ಬೇರೆ ಯಾರಾದರೂ ಅದನ್ನು ಮಾಡುವವರಿದ್ದಾರೆ ಎಂದಾದರೆ ಮಾಡಲಿ ಬಿಡಿ. ಹೇಗಿದ್ದರೂ ಅವರಿಗೆ ಅದು ಸಾಧ್ಯ ಎಂದಾಯಿತಲ್ಲ. ಅನಗತ್ಯ ನಾನೇಕೆ ಮತ್ತೆ ಕಸರತ್ತುಪಡಬೇಕು ?

ಯಾವುದೇ ಕೆಲಸದ ಬಗ್ಗೆ ನಮ್ಮ ಧೋರಣೆಯೇ ಹಾಗಿರುತ್ತದೆ. ಈ ವಿಷಯದಲ್ಲಿ ಅವರಿವರೆಂಬುದಿಲ್ಲ. ಸರ್ವೇಸಾಮಾನ್ಯ ಎಲ್ಲರದ್ದೂ ಅದೇ ಮನೋಭಾವ. ಯಾರು ಮಾಡಲೀ ಬಿಡಲಿ ನಾನಂತೂ ಈ ಕೆಲಸವನ್ನು ಮಾಡಲೇಬೇಕೆಂದು ಒಬ್ಬರೂ ಯೋಚಿಸುವುದಿಲ್ಲ. ಸಾಧ್ಯವಾದಷ್ಟು ಹೊಣೆಗಾರಿಕೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸುವುದರಲ್ಲೇ ನಮ್ಮ ಬುದ್ಧಿವಂತಿಕೆಯನ್ನು ಖರ್ಚು ಮಾಡುತ್ತೇವೆ.

ಇದು ಎಲ್ಲರೂ ಮಾಡಬಹುದಾದ ಕೆಲಸದ ಬಗ್ಗೆಯಾಯಿತು. ಇನ್ನು ಅಸಾಧ್ಯವಾದು? ಅಯ್ಯೋ ಬಿಡಿ, ಸಾಧಗ್ಯವಿರುವುದನ್ನೇ ಮಾಡುವುದಿಲ್ಲ ಎಂದದ ಮೇಲೆ ಅಸಾಧ್ಯವನ್ನು ಸಾಧ್ಯವಾಗಿಸುವ ಪ್ರಶ್ನೆ ಎಲ್ಲಿಂದ ಬಂತು ? ಈ ಹಂತದಲ್ಲಿ ನಾವುಗಳು ಯೋಚಿಸುವುದು ಹೇಗೆಂದರೆ–ಯಾರೂ ಮಾಡಲಿಕ್ಕೆ ಸಾಧ್ಯವಾಗದಿರುವಂಥದ್ದು ಅಂದರೆ ಅದರ ಉಸಾಬರಿ ನನಗೇಕೆ ? ಬೇರಾರೂ ಅಂಥ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದಾದ ಮೇಲೆ ನನಗೇಕೆ ಅಂಥ ತಲೆಹರಟೆ? ನನ್ನದೆಷ್ಟೋ ಅಷ್ಟನ್ನು ನೋಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಆಮೇಲೆ ಇರುವ ನೆಮ್ಮದಿಯನ್ನೂ ಹಾಳು ಮಾಡಿಕೊಂಡಂತಾದೀತು.... ಇತ್ಯಾದಿ ಇತ್ಯಾದಿ.

ಇಂಥ ಮುನ್ನೆಚ್ಚರಿಕೆಯನ್ನು ನಮಗೆ ಯಾರೂ ಹೇಳಿಕೊಡಬೇಕಾದುದಿಲ್ಲ. ಇಷ್ಟೇ ಅಲ್ಲ. ಇಂಥ ನಿರ್ಧಾರ ಕೈಗೊಂಡು ನಮ್ಮನ್ನು ನಾವೇ ಬುದ್ಧಿವಂತರೆಂದು, ಜಾಣತನ ಪ್ರದರ್ಶಿಸಿದೆವೆಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತೇವೆ. ಈ ಮನೋಭಾವಕ್ಕಿಂತ ಭಿಕ್ಷುಕನ ಸಾಧನೆ ಎಷ್ಟೋ ಆದೀತು. ಆತ ಕೊನೇ ಪಕ್ಷ ತಾನು ತಿನ್ನುತ್ತಿರುವುದು ಏನೆಂಬುದು ಅರಿವಿಲ್ಲದಿದ್ದರೂ, ಬೇರೆಯವರು ಹಾಕಿದ್ದನ್ನು ಕಣ್ಮುಚ್ಚಿ ತಿನ್ನುವ ಧೈರ್ಯ ಪ್ರದರ್ಶಿಸಬಲ್ಲ.

ನಿಜವಾದ ಸಾಹಸಿ ಎನಿಸಿಕೊಳ್ಳೋದು ಸುಲಭ. ಈ ಕೆಲಸವನ್ನು ಬೇರೆ ಯಾರಾದರೂ ಮಾಡಬಹುದು ಎಂದಾದರೆ ಅದು ನನ್ನಿಂದ ಏಕೆ ಸಾಧ್ಯವಾಗುವುದಿಲ್ಲ ಎಂದು ತನ್ನನ್ನು ತಾನೆಯೇ ಪ್ರಶ್ನಿಸಿಕೊಂಡು ಮುನ್ನುಗ್ಗುವವನನ್ನು ಸಮಾಜ ಸಾಹಸಿ, ಸಾಧಕ ಎಂದು ಗುರುತಿಸುತ್ತದೆ. ಹಾಗೆ ಬದುಕಿನಲ್ಲಿ ನುಗ್ಗಬೇಕು. ಬೇರೆಯವರು ಮಾಡಲೀ ಬಿಡಲಿ, ಅವರೆಲ್ಲರಿಗಿಂತ ಮೊದಲು ಅದನ್ನು ಮಾಡಿ ಮುಗಿಸಿರಬೇಕೆಂಬ ಸಂಕಲ್ಪದೊಂದಿಗೆ ಆತ ಗುರಿ ಮುಟ್ಟಿರುತ್ತಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೇರಾರಿಂದಲೂ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಅಂಥದ್ದನ್ನು ಖಂಡಿತಾ ನಾನೇ ಮಾಡಬೇಕು. ಮಾಡಿ ತೋರಿಸಬೇಕು ಎಂಬ ಛಲದೊಂದಿಗೆ ಸಾಧನೆಗೆ ಇಳಿಯುತ್ತಾನೆ.

ಜೀವ ಚೈತನ್ಯ ಚಿಮ್ಮುವುದೆಂದರೆ ಇದೇ. ಅಂಥ ಚೈತನ್ಯ ನಮ್ಮಲ್ಲಿ ಸದಾ ಚಿಮ್ಮುತ್ತಲೇ ಇರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.