ಆಲಮಟ್ಟಿಯಲ್ಲಿ ಮೊದಲ ಬಾರಿಗೆ 515 ಮೀ. ನೀರು ಸಂಗ್ರಹ

ವಿಜಾಪುರ, ಸೆಪ್ಟೆಂಬರ್ 10– ಆಲಮಟ್ಟಿ ಜಲಾಶಯದ ಮಟ್ಟ ಇಂದು ಮಧ್ಯಾಹ್ನ 515 ಮೀಟರ್ಗೆ ತಲುಪಿದೆ. ಸುಪ್ರೀಂ ಕೋರ್ಟ್ ಈಚೆಗೆ ಆಲಮಟ್ಟಿ ಜಲಾಶಯದಲ್ಲಿ 519.06ರವರೆಗೆ ನೀರು ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದು, ಸದ್ಯ 515 ಮೀಟರ್ವರೆಗೆ ನೀರು ಸಂಗ್ರಹಿಸಲಾಗಿದೆ.

1997ರಲ್ಲಿ ಜಲಾಶಯದ ಮಟ್ಟ 514 ಮೀಟರ್ ಇತ್ತು. ಇದೇ ಮೊದಲ ಬಾರಿ 515 ಮೀಟರ್ ತಲುಪಿದೆ. ನೀರನ್ನು 519 ಮೀಟರ್ವರೆಗೆ ಸಂಗ್ರಹಿಸಿದರೆ ಹಿನ್ನೀರಿನಿಂದ ಹೆಚ್ಚಿಗೆ ಯಾವ ತೊಂದರೆಯೂ ಆಗಲಾರದು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರಾಯೋಗಿಕವಾಗಿ ಸದ್ಯಕ್ಕೆ 515 ಮೀಟರ್ವರೆಗಷ್ಟೇ ನೀರು ನಿಲ್ಲಿಸಲಾಗಿದೆ.

ನಾಳೆ ಬಾಗಲಕೋಟೆಗೆ ಭಾರಿ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಅವರು ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಜಲಾಶಯದ ಮಟ್ಟವನ್ನು 519 ಮೀಟರ್ವರೆಗೆ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.