ಬುಧವಾರ, ಅಕ್ಟೋಬರ್ 20, 2021
24 °C

25 ವರ್ಷಗಳ ಹಿಂದೆ: ಶನಿವಾರ 12.10.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಾವತಿಯೇ ಮುಖ್ಯಮಂತ್ರಿ: ಕಾಂಗ್ರೆಸ್ ಷರತ್ತಿಗೆ ರಂಗ ನಕಾರ

ನವದೆಹಲಿ, ಅ. 11 (ಪಿಟಿಐ)– ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಆದರೆ, ಕಾಂಗ್ರೆಸ್ಸಿನ ಈ ಷರತ್ತಿಗೆ ಸಂಯುಕ್ತರಂಗ ಒಪ್ಪಿಲ್ಲ. ಈ ಮಧ್ಯೆ ಮಾಯಾವತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಸಹಿತ ಯಾರದೇ ಬೆಂಬಲ ಪಡೆಯಲು ತಾವು ಸಿದ್ಧ ಎಂದು ಬಿಎಸ್‌ಪಿ ನಾಯಕ ಕಾನ್ಷಿರಾಂ ಪ್ರಕಟಿಸಿದ್ದು, ಉತ್ತರಪ್ರದೇಶದಲ್ಲಿ ರಾಜಕೀಯ ಸ್ಥಿತಿ ತೀರಾ ಅನಿಶ್ಚಯದ ತಿರುವು ಪಡೆದಿದೆ.

‘ಯಾವುದೇ ಪಕ್ಷ ನಮಗೆ ಅಸ್ಪೃಶ್ಯವಲ್ಲ. ಸರ್ಕಾರ ರಚಿಸಲು ನಾವೂ ಎಲ್ಲ ಯತ್ನಗಳನ್ನು ನಡೆಸಲಿದ್ದೇವೆ’ ಎಂದು ಬಿಜೆಪಿಯೂ ಹೇಳಿದ್ದು, ಈಗ ಎಲ್ಲರ ಕಣ್ಣು ರಾಜ್ಯಪಾಲರ ಮೇಲಿದೆ.

ರಾವ್ ವಿಚಾರಣೆಗೆ ವಿಶೇಷ ಕೋರ್ಟ್

ನವದೆಹಲಿ, ಅ. 11 (ಪಿಟಿಐ, ಯುಎನ್ಐ)– ಪಿ.ವಿ. ನರಸಿಂಹ ರಾವ್ ಆರೋಪಿಯಾಗಿರುವ ಲಕ್ಕೂ ಭಾಯಿ ವಂಚನೆ ಪ್ರಕರಣ ಮತ್ತು ಸೇಂಟ್ ಕಿಟ್ಸ್ ಪ್ರಕರಣದ ವಿಚಾರಣೆಯನ್ನು ದೆಹಲಿಯ ಭದ್ರತಾ ವಲಯಕ್ಕೆ ಸೇರಿದ ವಿಶೇಷ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು