತ್ತಿದೆ. ಮನಸ್ಸುಗಳ ಬದಲಿಗೆ ಯಂತ್ರಗಳ ಜೊತೆ ವ್ಯವಹರಿಸಿದರೆ ಶಿಕ್ಷಣದ ಉದ್ದೇಶ ಈಡೇರುವುದೆ?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯು ಶಿಕ್ಷಕರನ್ನು ಮೂಲೆಗುಂಪು ಮಾಡಬಹುದೇ ಎಂಬ ಆತಂಕವೊಂದು ಶಿಕ್ಷಕರ ಮನಸ್ಸಿನಲ್ಲಿ ಎದ್ದಿದೆ. ಈ ಮೊದಲು, ಶಿಕ್ಷಣ ಸಂಸ್ಥೆಗಳಲ್ಲಿ ಸೃಜನಶೀಲ ಬರವಣಿಗೆಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ, ಬರವಣಿಗೆಯನ್ನು ಅಭ್ಯಾಸ ಮಾಡಿದವರಿಗೆ ಅಥವಾ ಭಾಷಾ ಉಪನ್ಯಾಸಕರಿಗೆ ಕರೆ ಬರುತ್ತಿತ್ತು. ಯಾವಾಗ ಕೃತಕ ಬುದ್ಧಿಮತ್ತೆಯೆಂಬುದು ಹೆಚ್ಚು ಬಳಕೆಗೆ ಬಂತೋ ಅಲ್ಲಿಂದ ಎಲ್ಲರೂ ಬರಹಗಾರರೇ ಆದರು. ನಿಜವೇ, ಚಾಟ್ಜಿಪಿಟಿಯಂಥ ಆ್ಯಪ್ಗಳು ಸೂಚನೆಗಳನ್ನು ಸರಿಯಾಗಿ ಕೊಟ್ಟರೆ ಸಾಕು, ಎಂತಹ ಬರವಣಿಗೆಯನ್ನಾದರೂ ಕೊಟ್ಟು ಬಿಡುತ್ತವೆ. ಎಷ್ಟೋ ಬಾರಿ ನೈಜ ಬರಹಗಾರರು ಯಾರು, ಎಐ ಬರಹಗಾರರು ಯಾರು ಎಂದೇ ಗೊತ್ತಾಗುವುದಿಲ್ಲ. ಸಾಮಾಜಿಕ ಜಾಲತಾಣಗಳ ಕೆಲವು ಪೋಸ್ಟ್ಗಳನ್ನು ನೋಡಿದರೂ ಅದನ್ನು ನಿಜವಾಗಿಯೂ ಪೋಸ್ಟ್ ಮಾಡಿ ದವರೇ ಬರೆದದ್ದಾ ಎಂದು ಗೊಂದಲಪಡುವ ಸ್ಥಿತಿ ಓದುಗರದ್ದಾಗಿದೆ.

ಪ್ರಶ್ನೆ ಇರುವುದು ಶಿಕ್ಷಣ ಸಂಸ್ಥೆಗಳಲ್ಲಿ ನಾವು ವ್ಯವಹರಿಸು ವುದು ಮನಸ್ಸುಗಳ ಜತೆಗಲ್ಲವೇ ಎಂಬುದು. ಅವರಿಗೆ ಬೇಕಾದಂತೆ ಪಠ್ಯವನ್ನು ರೂಪಿಸಬೇಕಾದರೆ, ಅವರು ಅನುಸರಿಸಬೇಕಾದ ಸೂಚನೆಗಳನ್ನು ನೀಡಬೇಕಾದರೆ, ಮಾನವೀಯ ಗುಣಗಳನ್ನು ಹೊಂದಿದ ಪಠ್ಯವನ್ನು ಕೊಡಬೇಕೇ ಹೊರತು, ಯಾಂತ್ರೀಕೃತ ಪಠ್ಯ ಅಲ್ಲ.

ಸಾಮಾನ್ಯವಾಗಿ, ಎಐ ಬಳಕೆ ಆರಂಭದಲ್ಲಿ ಎಲ್ಲರಿಗೂ ಖುಷಿ ನೀಡುತ್ತದೆ. ನಮ್ಮ ಯೋಚನಾಶಕ್ತಿ ಯನ್ನು ಬಳಸದೆ ಒಂದೊಳ್ಳೆಯ ಪಠ್ಯ ಸಿದ್ಧವಾಯಿತು ಎಂದುಕೊಳ್ಳುತ್ತೇವೆ. ಆದರೆ, ಬರುಬರುತ್ತಾ ಅದರಲ್ಲಿನ ಏಕತಾನತೆ ನಮಗರ್ಥವಾದಂತೆ, ನಾವು ಬರೆಯುವುದೇ ಚೆನ್ನ ಅನಿಸುತ್ತದೆ. ಅಗತ್ಯವಿದ್ದಲ್ಲಿ ವ್ಯಾಕರಣ ದೋಷಗಳನ್ನು ತಿದ್ದುವಂತೆ ಅದರ ಸಹಾಯವನ್ನು ಪಡೆಯಬಹುದೇನೋ. ಅದೂ ಇಂಗ್ಲಿಷ್ ಮಾತ್ರ. ಕನ್ನಡದ ಸೂಚನೆಗಳನ್ನೂ ಅದು ಪಾಲಿಸುವುದು ಪಠ್ಯವನ್ನು ಕೊಡು ವುದು ಹೌದಾದರೂ, ಅದರಲ್ಲಿ ಸಾಕಷ್ಟು ತಿದ್ದುಪಡಿಗಳು ಅಗತ್ಯವಿರುತ್ತವೆ. ಅವನ್ನು ಗಮನಿಸದೇ ಹಾಗೆಯೇ ಇನ್ನೆಲ್ಲೋ ಹಂಚಿಕೊಂಡರೆ ಮುಜುಗರಕ್ಕೀಡಾಗುವ ಸಾಧ್ಯತೆಗಳೂ ಇರುತ್ತವೆ. ಗೂಗಲ್ ಟ್ರಾನ್ಸ್ಲೇಟ್ನದ್ದೂ ಬಹುತೇಕ ಅದೇ ಸಮಸ್ಯೆ. ನಮ್ಮ ಅವಸರಕ್ಕೆಂದು ಇಂಗ್ಲಿಷ್ ಪಠ್ಯವನ್ನು ಅನುವಾದಿಸಿಕೊಂಡೆವೋ ಮತ್ತೆ ಮೊದಲಿನಿಂದ ಹೊಸತಾಗಿಯೇ ಬರೆಯುವಂತೆ ಅದನ್ನು ತಿದ್ದಬೇಕಾಗುತ್ತದೆ.

ತಾಂತ್ರಿಕ ವಿಷಯಗಳಲ್ಲಿ ಮುಂದಿರುವವರು ಈ ಸೂಕ್ಷ್ಮ ವನ್ನು ಅರ್ಥ ಮಾಡಿಕೊಳ್ಳುವುದು ಕಡಿಮೆ. ಎಲ್ಲವನ್ನೂ ತಾವೇ ಮಾಡಿ ಮೆಚ್ಚುಗೆ ಪಡೆಯಬೇಕೆಂಬ ಹಂಬಲದಲ್ಲಿ ಇತರ ಉಪನ್ಯಾಸಕರನ್ನು ಕೇಳುವ ಗೋಜಿಗೆ ಹೋಗುವುದಿಲ್ಲ. ಭಾಷಾ ಉಪನ್ಯಾಸಕರೂ ಇದಕ್ಕೆ ಹೊರತಲ್ಲ. ಹತ್ತು ನಿಮಿಷ ಸಮಾಧಾನವಾಗಿ ಬರೆಯಬೇಕಾದ ವಿಷಯವನ್ನು ಎಐಗೆ ಹಾಕಿ ತೆಗೆಯುವುದೇ ಸುಲಭ ಎಂಬ ಮನಃಸ್ಥಿತಿಯನ್ನು ಕೆಲವರು ಬೆಳೆಸಿಕೊಂಡಿದ್ದಾರೆ. ‘ಬೇಗ ಕೆಲಸ ಮುಗಿದುಬಿಡಬೇಕು’ ಎಂಬ ಧಾವಂತದಲ್ಲಿ ಕೆಲಸ ಮಾಡುವವರು ‘ಸಮರ್ಪಕವಾಗಿ ಮಾಡಬೇಕು’ ಎಂಬುದನ್ನು ಗಮನಿಸುವುದಿಲ್ಲ.

ಹೆಚ್ಚಿನ ವಿದ್ಯಾರ್ಥಿಗಳು ತಮಗೆ ಬೇಕಾದ ನೋಟ್ಸು, ತಾವು ಸಲ್ಲಿಸ ಬೇಕಾದ ಅಸೈನುಮೆಂಟ್ಗಳನ್ನು ಎಐ ಮೂಲಕ ಸಿದ್ಧಪಡಿಸುತ್ತಾರೆ. ಅದರಲ್ಲಿನ ಪದಪುಂಜಗಳು ತಮಗೆ ಸುಲಲಿತ ಎನ್ನುವಂತೆ ಆಡುತ್ತಾರೆ. ತಮಗೆ ಗೊತ್ತಿರುವಷ್ಟು ಶಿಕ್ಷಕರಿಗೆ ಗೊತ್ತಿಲ್ಲ ಎಂಬ ಭ್ರಮೆ ಬೆಳೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಶಿಕ್ಷಕರಿಗಾಗಲೀ ವಿದ್ಯಾರ್ಥಿಗಳಿಗಾಗಲೀ ಸಹಜವಾಗಿ ಭಾಷೆಯ ಅಭಿವ್ಯಕ್ತಿ ಏನು ಎಂಬುದೇ ಮರೆತುಹೋಗಿರುತ್ತದೆ. ಕಂಪ್ಯೂಟರ್ಗೆ ಎಲ್ಲವೂ ಗೊತ್ತಿದೆ, ಅಥವಾ ಎಲ್ಲವೂ ಇಂಟರ್ನೆಟ್ನಲ್ಲಿ ಲಭ್ಯವಿದೆ ಎಂಬುದಷ್ಟೇ ಶಿಕ್ಷಣವೆ? ವಿದ್ಯಾರ್ಥಿಗಳ ಮನಸ್ಸಿನೊಳಗೆ ನಾವು ಕಲಿಸಿದ್ದು ಎಷ್ಟರ ಮಟ್ಟಿಗಿದೆ, ಅಥವಾ ವರ್ಷದಿಂದ ವರ್ಷಕ್ಕೆ ತನ್ನ ಬೋಧನಾ ಕ್ರಮವನ್ನು ಸುಧಾರಿಸಲು ಏನು ಮಾಡಬೇಕು ಎಂಬುದನ್ನು ಶಿಕ್ಷಕರೂ ಯೋಚಿಸುವುದಕ್ಕೆ ಇದು ಸಕಾಲ.

ಭಾಷಾ ಬೋಧನೆ ಸಣ್ಣ ಸಂಗತಿಯಲ್ಲ. ಗಣಿತದ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಕಷ್ಟವೋ, ವ್ಯಾಕರಣವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ ಕಷ್ಟ. ಗಣಿತದ ಪ್ರಮೇಯಗಳನ್ನು ಬರೆಯುವಾಗ ಚಿಹ್ನೆಗಳು ಎಷ್ಟು ಮುಖ್ಯವಾಗುತ್ತವೋ ಭಾಷೆಯಲ್ಲಿ ಅದಕ್ಕಿಂತ ಕಡಿಮೆಯೇ ನಲ್ಲ. ಆದರೆ, ಗಣಿತದಲ್ಲಿ ಒಂದು ಬಿಂದುವಿನ ಮೌಲ್ಯವನ್ನು ಅರಿಯುವ ಮಕ್ಕಳು ಭಾಷೆಯಲ್ಲಿ ಅರ್ಧವಿರಾಮ, ಪೂರ್ಣ ವಿರಾಮಗಳನ್ನು ಸರಿಯಾಗಿ ಹಾಕುವ ಮನಃಸ್ಥಿತಿ ತೋರುವುದಿಲ್ಲ. ಹಾಕದೇ ಇರುವುದು ತಪ್ಪು ಎಂಬುದನ್ನು ಅರ್ಥಮಾಡಿ ಕೊಳ್ಳಲೂ ಹೋಗುವುದಿಲ್ಲ. ಕನ್ನಡದ ಕಾಗುಣಿತದ ವಿಷಯಕ್ಕೆ ಬಂದರೆ ಉಪನ್ಯಾಸಕರೇ ತಪ್ಪಾಗಿ ಬರೆದರೆ ವಿದ್ಯಾರ್ಥಿಗಳು ಅವರನ್ನು ಸ್ವೀಕರಿಸಲಂತೂ ಸಾಧ್ಯವೇ ಇಲ್ಲ.

‘ಗೀತಾರಾಣಿ’ ಎಂಬ ತಮಿಳು ಸಿನಿಮಾ ಇತ್ತೀಚೆಗೆ ನೋಡಿದೆ. ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಗೀತಾರಾಣಿ ಅಲ್ಲಿಂದ ಸ್ವಯಂನಿವೃತ್ತಿ ಪಡೆದು ಶಾಲೆಯೊಂದಕ್ಕೆ ಮುಖ್ಯಸ್ಥೆಯಾಗಿ ಹೋಗುತ್ತಾಳೆ. ಅಲ್ಲಿನ ಎಲ್ಲಾ ಬೋಧನಾ ವಿಷಯಗಳ ಶಿಕ್ಷಕರಿಗೆ ಅವಳು ತಲಾ ಮೂರು ಪ್ರಶ್ನೆಗಳನ್ನು ಕೇಳಿ, ಒಂದು ತಿಂಗಳ ಸಮಯ ಕೊಟ್ಟು ಉತ್ತರ ಕಲಿಯಲು ಹೇಳುತ್ತಾಳೆ. ಮೊದಲಿಗೆ ಎಲ್ಲರಿಂದ ಪ್ರತಿರೋಧ ಬಂದರೂ, ನಂತರ ಅವಳ ಶಿಸ್ತು, ಶ್ರದ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಂದರೆ, ಶಿಕ್ಷಕರುಸದಾ ಕಾಲವೂ ವಿದ್ಯಾರ್ಥಿಗಳೇ ಆಗಿದ್ದು ಕೊಂಡು ಹೊಸತನ್ನುಕಲಿಯುವ ಮನಃಸ್ಥಿತಿ ಇದ್ದರೆ ಮಾತ್ರ ಶಿಕ್ಷಕರಾಗಿ ಮುಂದುವರಿಯಬಹುದು.

ಈಗ ನಾವು ಯೋಚಿಸಬೇಕಿರುವುದು ಎಐ ಬಳಕೆಯನ್ನು ಹತ್ತಿಕ್ಕುವುದರ ಬಗೆಗಲ್ಲ. ನಮ್ಮ ಬೋಧನೆಗೆ ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗೆಗೆ. ಖಡ್ಗ ನಮ್ಮಲ್ಲಿದ್ದ ಕೂಡಲೇ ಯುದ್ಧ ಗೆಲ್ಲಲಾಗುವುದಿಲ್ಲ. ಅದನ್ನು ಹೇಗೆ, ಯಾವಾಗ ಉಪಯೋಗಿಸಬೇಕೆಂಬ ಅರಿವಿರ ಬೇಕು. ಶಿಕ್ಷಣ ಕ್ಷೇತ್ರಕ್ಕೆ ಸವಾಲಾಗುವುದು ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳಲ್ಲ, ಶಿಕ್ಷಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.