ಮೈಸೂರು: ಬೆಂಗಳೂರಿನ ನೆಟ್ಟಕಲ್ಲಪ್ಪ ಈಜುಕೇಂದ್ರದ (ಎನ್ಎಸಿ) ಬಾಲಕ ಹಾಗೂ ಬಾಲಕಿಯರ ತಂಡಗಳು ಶನಿವಾರ ಇಲ್ಲಿ ಆರಂಭವಾದ ಎನ್ಆರ್ಜೆ ರಾಜ್ಯಮಟ್ಟದ ಜೂನಿಯರ್ ಅಕ್ವೆಟಿಕ್ ವಾಟರ್ಪೊಲೊ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟವು.

ಸರಸ್ವತಿಪುರಂನ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಕರ್ನಾಟಕ ಈಜು ಸಂಸ್ಥೆಯು ಆಯೋಜಿಸಿದ್ದ ಸ್ಪರ್ಧೆಯ ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ‘ಎನ್ಎಸಿ’ ತಂಡಗಳು ಪಾರಮ್ಯ ಸಾಧಿಸಿದವು.

ಬಾಲಕಿಯರ ಸೆಮಿಫೈನಲ್ ಹಣಾಹಣಿಯಲ್ಲಿ ಎನ್ಎಸಿ ತಂಡದವರು 19–4 ಗೋಲುಗಳಿಂದ ಸೀ ವರ್ಲ್ಡ್ ಈಜು ಕೇಂದ್ರ ತಂಡವನ್ನು ಸೋಲಿಸಿದರೆ, ಮತ್ತೊಂದು ಪಂದ್ಯದಲ್ಲಿ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡವು 20–8 ಗೋಲುಗಳಿಂದ ಸ್ವಿಮ್ ಲೈಫ್ ಕ್ಲಬ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿತು.

ಬಾಲಕರ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಎನ್ಎಸಿ ತಂಡದವರು 10–2 ಗೋಲುಗಳಿಂದ ಬಿಎಸಿ ತಂಡವನ್ನು ಮಣಿಸಿದರೆ, ಸ್ಟಾರ್ ಈಜು ಕೇಂದ್ರದ ತಂಡದವರು 14– 8 ಗೋಲುಗಳ ಅಂತರದಿಂದ ಸ್ವಿಮ್ ಲೈಫ್ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು.

ಐದು ಕ್ಲಬ್ಗಳ ಬಾಲಕರ 5 ಹಾಗೂ ಬಾಲಕಿಯರ 4 ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಗಳು ಭಾನುವಾರ (ಇಂದು) ನಡೆಯಲಿದ್ದು, ಕಂಚಿನ ಪದಕಕ್ಕಾಗಿ ಸ್ವಿಮ್ಲೈಫ್ ವಿರುದ್ಧ ಸೀವರ್ಲ್ಡ್ ಬಾಲಕಿಯರ ತಂಡ ಹಾಗೂ ಸ್ವಿಮ್ ಲೈಫ್ ವಿರುದ್ಧ ಬಸವನಗುಡಿ ಈಜು ಕೇಂದ್ರಗಳ ಬಾಲಕರ ತಂಡಗಳು ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.