ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 27–2–1996

Last Updated 26 ಫೆಬ್ರುವರಿ 2021, 17:15 IST
ಅಕ್ಷರ ಗಾತ್ರ

ಪಾಕ್ ಸಮರ ಮನೋಭಾವ ರಾಷ್ಟ್ರಪತಿ ಖಂಡನೆ

ನವದೆಹಲಿ, ಫೆ. 26– ಪಾಕಿಸ್ತಾನ ನಿರಂತರವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿಕೊಳ್ಳುವ ಮತ್ತು ಯುರೇನಿಯಂ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಕಾರ್ಯವನ್ನು ಮುಂದುವರಿಸಿರುವುದು ಆತಂಕಕಾರಿಯಾಗಿದೆ. ಪಾಕಿಸ್ತಾನದ ಈ ಯತ್ನವು ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವುದರಿಂದ ಶಸ್ತ್ರಾಸ್ತ್ರ ಪೈಪೋಟಿಗೆ ಎಡೆಕೊಡುವ ಸಂಭವ ಇದೆ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ಇಂದು ಪಾಕ್‌ನ ಸಮರ ಉನ್ಮತ್ತ ಮನೋಭಾವವನ್ನು ತರಾಟೆಗೆ ತೆಗೆದುಕೊಂಡರು.

ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅವರು ಇಂದು ಹತ್ತನೇ ಲೋಕಸಭೆಯ ಕೊನೆಯ ಮತ್ತು ಸಂಕ್ಷಿಪ್ತ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಹವಾಲ: ರಾವ್ ಹೆಸರು ಬಹಿರಂಗ ಅರ್ಜಿ ತಿರಸ್ಕೃತ

ನವದೆಹಲಿ, ಫೆ. 26 (ಯುಎನ್‌ಐ)– ಹವಾಲ ಹಗರಣದಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಬಗ್ಗೆ ಎಸ್‌.ಕೆ. ಜೈನ್ ನೀಡಿರುವ ಹೇಳಿಕೆಯನ್ನು ಬಹಿರಂಗಪಡಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT