ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 24–12–1995

Last Updated 23 ಡಿಸೆಂಬರ್ 2020, 20:51 IST
ಅಕ್ಷರ ಗಾತ್ರ

ಹರಿಯಾಣ: ಶಾಲಾ ವಾರ್ಷಿಕ ಉತ್ಸವದಲ್ಲಿ ಬೆಂಕಿ– 312 ಸಾವು
ಸಿರ್ಸಾ, ಡಿ. 23 (ಪಿಟಿಐ)–
ಹರಿಯಾಣದ ಸಿರ್ಸಾ ಜಿಲ್ಲೆಯ ಮಂಡಿ ದಬ್ವಾಲಿ ಪಟ್ಟಣದ ಮದುವೆ ಹಾಲ್‌ನಲ್ಲಿ ಇಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದಾದ ಭೀಕರ ಬೆಂಕಿ ದುರಂತದಲ್ಲಿ ಕನಿಷ್ಠ 312 ಜನರು ಸತ್ತು ಇತರ 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸತ್ತವರಲ್ಲಿ ಬಹುತೇಕ ಮಂದಿ ಶಾಲಾ ಬಾಲಕರು ಮತ್ತು ಮಹಿಳೆಯರು.

ಸ್ಥಳೀಯ ದೇವ್‌ ಸರ್ಕಾರಿ ಶಾಲೆಯ ಸಮಾರಂಭದಲ್ಲಿ ಸುಮಾರು 1,300 ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಪಾಲ್ಗೊಂಡಿದ್ದರು.

ಶುಕ್ಲಾ ಹೇಳಿಕೆಗೆ ಭುಗಿಲೆದ್ದ ಪ್ರತಿಕ್ರಿಯೆ
ಬೆಂಗಳೂರು, ಡಿ. 23–
ನ್ಯಾಯಮಂಡಲಿಯ ಆದೇಶದಂತೆ ತಮಿಳುನಾಡಿಗೆ 11 ಟಿಎಂಸಿ ಅಡಿ ನೀರನ್ನು ಕರ್ನಾಟಕ ಬಿಡದೇ ಹೋದರೆ ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವ ಅರ್ಥದಲ್ಲಿ ಬೆದರಿಕೆ ಒಡ್ಡಿರುವ ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವ ವಿ.ಸಿ. ಶುಕ್ಲಾ ಅವರ ಹೇಳಿಕೆಗೆ ರಾಜ್ಯದಾದ್ಯಂತ ತೀಕ್ಷ್ಣವಾದ ಪ್ರತಿಕ್ರಿಯೆ ಉಂಟಾಗಿದೆ. ಕೇಂದ್ರ ಸಚಿವರು ಒಂದು ರಾಜ್ಯದ ವಕೀಲರಂತೆ ಮಾತನಾಡುತ್ತಿರುವುದನ್ನು ಸಾರ್ವತ್ರಿಕವಾಗಿ ಖಂಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT