ಸೋಮವಾರ, ಸೆಪ್ಟೆಂಬರ್ 26, 2022
22 °C

ವಾಚಕರ ವಾಣಿ| ಪ್ರಯಾಣಿಕರ ಗೋಳು ಕೇಳುವವರಾರು?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಪಾವಗಡದಲ್ಲಿ ಇತ್ತೀಚೆಗೆ ಖಾಸಗಿ ಬಸ್‌ವೊಂದು ಅಪಘಾತಕ್ಕೀಡಾಯಿತು. ಮೊನ್ನೆ ಮೊನ್ನೆ ಶಿರಾದ ಕಳ್ಳಂಬೆಳ್ಳ ಬಳಿ ಕ್ರೂಸರ್ ಅಪಘಾತಕ್ಕೆ ಒಳಗಾಯಿತು. ಎರಡೂ ಸಂದರ್ಭಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡರು. ಈ ಅಪಘಾತಗಳಿಗೆ ಆಸನದ ಸಾಮರ್ಥ್ಯಕ್ಕಿಂತ ಮಿತಿಮೀರಿ ಜನರನ್ನು ತುಂಬಿಸಿಕೊಂಡಿದ್ದೇ ಕಾರಣ ಎಂದು ಸಾರಿಗೆ ಇಲಾಖೆ ಸಮಜಾಯಿಷಿ ನೀಡಿತು. ಹಾಗಿದ್ದರೆ ಹೀಗೆ ಆಸನದ ಮಿತಿ ಇರುವುದು ಖಾಸಗಿ ವಾಹನಗಳಿಗೆ ಮಾತ್ರವೇ? ಸರ್ಕಾರಿ ವಾಹನಗಳಿಗೆ ಇಲ್ಲವೇ?

ಬೆಂಗಳೂರಿನಿಂದ ಪಾವಗಡಕ್ಕೆ ಹೋಗುವ ಬಸ್ಸುಗಳನ್ನು ಸಾರಿಗೆ ಇಲಾಖೆಯವರು ಒಮ್ಮೆ ನೋಡಲಿ. ತುಮಕೂರಿನಿಂದ ದೊಡ್ಡಬಳ್ಳಾಪುರಕ್ಕೆ ದಿನನಿತ್ಯ ಪ್ರಯಾಣಿಸುವವರ ಗೋಳಂತೂ ಹೇಳತೀರದು. ಮೂರು ಬಸ್ಸಿನ ಪ್ರಯಾಣಿಕರನ್ನು ಒಂದೇ ಬಸ್ಸಿನಲ್ಲಿ ತುಂಬಿರುತ್ತಾರೆ. ಸೀಮಿತ ಸಂಖ್ಯೆಯಲ್ಲಿ ಬಸ್ಸುಗಳು ಇರುತ್ತವೆ. ಏಕೆ ಹೀಗೆ ಎಂದು ತುಮಕೂರು ಬಸ್‌ ಘಟಕದವರನ್ನು ಕೇಳಿದರೆ, ತಮಗೆ ಗೊತ್ತಿಲ್ಲ, ದೊಡ್ಡಬಳ್ಳಾಪುರ ಘಟಕದವರನ್ನು ಕೇಳಿ ಎನ್ನುತ್ತಾರೆ. ದೊಡ್ಡಬಳ್ಳಾಪುರ ಘಟಕದ ಸಿಬ್ಬಂದಿಯಿಂದ ‘ಯಾರಿಗಾದರೂ ಹೇಳ್ಕೋ ಹೋಗು, ಏನಾದರೂ ಮಾಡ್ಕೋ ಹೋಗು’ ಎಂಬಂಥ ಉತ್ತರ ಬರುತ್ತದೆ. ಇನ್ನು ಚಾಲಕ, ನಿರ್ವಾಹಕರಿಂದಲೂ ಇದೇ ಬಗೆಯ ಉತ್ತರ ದೊರೆಯುತ್ತದೆ. ಹಾಗಿದ್ದರೆ ಪ್ರಯಾಣಿಕರು ಯಾವ ಕಾರಣಕ್ಕೆ, ಎಷ್ಟು ಸಮಯ ಹೀಗೆ ತೊಂದರೆ ಅನುಭವಿಸಬೇಕು? ಪಾವಗಡ ಮತ್ತು ಕಳ್ಳಂಬೆಳ್ಳದಂತಹ ದುರಂತ ಮರುಕಳಿಸಬಾರದೆಂದರೆ ದೊಡ್ಡಬಳ್ಳಾಪುರ-ತುಮಕೂರು ಮಾರ್ಗದಲ್ಲಿ ಬಸ್‌ಗಳ ಸೇವೆಯನ್ನು ಹೆಚ್ಚಿಸಬೇಕು.

– ಶಾಂತಕುಮಾರಿ ಕೆ., ತುಮಕೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು