ಭಾರತದ ಔಷಧ ಉದ್ಯಮದಲ್ಲಿ ಹಾಥಿ ಸಮಿತಿಗೆ ವಿಶೇಷ ಮಹತ್ವವಿದೆ. ಔಷಧ ಉದ್ಯಮಕ್ಕೆ ಸರಿಯಾದ ದಿಕ್ಕು ಕೊಡಲು ಹಾಗೂ ಔಷಧಗಳು ಜನಸಾಮಾನ್ಯರ ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಸೂಚಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ, 1974ರಲ್ಲಿ ‘ಹಾಥಿ ಸಮಿತಿ’ ರಚಿಸಿತ್ತು. ರಾಜ್ಯಸಭಾ ಸದಸ್ಯರಾಗಿದ್ದ ಜಯಸುಖಲಾಲ್ ಹಾಥಿ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಸಮಿತಿಯ ವರದಿ 1975ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಯಿತು. ಅದಕ್ಕೆ ಈಗ 50ನೇ ವರ್ಷ.

ದೇಶದ ಔಷಧ ಉದ್ದಿಮೆ ವಲಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಹಾಥಿ ಸಮಿತಿ, ತನ್ನ ವರದಿಯಲ್ಲಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಐದು ದಶಕಗಳ ನಂತರವೂ ಆ ವರದಿಯಲ್ಲಿ ಇಂದಿಗೂ ಅತ್ಯಂತ ಪ್ರಸ್ತುತವಾದ ಅಂಶಗಳಿವೆ.

ದೇಶದ ಔಷಧ ಕೈಗಾರಿಕೆ ಯಾವ ದಿಕ್ಕಿನಲ್ಲಿ ಸಾಗಬೇಕು, ಯಾವ ರೀತಿಯಾಗಿ ಸ್ವಾವಲಂಬನೆಯನ್ನು ಹೊಂದಬಹುದು, ಔಷಧಗಳ ಬೆಲೆ ನಿಯಂತ್ರಣ ಯಾಕೆ ಮತ್ತು ಎಷ್ಟು ಮಹತ್ವ ಎನ್ನುವ ವಿಷಯಗಳನ್ನು ವರದಿಯಲ್ಲಿ ಕೂಲಂಕಷವಾಗಿ ವಿಶ್ಲೇಷಣೆ ಮಾಡಲಾಗಿದೆ.

ಹಾಥಿ ಸಮಿತಿಯ ಬಹುಮುಖ್ಯವಾದ ಸಲಹೆ, ಔಷಧಗಳ ‘ಬ್ರಾಂಡ್’ ಹೆಸರನ್ನು ಕ್ರಮೇಣವಾಗಿ ಕಡಿಮೆ ಮಾಡುವುದು; ಬ್ರಾಂಡ್ ಬದಲು ಔಷಧಗಳ ‘ಜೆನೆರಿಕ್’ ಹೆಸರನ್ನು ಹೆಚ್ಚು ಪ್ರಚಾರ ಮಾಡುತ್ತ, ಅದನ್ನೇ ಜಾರಿಯಲ್ಲಿ ತರುವುದು. ಜೆನೆರಿಕ್ ಹೆಸರನ್ನು ಜಾರಿಯಲ್ಲಿ ತರುವುದರಿಂದ, ವೈದ್ಯರು ಹೆಚ್ಚು ತರ್ಕಬದ್ಧ ಔಷಧವನ್ನು ಜನರಿಗೆ ಶಿಫಾರಸು ಮಾಡಬಹುದು. ಬ್ರಾಂಡ್ ಹೆಸರನ್ನು ಬಳಕೆ ಮಾಡುವುದರಿಂದ, ಬಹಳಷ್ಟು ವೈದ್ಯರಿಗೆ ಆ ಔಷಧದಲ್ಲಿ ಇರುವ ವೈಜ್ಞಾನಿಕ ಮಾಹಿತಿ ಸಿಗದಿರುವ ಸಾಧ್ಯತೆಯಿದೆ. ಬ್ರಾಂಡ್ ಹೆಸರು ಅನವಶ್ಯಕ ಹಾಗೂ ಬ್ರಾಂಡ್ ಹೆಸರಿನಲ್ಲಿ ಅವೈಜ್ಞಾನಿಕ ಔಷಧಗಳಿಗೆ ಪ್ರಚಾರ ಕೊಡಲೂಬಹುದು. ಬ್ರಾಂಡ್ ಹೆಸರಿನಲ್ಲಿ ಪ್ರಸ್ತುತ, ವಿಟಮಿನ್ ಮಿಶ್ರಣ ಹಾಗೂ ‘ಟಾನಿಕ್’ಗಳು ದೊಡ್ಡ ಪ್ರಮಾಣದಲ್ಲಿ ಮಾರಾಟ ಆಗುತ್ತಿರುವುದನ್ನು ಗಮನಿಸಬಹುದು.

ಬ್ರಾಂಡ್ ಔಷಧಗಳನ್ನು ಬರೆಯುವುದನ್ನು ಇಂದಿನ ಬಹುತೇಕ ವೈದ್ಯರು ರೂಢಿ ಮಾಡಿಕೊಂಡಿದ್ದಾರೆ ಹಾಗೂ ಅದನ್ನು ಸರಿಯಾದ ಕ್ರಮ ಎಂದು ಭಾವಿಸಿದ್ದಾರೆ. ಇದು ಖಂಡಿತವಾಗಿಯೂ ವೈದ್ಯಕೀಯ ಕಾಲೇಜಿನಲ್ಲಿ ಕಲಿತ ಅಭ್ಯಾಸವಲ್ಲ. ವೈದ್ಯಕೀಯ ಶಿಕ್ಷಣದಲ್ಲಿ ಕಲಿಸುವುದೆಲ್ಲ ಜೆನೆರಿಕ್ ಔಷಧವನ್ನೇ. ಔಷಧ ಕಂಪನಿಗಳು ತಮ್ಮ ಬ್ರಾಂಡ್ಗಳನ್ನು ಬಳಸುವಂತೆ ವೈದ್ಯರನ್ನು ಮರುಳು ಮಾಡುತ್ತವೆ. ಈ ಕಂಪನಿಗಳು
ತಮ್ಮ ಬ್ರಾಂಡ್ನ ಪ್ರಚಾರಕ್ಕಾಗಿ ಮಾಡುವ ಖರ್ಚನ್ನೆಲ್ಲ ರೋಗಿಯ ಮೇಲೆ ಹೇರುತ್ತವೆ. ಬ್ರಾಂಡ್ ಔಷಧಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ ಎಂದು ಕೆಲವು ವೈದ್ಯರು ವಾದಿಸುವುದೂ ಇದೆ. ಆದರೆ, ಔಷಧ ನಿಯಂತ್ರಣ ಅಧಿಕಾರಿಗಳು ಕಳಪೆ ಔಷಧಗಳನ್ನು ಗುರುತಿಸುವ ಸಂದರ್ಭಗಳಲ್ಲಿ, ಕಪ್ಪುಪಟ್ಟಿಗೆ ಸೇರುವ ಔಷಧಗಳೆಲ್ಲ ಬ್ರಾಂಡ್ ಔಷಧಗಳೇ ಆಗಿರುವುದನ್ನು ಗಮನಿಸಬೇಕು. ಸಾರಾಂಶ ಇಷ್ಟೇ: ಬ್ರಾಂಡ್ ಔಷಧಗಳು ಕಳಪೆಯಾಗಿರುವ ಸಾಧ್ಯತೆ
ಇರುತ್ತದೆ.

ಹಾಥಿ ಸಮಿತಿಯ ಅತ್ಯುತ್ತಮ ಸಲಹೆ– ಸೂಚನೆಗಳ ನಡುವೆಯೂ ಬ್ರಾಂಡ್ ಔಷಧಗಳ ಮೋಹದಿಂದ ವೈದ್ಯರನ್ನು ದೂರವಿಡುವುದು ನಮಗೆ ಸಾಧ್ಯವಾಗಿಲ್ಲ. ಔಷಧ ಕಂಪನಿಗಳಿಗಿಂತ ಹೆಚ್ಚಾಗಿ ವೈದ್ಯ ಸಂಘಟನೆಗಳೇ ಹಾಥಿ ಸಮಿತಿಯ ಶಿಫಾರಸನ್ನು ಜಾರಿಗೆ ತರುವಲ್ಲಿ ಅಡೆತಡೆ ಉಂಟು ಮಾಡುತ್ತಿವೆ. ಜೆನೆರಿಕ್ ಹೆಸರಿನಲ್ಲಿಯೇ ವೈದ್ಯರು ಔಷಧ ಬರೆಯಬೇಕೆಂದು ‘ರಾಷ್ಟ್ರೀಯ ವೈದ್ಯಕೀಯ ಆಯೋಗ’ ಹಲವು ಸುತ್ತೋಲೆಗಳನ್ನು ಹೊರಡಿಸಿದೆ. ಅದರಿಂದ ಏನೂ ಪ್ರಯೋಜನವಾಗಿಲ್ಲ. ವೈದ್ಯ ಸಂಘಟನೆಗಳು ಹಾಥಿ ಸಮಿತಿಯ ಶಿಫಾರಸುಗಳಿಗೆ ಬೆಂಬಲ ನೀಡಲಿಲ್ಲ. ಹಾಥಿ ಸಮಿತಿಯ ಅದೊಂದು ಶಿಫಾರಸು ಕಾರ್ಯರೂಪಕ್ಕೆ ಬಂದಿದ್ದಲ್ಲಿ, ಉತ್ತಮ ಗುಣಮಟ್ಟದ ಔಷಧಗಳು ಕೈಗೆಟಕುವ ಬೆಲೆಯಲ್ಲಿ ನಮಗೆ ಲಭಿಸುತ್ತಿದ್ದವು.

ಜೆನೆರಿಕ್ ಔಷಧಗಳನ್ನು ಬಳಕೆಯಲ್ಲಿ ತರಲು ಹಾಗೂ ಔಷಧ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ ಆಗಲು ಹಾಥಿ ಸಮಿತಿ ಹಲವು ಸಲಹೆ ನೀಡಿತ್ತು. ಬಹುರಾಷ್ಟ್ರೀಯ ಔಷಧ ಕಂಪನಿಗಳ ರಾಷ್ಟ್ರೀಕರಣಕ್ಕೆ ಸೂಚಿಸಿತ್ತು. ಸರ್ಕಾರಿ ಸ್ವಾಮ್ಯದ ಔಷಧ ಕಂಪನಿಗಳು ಅಥವಾ ಸಾರ್ವಜನಿಕ ವಲಯವು ಇನ್ನೂ ಹೆಚ್ಚು ಸ್ವಾವಲಂಬಿ ಆಗಲು ಮಾರ್ಗೋಪಾಯಗಳನ್ನು ಮುಂದಿಟ್ಟಿತ್ತು. ಆದರೆ, ಆ ಶಿಫಾರಸುಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನಗಳು ನಡೆಯಲಿಲ್ಲ. ಅದರ ಫಲವಾಗಿ, ನಮ್ಮ ದೇಶದ ಸಾರ್ವಜನಿಕ ಔಷಧ ವಲಯ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ.

‘ಮೂಲ ಔಷಧ’ (ಬಲ್ಕ್ ಡ್ರಗ್) ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿ ಇರಬೇಕು ಎಂದು ಹಾಥಿ ಸಮಿತಿ ಹೇಳಿತ್ತು. ಆದರೆ, ಮೂಲ ಔಷಧಗಳ ಉತ್ಪಾದನೆಗೆ ನಾವಿಂದು ಬಹಳಷ್ಟು ಮಟ್ಟಿಗೆ ಚೀನಾದ ಮೇಲೆ ಅವಲಂಬಿತರು.

ದೇಶದ ಔಷಧ ಉತ್ಪಾದನಾ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳು ಹಾಗೂ ಪರಿಹಾರದ ಬಗ್ಗೆ ಹಾಥಿ ಸಮಿತಿ ಐದು ದಶಕಗಳ ಹಿಂದೆಯೇ ಬೆಳಕು ಚೆಲ್ಲಿತ್ತು. ಐದು ದಶಕಗಳ ನಂತರವಾದರೂ ಹಾಥಿ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.