ಇಂದಿನ ಮಹಿಳೆಯರು ಹಾಗೂ ಪುರುಷರು ಕುಟುಂಬ ವ್ಯವಸ್ಥೆಯಿಂದಲೇ ದೂರ ಹೊರಟಿರುವುದು ಮಾನವೀಯತೆಯ ವೃಕ್ಷದ ಬೇರಿಗೆ ಕೊಡಲಿಪೆಟ್ಟು ನೀಡುತ್ತಿರುವಂತಿದೆ

ಪ್ರತಿವರ್ಷ ಮೇ 15ರಂದು ವಿಶ್ವ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಈ ತೀರ್ಮಾನ ಸೂಕ್ತವೂ ಸಮಯೋಚಿತವೂ ಆಗಿದೆ. ಏಕೆಂದರೆ ಈ ಕಾಲಘಟ್ಟದಲ್ಲಿ ‘ಕುಟುಂಬ’ ಎಂಬ ಪರಿಕಲ್ಪನೆಗೆ ಗಂಡಾಂತರ ಒದಗಿಬಂದಿದೆ. ಈ ಮೂಲಕ ಇಡೀ ಮಾನವ ಜನಾಂಗದ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ.

ಪ್ರೀತಿ, ಸ್ನೇಹ, ಸೌಹಾರ್ದ, ಸೇವೆ ಮತ್ತು ತ್ಯಾಗದ ತಳಹದಿಯ ಮೇಲೆ ನಿರ್ಮಾಣಗೊಂಡ ಕುಟುಂಬ ಎಂಬ ಘಟಕವು ಇತ್ತಿತ್ತಲಾಗಿ ಛಿದ್ರವಿಚ್ಛಿದ್ರಗೊಳ್ಳುತ್ತಿದೆ. ಇದು ಅತ್ಯಂತ ಕಳವಳಕಾರಿಯಾದ ಸಂಗತಿ. ಕುಟುಂಬದಂತಹ ಸುರಕ್ಷಿತ ಹಾಗೂ ಸುಮಧುರವಾದ ಕೋಟೆಯನ್ನು ಧಿಕ್ಕರಿಸಿ ಮನುಷ್ಯ ಇಂದು ಏಕಾಂಗಿಯಾಗಿ ಬಾಳಲು ಬಯಸುತ್ತಿದ್ದಾನೆ. ಇದನ್ನು ನೋಡಿದರೆ, ಮಾನವೀಯತೆಯ ಅವಸಾನದತ್ತ ಹೆಜ್ಜೆ ಹಾಕುತ್ತಿರುವಂತೆ ತೋರುತ್ತದೆ.

ಇಂದಿನ ಮಹಿಳೆಯರು ಹಾಗೂ ಪುರುಷರು ಕೌಟುಂಬಿಕ ದೌರ್ಜನ್ಯ, ಈ ವ್ಯವಸ್ಥೆಯೊಳಗೆ ಇರಬಹುದಾದ ಅವ್ಯವಸ್ಥೆ, ಆಘಾತಕ್ಕೆ ಬೆದರಿ ಕುಟುಂಬ ವ್ಯವಸ್ಥೆಯಿಂದಲೇ ದೂರ ಹೊರಟಿರುವುದು ಮಾನವೀಯತೆಯ ವೃಕ್ಷದ ಬೇರಿಗೆ ಕೊಡಲಿಪೆಟ್ಟು ನೀಡುತ್ತಿರುವಂತಿದೆ. ಇಂತಹ ಬೆಳವಣಿಗೆಯನ್ನು ತಡೆಯಬೇಕಾದರೆ ಕುಟುಂಬ ಜೀವನಕ್ಕೆ ಇರುವ ಮೌಲ್ಯವೇನು, ಅದರ ಮಹತ್ವವೇನು ಎಂಬುದನ್ನು ನಾವು ವಿವೇಚಿಸಬೇಕಾದ ಅಗತ್ಯ ಇದೆ.

ಒಬ್ಬ ಪುರುಷನೇ ಆಗಿರಲಿ ಅಥವಾ ಮಹಿಳೆಯೇ ಆಗಿರಲಿ ಅವರ ಏಕಾಂಗಿ ಜೀವನವನ್ನು ಕುಟುಂಬ ಜೀವನ ಎಂದು ಕರೆಯಲಾಗದು. ಇವರಿಬ್ಬರೂ ಒಟ್ಟಾಗಿ ಕೂಡಿ ಬಾಳಿದರೆ ಮಾತ್ರ ಅದು ಕುಟುಂಬವಾಗಬಲ್ಲದು. ಗಂಡ–ಹೆಂಡತಿ, ಅಪ್ಪ–ಅವ್ವ, ಅಣ್ಣ–ತಂಗಿ, ಗೆಳೆಯ–ಗೆಳತಿ ಇವರ ಸಹವಾಸದಲ್ಲಿ ಕುಟುಂಬದ ಅಸ್ತಿತ್ವವಿದೆ. ಇಲ್ಲಿ ಪರಸ್ಪರ ಸಹಜವಾದ, ನೈಸರ್ಗಿಕವಾದ ಪ್ರೀತಿ, ಪ್ರೇಮ, ಮಮತೆ, ಸೇವೆ, ತ್ಯಾಗದ ಗುಣಗಳು ವಿನಿಮಯ ಆಗುವುದರಿಂದ ಕುಟುಂಬಗಳು ರೂಪುಗೊಳ್ಳುತ್ತವೆ.

ಈ ಭೂಮಿಯಲ್ಲಿ ಮನುಷ್ಯ ಕಾಣಿಸಿಕೊಂಡಾಗಲೇ ಒಬ್ಬರು ಇನ್ನೊಬ್ಬರ ಆಸರೆಯನ್ನು ಬಯಸಿ ಜತೆಯಲ್ಲಿ ಇರಲು ಬಯಸಿದ್ದು ನಿಸರ್ಗಸಹಜ ಸಂಗತಿ. ಮನುಷ್ಯರಷ್ಟೇ ಅಲ್ಲ ಪ್ರಾಣಿ– ಪಕ್ಷಿ, ಕ್ರಿಮಿ–ಕೀಟಗಳೂ ಸಾಂಗತ್ಯವನ್ನು ಬಯಸಿ ಕುಟುಂಬವನ್ನು ಕಟ್ಟಿಕೊಳ್ಳುತ್ತವೆ.

ಈ ಹಿಂದಿನಿಂದ ನಡೆದುಬಂದಂತೆ, ಮನುಷ್ಯ ಸಮೂಹದಲ್ಲಿ ಹೆಚ್ಚು ಸದಸ್ಯರು ಜೊತೆಗೂಡಿ ಇರುವುದಕ್ಕೆ ಪ್ರೀತಿ, ಔದಾರ್ಯದಂಥ ಗುಣಗಳೇ ಕಾರಣವಾಗಿದ್ದವು. ಅಂದರೆ ಆ ಕುಟುಂಬದ ಸದಸ್ಯರ ಸಂಖ್ಯೆಯನ್ನು ಇಂತಹ ಗುಣಗಳೇ ನಿರ್ಧರಿಸುತ್ತಿದ್ದವು. ಆದರೆ ಎಂದು ಸ್ವಾರ್ಥ, ಸಂಕುಚಿತ ಮನೋಭಾವ ಹುಟ್ಟಿಕೊಂಡವೋ ಅಂದಿನಿಂದ ಕುಟುಂಬಗಳು ಒಡೆಯಲಾರಂಭಿಸಿದವು. ಕಾಲ ಬದಲಾದಂತೆ ಕೌಟುಂಬಿಕ ಪರಿಸರದಲ್ಲಿ ಹೊಂದಿಕೊಂಡು ಬಾಳುವ ಗುಣ ನಶಿಸತೊಡಗಿತು. ಅದರಿಂದ ದೊಡ್ಡ ದೊಡ್ಡ ಕುಟುಂಬಗಳು ಒಡೆದು ಚಿಕ್ಕ ಚಿಕ್ಕ ಕುಟುಂಬಗಳು ರೂಪುಗೊಂಡವು. ಆಧುನಿಕ ವೈಜ್ಞಾನಿಕ ಯುಗದಲ್ಲಿ ಎಷ್ಟೋ ದಂಪತಿ ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಇದಕ್ಕೆ ಕೆಲವು ಕಾರಣಗಳು ಇದ್ದಿರಬಹುದು. ಇನ್ನು ಕೆಲವು ದಂಪತಿ ತಮಗೆ ಮಕ್ಕಳೇ ಬೇಡವೆಂಬ ನಿರ್ಧಾರಕ್ಕೆ ಬರುವುದೂ ಇದೆ. ಇದಕ್ಕಿಂತ ವಿಚಿತ್ರವಾದ ಸಂಗತಿಯೆಂದರೆ, ಸ್ವತಃ ಮಕ್ಕಳನ್ನು ಪಡೆಯದೆ ಬಾಡಿಗೆ ತಾಯ್ತನದ (ಸರೊಗೆಸಿ) ಮೂಲಕ ಮಗುವನ್ನು ಪಡೆದುಕೊಂಡು ಬೆಳೆಸುವವರಿದ್ದಾರೆ. ಇದೆಲ್ಲ ಇಂದಿನ ವಿಜ್ಞಾನ, ತಂತ್ರಜ್ಞಾನದಲ್ಲಿನ ಪ್ರಗತಿಯ ಕಾರಣದಿಂದ ಬದಲಾದ ಮನೋಭಾವಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವ ಸ್ಥಿತಿಗತಿ.

ಇಂತಹ ಸಮಯದಲ್ಲಿಯೇ ತಂದೆ–ತಾಯಿ, ಅಕ್ಕ–ತಂಗಿ, ಅಣ್ಣ–ತಮ್ಮಂದಿರೊಂದಿಗೆ ಸಹ ಇರಲು ಬಯಸದ ಸಂಕುಚಿತ ಮನೋಭಾವ ಗಟ್ಟಿಗೊಂಡು, ಮನುಷ್ಯರನ್ನು ಮಾನವತೆಯ ಅಳಿವಿನತ್ತ ಕರೆದೊಯ್ಯು ತ್ತಿರುವ ಸ್ಪಷ್ಟವಾದ ಲಕ್ಷಣಗಳು ಗೋಚರಿಸುತ್ತಿವೆ. ಮದುವೆ ಎಂಬ ಸಂಸ್ಥೆಯೂ ಅಳಿವಿನತ್ತ ಸಾಗುತ್ತಿರುವುದು ಇನ್ನೊಂದು ದೊಡ್ಡ ದುರಂತ. ಹೊಂದಿಕೊಂಡು ಬಾಳುವ ಮನಸ್ಸಿಗೇ ಗ್ರಹಣ ಹಿಡಿದರೆ, ನಾವು ನಾಗರಿಕತೆ, ನೈಸರ್ಗಿಕ ವ್ಯವಸ್ಥೆಯಿಂದ ದೂರವಾಗುತ್ತೇವೆ. ಇದರಿಂದ ಮಾನವೀಯತೆಯನ್ನು
ಕಳೆದುಕೊಳ್ಳುತ್ತೇವೆ. ಇಂತಹ ಸ್ಥಿತಿಯಲ್ಲಿ ನಾವು ಮಾನವರಾಗಿ ಉಳಿಯಲು ಸಾಧ್ಯವಾದೀತೆ?

ಯಾವುದೇ ಕಾಲಘಟ್ಟವಿರಲಿ, ಎಂಥದ್ದೇ ಯುಗವಿರಲಿ, ಎಷ್ಟೇ ಪ್ರಗತಿಯ ಸಮಯವಾಗಿರಲಿ ಆಧುನಿಕ ಸಮಾಜಗಳಲ್ಲಿ ಕುಟುಂಬ ಎಂಬ ಘಟಕ ಇರಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಮಾನವರೆಂದು ಕರೆಯಲಾಗುವ ನಮ್ಮಲ್ಲಿ ಮಾನವೀಯ ಗುಣಗಳು ಇರಬೇಕಲ್ಲವೇ? ಮಾನವೀಯತೆ ಎಂಬ ಗುಣದ ಉಗಮವಾಗುವುದು ಕುಟುಂಬ ವ್ಯವಸ್ಥೆಯಲ್ಲಿ! ಈ ವ್ಯವಸ್ಥೆಯಲ್ಲಿ ಕುಟುಂಬವೇ ಗುರು, ಕುಟುಂಬವೇ ತಂದೆ–ತಾಯಿ, ಸಖ, ಸಹೋದರ! ಇಂತಹ ವ್ಯವಸ್ಥೆಯಲ್ಲಿ ಪ್ರೀತಿ, ಪ್ರೇಮ, ಮಮತೆ, ಹೊಂದಾಣಿಕೆಯ ಮನೋಭಾವವು ಕುಟುಂಬವನ್ನು ಕೂಡಿಸಿ ನಡೆಸುವ ದಿವ್ಯಶಕ್ತಿಗಳು. ಕುಟುಂಬ ವ್ಯವಸ್ಥೆಯಲ್ಲೇ ಮನುಷ್ಯನಿಗೆ ಸ್ವರ್ಗವಿದೆ. ಕುಟುಂಬದಲ್ಲಿ ಸದಸ್ಯರ ಉನ್ನತಿ–ಉತ್ಕರ್ಷ ಸಾಧ್ಯವಾಗುವಾಗ ನಾವೇಕೆ ಕುಟುಂಬ ವ್ಯವಸ್ಥೆಯಿಂದ ದೂರ ಹೋಗಬೇಕು?

ಹೌದು, ಕುಟುಂಬ ಜೀವನದಲ್ಲಿ ಸೌಂದರ್ಯವಿದೆ, ಸಾರ್ಥಕತೆ ಇದೆ. ಆದ್ದರಿಂದ ಕುಟುಂಬ ವ್ಯವಸ್ಥೆಯಲ್ಲಿ ಇದ್ದು ಅದನ್ನು ಉಳಿಸಬೇಕು, ಬೆಳೆಸಬೇಕು. ಆ ಮೂಲಕ ಮಾನವತೆಯನ್ನು ರಕ್ಷಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.